
ಹುಲ್ಲನ್ ಬೆಳೆಯೋದ್ ಭೂಮಿ ಆದ್ರೆ ಭೂಮಿನ್ ಮಾಡಿದ್ಯಾರು? ರಾತ್ರೀನ್ ಬೆಳಗೋನ್ ಚಂದ್ರ ಆದ್ರೆ ಚಂದ್ರನ್ ತಂದೋರ್ ಯಾರು? ಹಾಲ್ನಲ್ ಬೆಣ್ಣೆ ಹ್ಯಾಗಿರುತ್ತೆ ಕಣ್ಣೀಗ್ ಕಾಣದ ಹಾಗೆ? ಮೋಡ್ದಲ್ ನೀರು ಹ್ಯಾಗ್ ಸೇರುತ್ತೆ ಭಾರ ಆಗದ ಹಾಗೆ? ಅಷ್ಟೊಂದ್ ಅಗಲ...
ನೋಡಿದರೆ ದೂರಕ್ಕೆ ಕೆಂಪನೆಯ ಹೆಣ್ಣು ತೆಳ್ಳಗೇ ಉದ್ದಕ್ಕೆ ಜಡೆಯು ಇದೆ ಎನ್ನು ತವರಿನಲ್ಲಿರುವಾಗ ಹಸಿದೆನ್ನ ಬಣ್ಣ ಬಿಟ್ಟು ಮುದಿಯಾದಾಗ ಕೆಂಪು ಕಾಣಣ್ಣ ಬೈಯುವರು ನನ್ನನ್ನು ಬಲುಜೋರು ಎಂದು ಬೊಬ್ಬೆ ಹೊಡೆಸುತ್ತಾಳೆ ಉರಿಮಾರಿ ಎಂದು ನಿಮ್ಮ ಅಡಿಗೆಯ ಮ...
ಡೊಳ್ಳು ಹೊಟ್ಟೆ ಗುಂಡ ತಿಂಡಿ ತಿನ್ನೋಕ್ ಬಂದ, ಹಸಿವು ಇಲ್ಲ ನಂಗೆ ಚೂರೇ ತಿಂತೀನ್ ಅಂದ. ಒಂದು ತಟ್ಟೆ ಉಪ್ಪಿಟ್ಟು ಎರಡೇ ನಿಮಿಷ, ಢಂ! ಮೂರೇ ದೋಸೆ. ನಾಕೇ ರೊಟ್ಟಿ ಐದೇ ಇಡ್ಲಿ ಢಂ! ಆರು ಒಡೆ ಢಂ ಏಳು ಉಂಡೆ ಢಂ, ಎಂಟೊ, ಒಂಬತ್ತೊ ಪೂರಿ ಅಷ್ಟೆ ಢಂ ಢ...
ಅಪ್ಪ ಹೊರಗಡೆ ಹೋದಾಗ ಕೋಟು ಬೂಟು ಹಾಕ್ಕೊಂಡು ಅಪ್ಪನ ಕಪ್ಪನೆ ಕನ್ನಡಕ ಕಣ್ಣಿಗೆ ಸರಿಯಾಗ್ ಇಟ್ಕೊಂಡು ನಾನೇ ಅಪ್ಪ ಆಗ್ತೀನಿ ದಪ್ಪನೆ ದನೀಲಿ ಕೂಗ್ತೀನಿ ಅಣ್ಣ ಅಕ್ಕ ಎಲ್ಲರಿಗೂ ಸಖತ್ತು ರೋಪು ಹಾಕ್ತೀನಿ! ಅಣ್ಣನ್ ಕರೆದು ಕೇಳ್ತೀನಿ: “ಯಾಕೋ ಸ...
ಹಕ್ಕೀ ಮಾತ್ರ ಮೊಟ್ಟೇನ ಇಡುತ್ತೆ ಅನ್ನೋದ್ ಸುಳ್ಳಮ್ಮಾ, ತೆಂಗಿನ ಮರಗಳು ತಲೆಯಲ್ಲಿ ಮೊಟ್ಟೆ ಇಟ್ಟಿಲ್ವೇನಮ್ಮಾ? ಸೇಂಗಾ ಗಿಡಗಳು ನೆಲದಲ್ಲಿ ಕಪ್ಪನೆ ಮಣ್ಣಿನ ಬುಡದಲ್ಲಿ ಗೊಂಚಲು ಗೊಂಚಲು ಮೊಟ್ಟೇನ ಇಟ್ಟಿಲ್ವಾಮ್ಮಾ ಮರೆಯಲ್ಲಿ? ಹಲಸಿನ ಮರಾನ ನೋಡಮ್ಮ...
ಗುರ್ ಅಂತೀನಿ ಹುಲಿಯಲ್ಲ ಜೋರಾಗ್ ಓಡ್ತೀನ್ ಮೊಲವಲ್ಲ. ದುಡ್ಡಿದ್ರೆ ನಾ ಸಿಗ್ತೀನಿ ಔಟ್‌ಹೌಸಲ್ಲೆ ಇರ್‍ತೀನಿ ನಿನಗೋ ಎರಡೇ ಕಣ್ಣುಗಳು ನನಗೋ ಎರಡಿವೆ ಬೆನ್ನಲ್ಲೂ ರೆಪ್ಪೆಯೆ ಇಲ್ಲದ ಕಣ್ಣುಗಳು ಸ್ವಿಚ್ಚನು ಒತ್ತಲು ಹೊಳೆಯುವುವು ಪ್ರಾಣಿಯ ಹಾಗೇ ಕಾಲ...
ಮೈಯೆ ಇಲ್ಲ, ಬರೀ ತಲೆ, ನೆತ್ತಿಗೆ ಜುಂಗಿನ ಬಿಗೀ ಬಲೆ. ನಾ ಯಾರೆಂದು ಹೇಳುವಿಯಾ, ಸೋತರೆ ಕಾಲಿಗೆ ಬೀಳುವಿಯಾ? ಮುಂಜಿ ಗಿಂಜಿ ಆಗಿಲ್ಲ ಜನಿವಾರಾನೇ ಹಾಕಿಲ್ಲ ಆದ್ರೂ ತಲೇಲಿ ಪಿಳ್ ಜುಟ್ಟು ಹೇಳ್ ನೋಡೋಣ ನನ್ನ ಗುಟ್ಟು? ದೇವರಿಗೋ ನಾ ಬಲು ಇಷ್ಟ ನನಗೋ ...
ಅಪ್ಪ ಅಪ್ಪ ನಿನ್ನ ನಾನು ಡ್ಯಾಡಿ ಅನ್ನೋಲ್ಲ, ಅಪ್ಪ ಅಂತ್ಲೇ ನಿನ್ನ ಕರೆದರೆ ಚೆನ್ನಾಗಿರೊಲ್ವ? ಮಮ್ಮಿ ಅಂದ್ರೆ ಏನೋ ಕಮ್ಮಿ ಅಮ್ಮಾ ಅನ್ಲಾಮ್ಮ? ಅಮ್ಮ ಅಂದ್ರೆ ಜಾಮೂನ್ ತಿಂದ್ಹಾಂಗ್ ಇರತ್ತೆ ಕಣಮ್ಮಾ! ಅಜ್ಜೀ ಅಂದ್ರೆ ಅಜ್ಜೀಗ್ ಖುಷಿ ಪುಟ್ಟಾ! ಅಂತಾ...
ಹೇಳಿ ಮಿಸ್, ಹೇಳಿ ಮಿಸ್ ಹಕ್ಕಿಯ ಹಾಗೇ ತೆಂಗಿನ ಮರಕ್ಕೆ ಎಷ್ಟೋ ಗರಿಗಳು ಇವೆಯಲ್ಲ? ಹಕ್ಕಿ ಯಾಕೆ ಹಾರುತ್ತೆ ತೆಂಗು ಯಾಕೆ ಹಾರಲ್ಲ? ಹೇಳಿ ಮಿಸ್, ಹೇಳಿ ಮಿಸ್ ಕಾಲೇ ಇಲ್ಲ ಸೂರ್ಯಂಗೆ ಹ್ಯಾಗೆ ಪ್ರಯಾಣ ಮಾಡ್ತಾನೆ? ಚಂದ್ರ ಕೂಡ ಸಮಯಕ್ಕೆ ತಪ್ಪದೆ ಹ್ಯ...
ನಾನೇ ಟೀಚರ್ ಆಗಿದ್ರೆ ಅಪ್ಪ ಅಮ್ಮ ಎಲ್ಲರಿಗೂ ಸರಿಯಾಗ್ ಪರೀಕ್ಷೆ ಮಾಡ್ತಿದ್ದೆ ಕರೆಕ್ಟು ಮಾರ್ಕ್ಸ್ ಕೊಡ್ತಿದ್ದೆ! ಅಪ್ಪನ ಜೋರಿಗೆ ಇಪ್ಪತ್ತು ಅಜ್ಜಿಯ ಮುದ್ದಿಗೆ ಎಪ್ಪತ್ತು ಚಿವುಟೀ ಗುದ್ದಿ ಅಳಿಸೋ ಅಣ್ಣನ ಕೀಟಲೆ ಬುದ್ಧಿಗೆ ಒಂಬತ್ತು! ಆಟ ಆಡಿಸೋ...













