Home / ಕವನ / ವಚನ

ವಚನ

ಬೆಳಕೀವ, ಬದುಕೀವ, ಎಲ್ಲ ಜೀವ ದೊಳಗಣ ಜೀವ, ಸೂರ್‍ಯ ದೇವನೆ ತಾ ಬಿಸಿಯಾಗಿ ಬಲು ಬತ್ತಿಸುವ ನೀರ ಹೊತ್ತಿಸುವ ಹಸುರ ಬಾಳಿನೊಳು ನೋವಿರದ ನಲಿವು ಕೊಡುವೊಡೆ ಸೋಲುತಿಹ ದೇವನೊಲವಿನೊಳಿಪ್ಪೆನ್ನ ಮಾತೇನು ? – ವಿಜ್ಞಾನೇಶ್ವರಾ *****...

ಅವರಿವರ ವಿಕೃತಿಯನುಸುರದೆಲೆ ಪೊರೆವೆಮ್ಮ ಪ್ರಕೃತಿ ಗುಣವನಷ್ಟೇ ತೆರೆದು ಪೇಳಲೆಷ್ಟೊಂದು ಶ್ರಮಿಸಿದರು ಖರೆ ಸೋತೆನಾ ದೀಪದಂತೆ ಬೆಳಕೀವ ವರದೀಪ ಬೇಡದಿಹ ಬಿಸಿಯ ಕೊಡುವಂತೆ – ವಿಜ್ಞಾನೇಶ್ವರಾ *****...

ನಾನಂದು ಕೃಷಿಯೆಂದು ನೆಡಲಾ ತೆಂಗನೊಂ ದನದು ತಪ್ಪೆಂದು ಕೂಡಿದ್ದೆ ಸಸ್ಯಗಳ ವನದಂತೆ ಸಾವಿರಕು ಮಿಕ್ಕಿ ಜಾತಿಗಳದುವೆ ಸಾನುರಾಗದಿ ಸಾವಯವವೆನಿಸಿತ್ತಂತೆನ್ನ ಕೃಷಿಕ ವನ ಬರಬರುತೆ ವ್ಯಾಪಿಸಿತೆನ್ನ ಬದುಕನ್ನೆ – ವಿಜ್ಞಾನೇಶ್ವರಾ *****...

ಪ್ರಕೃತಿ ಎನ್ನನ್ಯಾಕೆ ಬರೆಸಿಹುದು ? ಯಾಕಾನು ಬರೆಯುವೆನೆಂದು ಕೇಳಿದೊಡೆ ಆಕಾನು ಯಾಕಷ್ಟು ತರುಲತೆಯ ಬೆಳೆಸಿಹುದೆಂ ದುಕೇಳಲು ಬೇಕು. ತರತರದ ಜೀ ವಕಾಮಕಪ್ಪಂತೇನೆಲ್ಲವನು ಬೆಳೆಸಿರ್ಪ ಪ್ರಕೃತಿಯೆ ಮತಿಯಾಗಿ ಬರೆಸಿಹುದೆನ್ನ – ವಿಜ್ಞಾನೇಶ್ವರ *...

ಆನು ಪೇಳಿದೆಲ್ಲವನು ಮಾಡದೊಡೇನಂತೆ ? ಆನಿಲ್ಲ ಪೇಳಿದೆಲ್ಲವನು ಆನು ಮಾಡಿ ದೆನೆಂದಿಲ್ಲ ಆನೆಷ್ಟು ಮಾಡಿಹನೆಂದು ಆನು ಪೇಳುವುದಲ್ಲ, ಬುದ್ಧಿಮಾತನು ಎನಗಾನೇ ಪೇಳಿ ಆದನಾನೇ ಕೇಳಿ ಆನೆಷ್ಟು ಮಾಡಿದರಷ್ಟು ಲಾಭವೆನಗೆ – ವಿಜ್ಞಾನೇಶ್ವರಾ *****...

ಪರಿಪರಿ ನೆನೆದೊಡಾ ಐದೆನ್ನ ಕಾಯದೇ ? ಪ್ರಕೃತಿಯೊಳೈದಕ್ಕೆ ಉನ್ನತದ ಬೆಲೆಯುಂಟು ಪಂಚಭೂತಂಗಳೆಲ್ಲ ಜೀವದೊಳುಂಟು ಪ್ರಾಣಂಗಳೆಮ್ಮೊಳೈದು ಇಂದ್ರಿಯಂಗಳೈದು ಪಿಡಿವ ನಡೆದ ಬೆರಳೈದು ಅಂತೆನ್ನ ಕವನಕು ಪಂಕ್ತಿಗಳೈದು – ಅದುವೆ ಕಾಯಲಿ ಎಂದೆನುತ &#821...

ಪೇಳಲಾಪರಿ ಕಿರಿದಾಗಿ, ಬೇಕಲ್ಲಾ ಹಿರಿ ಪ್ರತಿಭೆ? ಪೇಳಿಹರೆಮ್ಮ ಹಿರಿಯರವರ ಜೀವನ ದೊಳುಂಡನುಭವವ ಮೂರ್‌ನಾಕು ಸಾಲಿ ನೊಳು, ಮಂತ್ರದೊಳು, ಗಣಿತದೊಳು ಕೇಳಿದೆನಗಂತೆ ಕವನದ ಕಂತೆಯೊಳಿಡಲು ಬಾಳಿನನುಭವ ಸಾಲದೆನ್ನ ಸಾಲುಗಳೈದಾಗಿಹವು -ವಿಜ್ಞಾನೇಶ್ವರಾ ***...

ಕವನವೆನ್ನದಿದ್ಯಾಕೆ ಪ್ರಶ್ನೋತ್ತರದಂತಿಹುದು? ಜೀವನವೆಂದೊಡೇನದರ ಅಂದಾನಂದವದೇನು? ನಾವೇನು ಮಾಡಿದೊಡೇನು? ಮಾಡದೊಡೇನು? ತವಕದೊಳೇಳ್ವ ಪ್ರಶ್ನಾವಲಿಯ ಮೇಲೆಮ್ಮ ಜೀವನವೆ ನಿಂದಿಹುದದರಿಂದ ನಿಲಿಸಿಹೆನೆನ್ನ ಕವನಗಳ ಪರಿಪರಿಯ ಪ್ರಶ್ನೆಗಳ ಮೇಲೆ – ...

ತನು ಕರಗಿತ್ತು. ಮನ ನಿಂದಿತ್ತು. ಉಲುಹು ಅಡಗಿತ್ತು. ನೆಲೆಗೆ ನಿಂದಿತ್ತು. ಮನ ಪವನ ಬಿಂದು ಒಡಗೂಡಿತ್ತು. ಉರಿ ಎದ್ದಿತ್ತು. ಊರ್ಧ್ವ ಕ್ಕೋಡಿತ್ತು. ಶರಧಿ ಬತ್ತಿತ್ತು. ನೊರೆ ತೆರೆ ಅಡಗಿತ್ತು. ಅಷ್ಟ ಮದವೆಲ್ಲ ಹಿಟ್ಟುಗುಟ್ಟಿತ್ತು. ಕರಣಂಗಳೆಲ್ಲ ಉ...

ಬೆಟ್ಟ ಬೆಂದಿತ್ತು. ಬಿದಿರುಗಣ್ಣು ಒಡೆದಿತ್ತು. ಸುತ್ತನೋಡಿದರೆ ನಿರಾಳವಾಯಿತ್ತು. ಕತ್ತಲೆ ಹರಿಯಿತ್ತು. ಮನ ಬತ್ತಲೆಯಾಯಿತ್ತು. ಚಿತ್ತ ಮನ ಬುದ್ಧಿ ಏಕವಾದವು. ಎಚ್ಚತ್ತು ನೋಡಿದರೆ, ಬಚ್ಚಬರಿಯ ಬೆಳಗಲ್ಲದೆ, ಕತ್ತಲೆಯ ಕಾಣಬಾರದು ಕಾಣಾ ಅಪ್ಪಣಪ್ರಿಯ...

1...2425262728...36

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...