ಸಂತಾನಿಗೆ ಅವಳಿ-ಜವಳಿ ಮಕ್ಕಳು ಜನಿಸಿದವು. ಸಂತೋಷದಿಂದ ಅವಕ್ಕೆ ಟಿನ್ ಅಂಡ್ ಮಾರ್ಜಿನ್ ಎಂಬ ಹೆಸರುಗಳನ್ನು ಇಟ್ಟನು. ಎರಡನೆಯ ಬಾರಿಯೂ ಅವಳಿ ಜವಳಿ. ಅವಕ್ಕೆ ಪೀಟರ್ ಅಂಡ್ ರಿಪೀಟರ್ ಎಂದು ಹೆಸರು ಇಟ್ಟ. ಮೂರನೆಯ ಸಲವೂ ಅವಳಿ ಜವಳಿ. ಅವಕ್ಕೆ ಮಾಕ್ಸ್ ಅಂಡ್ ಕ್ಲೈಮಾಕ್ಸ್ ಎಂಬ ಹೆಸರಿಟ್ಟು ಖುಷಿಪಟ್ಟ. ನಿರೀಕ್ಷೆಗೂ ಮೀರಿ ನಾಲ್ಕನೆಯ ಬಾರಿಯೂ ಅವಳಿ-ಜವಳಿ ಜನಿಸಬೇಕೆ! ನಿರಾಶನಾಗದೆ ಬಹಳ ಉತ್ಸಾಹದಿಂದ ಆ ಮಕ್ಕಳಿಗೆ ಟೈರ್ಡ್ ಅಂಡ್ ರಿಟೈರ್ಡ್ ಎಂಬ ಹೆಸರಿಟ್ಟು ವಿಶ್ರಾಂತಿಗೆ ಮೊರೆಹೊಕ್ಕ!
***