
ಹೇಗೆಂದು ಅಳೆವುದು ಈ ಹಾಳು ಹಸಿವನ್ನು ಒಮ್ಮೆ ಇತ್ತಿತ್ತ ಒಮ್ಮೆ ಅತ್ತತ್ತ ಅಳತೆಗೋಲುಗಳೇ ಪೊಳ್ಳು. ಲೆಕ್ಕವಿರದಷ್ಟು ರೊಟ್ಟಿ ತುಂಬಿಸಿದರೂ ಹಸಿವಿನ ತಕ್ಕಡಿ ತಟ್ಟೆ ಏರುವುದಿಲ್ಲ ತುಲಾಭಾರ ಮುಗಿಯುವುದಲ್ಲ. *****...
ಸಾಯಬೇಕೆಂದುಕೊಳ್ಳೋಣವೆಂದರೆ ನೆಪಗಳೆ ಸಿಗುತ್ತಿಲ್ಲ; ಅವಳು ಜಿಗುಪ್ಸೆಯ ಕೊರಳಿಗೆ ಕುಣಿಕೆ ಬಿಗಿದಿದ್ದಾಳೆ. *****...
ಪರಸ್ಪರ ರೊಟ್ಟಿ ಹಸಿವುಗಳ ಅಂತರಂಗ ಅನಾವರಣಗೊಳದೇ ಅಪರೂಪದ ಸಮರಸವಿಲ್ಲ. ಮುಕ್ತಗೊಳದೇ ಅರಿವಿಲ್ಲ. ನದಿ ಮೌನವಾಗಿ ಹರಿಯುತ್ತದೆ ಎರಡೂ ದಡಗಳು ಸುಮ್ಮನೆ ಬಿದ್ದುಕೊಂಡಿರುತ್ತವೆ. *****...
ಕನಸಿನಂಗಡಿ ತುಂಬ ಚಿತ್ತಾರದ ಕನಸುಗಳು… ಅವಳದು ಖಾಲಿ ಜೇಬು *****...
ಹಸಿವು ಮಾತನಾಡುವಾಗ ರೊಟ್ಟಿ ಮೌನವಾಗಿದ್ದು ರೊಟ್ಟಿ ಮಾತನಾಡುವಾಗ ಹಸಿವು ಮೌನವಾಗಿದ್ದರೆ ಮಾತಿಗೂ ಮೌನಕ್ಕೂ ಬೆಲೆ ಪರಸ್ಪರ ಒಟ್ಟಾಗಿ ಗುದ್ದಾಡಿದರೆ ಮಾತು ಮೌನಗಳೇ ಅರ್ಥಹೀನ. *****...













