ನೋಡಿದರೆ ದೂರಕ್ಕೆ
ಕೆಂಪನೆಯ ಹೆಣ್ಣು
ತೆಳ್ಳಗೇ ಉದ್ದಕ್ಕೆ
ಜಡೆಯು ಇದೆ ಎನ್ನು
ತವರಿನಲ್ಲಿರುವಾಗ
ಹಸಿದೆನ್ನ ಬಣ್ಣ
ಬಿಟ್ಟು ಮುದಿಯಾದಾಗ
ಕೆಂಪು ಕಾಣಣ್ಣ
ಬೈಯುವರು ನನ್ನನ್ನು
ಬಲುಜೋರು ಎಂದು
ಬೊಬ್ಬೆ ಹೊಡೆಸುತ್ತಾಳೆ
ಉರಿಮಾರಿ ಎಂದು
ನಿಮ್ಮ ಅಡಿಗೆಯ ಮನೆಗೆ
ಬರುವೆ ರಂಗಣ್ಣ
ಪ್ರತಿ ದಿನಾ ನಿನಗೆ ನಾ
ಬೇಕೆ ಬೇಕಣ್ಣ
ನಾ ಯಾರು ಎಂದು ನೀ ಹೇಳು ನೋಡೋಣ
ಹೇಳಿದರೆ ನೀ ಜಾಣ
ಇಲ್ಲವೋ ಕೋಣ!
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.