ತುಂಬಿದ ಕೆರೆಗೆ ಅಂಬಿಗ ಹಂಗೋಲಹಾಕಿ,
ಬಲಿಯ ಬೀಸಿದಂತೆ ತುಂಬುತ್ತ
ಕೆಡೆವುತ್ತಲಿದ್ದ ಲಿಂಗವ ನೋಡಿ
ಕೊಡೆವೆಂದು ಜಂಗಮದ ನೆಲೆಯ
ಕಾಣದೆ ಸಂದು ಹೋದರಲ್ಲ
ಈ ಲೋಕವೆಲ್ಲವು ಲಿಂಗದ ನೆನೆಯ
ಕಾಂಬುದಕ್ಕೆ ಹರಿಗೋಲನೆ ಹರಿದು,
ಹುಟ್ಟ ಮುರಿದು, ಆ ಬಲೆಯೊಳಗೆ ಸಿಕ್ಕಿದ
ಖಗ ಮೃಗವನೆ ಕೊಂಡು, ಆ ಬಲಿಯನೆ ಕಿತ್ತು,
ಅಂಬಿಗ ಸತ್ತು, ತೊರೆ ಬತ್ತಿ,
ಮೆಯ್ಮರೆದಲ್ಲದೆ ಆ ಮಹಾ ಘನವ
ಕಾಣಬಾರದೆಂದರು ನಮ್ಮ
ಅಪ್ಪಣಪ್ರಿಯ ಚನ್ನಬಸವಣ್ಣಾ.
*****
Latest posts by ಲಿಂಗಮ್ಮ (see all)
- ಲಿಂಗಮ್ಮನ ವಚನಗಳು – ೧೦೧ - February 14, 2017
- ಲಿಂಗಮ್ಮನ ವಚನಗಳು – ೧೦೦ - February 7, 2017
- ಲಿಂಗಮ್ಮನ ವಚನಗಳು – ೯೯ - January 31, 2017