
ಮತ್ತೊರ್ವನಿಂತೊರೆದನ್ : “ಅದನೊಪ್ಪೆನಾವನುಂ ಸಂತಸದಿ ತಾಂ ಕುಡಿವ ಕುಡಿಕೆಯನು ಮುರಿಯಂ; ಆದರದಿ ಜಾಣ್ಮೆಯಿಂದೊಡರಿಸಿದ ಬಟ್ಟಲನು ಕೋಪದಿಂದೊಡೆವುದೇನದು ತಕ್ಕುದಲ್ಲಂ.” *****...
ಇನ್ನೊರ್ವನಿಂತೆಂದನ್ : “ಈ ನೆಲದ ಮಣ್ಣಿಂದೆ ಎನ್ನೊಡಲನಿಂತೆಸಗಿ ಸೊಗಸುಗೊಳಿಸಿದವಂ ಮರಳಿ ಮಣ್ಣೊಳಗೆನ್ನ ಬೆರೆವಂತೆ ಮಾಡಿದೊಡೆ ಅಚ್ಚರಿಯದೇನದರೊಳದೆ ತಕ್ಕುದಲ್ತೆ?” *****...
ಅಚ್ಚರಿಯನೇನೆಂಬೆ ನಾ ಮಣ್ಣು ಜನರೊಳಗೆ ಕೆಲರು ಮಾತಾಡುವರು, ಕೆಲರಾಡದವರು. ಅವರೊಳಾತುರನೋರ್ವನಿಂತೊಮ್ಮೆ ಕೇಳಿದನು: “ಕುಂಬಾರನಾರಯ್ಯ, ಕುಂಬ ತಾನಾರು?” *****...
ಕೇಳು ರಂಜಾನ್ ಹಬ್ಬದಂತ್ಯದೊಳದೊಂದು ದಿನ, ಶುಭ ಚಂದ್ರನಿನ್ನು ಮುದಿಸದಿರೆ, ಸಂಜೆಯಲಿ ನಾನೋರ್ವ ಕುಂಬಾರನಂಗಡಿಯ ಬಳಿ ನಿಂತು ಮಣ್ಣ ಮಾಟಗಳ ಸಾಲ್ಗಳ ನೋಡುತಿರ್ದೆಂ. *****...
ಕೀಳು ಮಣ್ಣಿಂದೆ ನರಕುಲವ ನಿರವಿಸಿದವನೆ, ಸಗ್ಗದೊಳಮಪ್ಸರೆಯರನು ನಿಲಿಸಿದವನೆ, ನರನ ಮುಖವನು ಕಪ್ಪೆನಿಪ್ಪೆಲ್ಲ ಕಲುಷಕ್ಕ ಮವನೊಳ್ ಕ್ಷಮಾವರವ ನೀಡು-ಮೇಣ್ ಬೇಡು. *****...
ಹಳ್ಳಕೊಳ್ಳಗಳಿಂದೆ-ಕಳ್ಳು ಹೆಂಡಗಳಿಂದೆ- ಎನ್ನ ಹಾದಿಯೊಳೆಡವಿಬೀಳಿಸುವ ಬಿದಿಯೆ, ನೀನೆನ್ನ ಮೇಲೆ ದುರಿತದ ಹೊರೆಯ ಹೊರಿಸಿಂತು ಕರುಮ ಚಕ್ರದೊಳೆನ್ನ ಸಿಲುಕಿಪುದು ತರವೆ? *****...
ಇದು ನಿಸದವೆನಗೀಗ : ಪರತತ್ವದೀಪದಲಿ ನಲುಮೆಯಾನುಂ ಮೆರೆಗೆ, ಮುನಿಸಾನುಮರಿಗೆ; ದೇಗುಲದೊಳದನರಸಿ ಕಾಣದಿವುದಕಿಂತ ಮಧುಗೃಹದೊಳದರಿಂಬ ಮೂಸುವುದೆ ಲೇಸು. *****...
ತೆವಳಿ ಬದುಕುತ ಸಾಯುತಿರುವೆಮ್ಮ ಕವಿದಿರುವ ಗಗನವೆಂಬೀ ಬೋರಲಿರುವ ಬೋಗುಣಿಗೆ ಕೈಯೆತ್ತಿ ವರಕೆಂದು ಮೊರೆಯಿಟ್ಟು ಫಲವೇನು? ನಿನ್ನ ನನ್ನ ವೊಲೆ ಅದು ಕೈಸಾಗದಿಹುದು. *****...
ನಿಲದೆ ಚಲಿಸುವ ಬೆರಲದೊಂದು ಬರೆವುದು ಶಿರದಿ; ಬರೆದು ಸರಿವುದು. ನಮ್ಮ ಬಕುತಿ ಯುಕುತಿಗಳು ಪಿಂತದನು ಕರೆದಳಿಸಲಾರವರೆ ಬಂತಿಯನು; ನಿನ್ನ ಕಣ್ಣೀರೊಂದು ಮಾತನಳಿಯಿಸದು. *****...
ಆಡುವವನೆಸೆವಂತೆ ಬೀಳ್ಳ ಚಂಡಿಗದೇಕೆ ಆಟದೊಳಗಣ ಸೋಲು ಗೆಲವುಗಳ ಗೋಜು? ನಿನ್ನ ನಾರಿತ್ತಲೆಸೆದಿಹನೊ ಬಲ್ಲವನಾತ ನೆಲ್ಲ ಬಲ್ಲವನವನು-ಬಲ್ಲನೆಲ್ಲವನು. *****...













