ಕವಿತೆ

-ಹಸ್ತಿನಾಪುರದಲ್ಲಿ ಧೃತರಾಷ್ಟ್ರನಿಗೆ ಗಾಂಧಾರಿ ಮತ್ತು ದಾಸಿಯರಿಂದ ದುರ್ಯೋಧನ ದುಶ್ಯಾಸನಾದಿಯಾಗಿ ನೂರೊಂದು ಮಂದಿ ಮಕ್ಕಳು ಜನಿಸಿ ಸಂತಸವನ್ನುಂಟುಮಾಡಿದ್ದರೆ, ಅತ್ತ ಪಾಂಡುವು ನಿಯೋಗಪದ್ಧತಿಯಲ್ಲಿ ಕುಂತಿಯಿಂದ ಯುಧಿಷ್ಠಿರ, ಭೀಮ, ಅರ್ಜುನರೆಂಬ ಮೂರ...

ಅಮ್ಮನೊಂದು ಮುದ್ದಿನ ಪಂಚ ಕಲ್ಯಾಣಿ ಬೆಕ್ಕಿನ ಮರಿಯನೊಂದು ಸಾಕಿದಳು ತಟ್ಟೆ ಹಾಲು ಹಾಕಿದಳು ಕಣ್ಣನು ಮುಚ್ಚುತ ಕುಡಿವದು ಹಾಲನು ಬಂದು ಸೇರುವುದು ಬೆಚ್ಚನೆ ಮಡಿಲನು ಇಲಿಗಳ ಹಿಡಿವುದು ಜಿರಲೆಯ ತಿನುವುದು ಮಿಯಾಂವ್ ಎನುತಲೆ ಮೆಚ್ಚುಗೆ ಕೇಳುವುದು ಅಮ್...

-ಭೀಷ್ಮನ ಸೂಚನೆಯ ಮೇರೆಗೆ ಮಕ್ಕಳ ಫಲಕ್ಕಾಗಿ ಸಿದ್ಧರಿಂದ ಚಿಕಿತ್ಸೆ ಪಡೆಯಲೆಂದು ಪತ್ನಿಯರಾದ ಕುಂತಿ ಮತ್ತು ಮಾದ್ರಿಯರೊಂದಿಗೆ ಹೊರಟ ಪಾಂಡುರಾಜನು, ಮಾರ್ಗಮಧ್ಯದಲ್ಲಿ ವಿಶ್ರಮಿಸುತ್ತಿರುವಾಗ ಜಿಂಕೆಗಳ ರೂಪದಲ್ಲಿದ್ದ ಮುನಿದಂಪತಿಗಳನ್ನು ಕೊಂದಂತೆ ಕನ...

ನಾವೆಲ್ಲ ಒಂದೇ ನಾಡೆಲ್ಲ ನಮದೇ ವೇಷ ಭಾಷೆ ಬೇರೆ ಬೇರೆ ಹರಿಯುವ ನೀರು ಬೀಸೋ ತಂಬೆಲರು ಕೇಳುತಿಹವು ಹೇಗೆ ಬೇರೆ? ಜಾತಿ ಮತಗಳು ಆರಾಧ್ಯ ದೈವಗಳು ಹೇಗಿದ್ದರೇನು? ದೇವರೊಂದೇ ಶಾಲೆ ನೂರಾರು ಒಂದೇ ನಮ್ಮ ಗುರು ಬೋಧನೆಯು ಮಾತ್ರ ಒಂದೇ ಹಿರಿಯರ ಭಿನ್ನಮತ ಅ...

-ಹಿರಿಯನಾದ ಧೃತರಾಷ್ಟ್ರನಿಗೆ ಗಾಂಧಾರದೇಶದ ಗಾಂಧಾರಿಯನ್ನು ವಿವಾಹ ಮಾಡಿದ ನಂತರ ಭೀಷ್ಮನು, ಯುವರಾಜನಾದ ಪಾಂಡುವಿಗೆ ಯದುವಂಶದ ಶೂರಸೇನನ ಮಗಳೂ ಕುಂತೀಭೋಜನ ಸಾಕುಮಗಳೂ ಆದ ಪೃಥೆಯೆಂಬ ಪೂರ್ವನಾಮದ ಕುಂತಿಯನ್ನು ತಂದು ಮದುವೆ ಮಾಡಿದನು. ಆದರೆ, ಅವಳಿಗೆ...

ಬುಗುರಿಯ ಆಡಿಸೊ ಕಾಲ ಬರುವದು ತಪ್ಪದೆ ಆ ಜಾಲ ರಂಗನು ಅಪ್ಪಗೆ ದುಂಬಾಲು ಬುಗುರಿ ನನಗೆ ಬೇಕೆನಲು ಅಪ್ಪನು ಹೋದನು ಪೇಟೆಗೆ ಬಣ್ಣದ ಬುಗುರಿಯ ರಂಗನಿಗೆ ತಂದುಕೊಟ್ಟನು ಚಾಟಿ ಸಹಿತ ದಿನದೂಡಿದ ಕನಸು ಕಾಣುತ ಚಾಟಿಯ ಭರ ಭರ ಸುತ್ತುತ್ತ ರಂಗನು ನಡೆದ ಮಿತ್...

-ಹಿರಿಯನಾದ ಧೃತರಾಷ್ಟ್ರನ ಮದುವೆಯನ್ನು ರಾಜಕುಮಾರಿ ಗಾಂಧಾರಿಯೊಂದಿಗೆ ನೆರವೇರಿಸಿದರಾದರೂ ಆ ದಂಪತಿಗಳಲ್ಲಿ ಅನ್ನೋನ್ಯತೆಯ ಕೊರತೆಯಾಯಿತು. ಆದರೆ ಹಿರಿಯರಾರೂ ಅದರ ಬಗ್ಗೆ ತಲೆಕೆಡಿಸಿಕೊಳ್ಳದೆ ಯುವರಾಜನಾದ ಪಾಂಡುವಿಗೂ ಅನುರೂಪಳಾದ ಹೆಣ್ಣನ್ನು ತಂದು ...

ಸಿದ್ಧನ ಅಪ್ಪ ಅವನು ಬೆಪ್ಪ ಹಗಲಿಡೀ ಮೈಮುರಿ ದುಡಿಯುವನು ಹಗಲು ಮಲಗಲು ಚಂದ್ರನು ನಗಲು ಗಪ್ಪನೆ ಗಡಂಗಿಗೆ ಹೊರಡುವನು ಕಂಠ ಪೂರ್ತಿ ಕುಡಿದು ಭರ್ತಿ ಓಲಾಡುತ ಮನೆಗೆ ಬರುವನು ಹೆಂಡತಿ ಮಕ್ಕಳ ಬಡಿದು ಗೋಳು ಹೊಯ್ದುಕೊಳುತ ಕೂಗಾಡುವನು ಗಲಾಟೆ ಗದ್ದಲ ರಸ್...

-ವ್ಯಾಸಮಹರ್ಷಿಯ ಕೃಪೆಯಿಂದ ಶಂತನು ಮತ್ತು ಸತ್ಯವತಿಯರ ಪುತ್ರನಾದ ವಿಚಿತ್ರವೀರ್ಯನ ಮಡದಿಯರಾದ ಅಂಬಿಕೆ ಮತ್ತು ಅಂಬಾಲಿಕೆಯರ ಗರ್ಭದಲ್ಲಿ ಜನಿಸಿದ ಧೃತರಾಷ್ಟ್ರ ಮತ್ತು ಪಾಂಡುಕುಮಾರರು ದಾಸಿಯ ಮಗನಾದ ವಿದುರನೊಂದಿಗೆ ಬೆಳೆದು ದೊಡ್ಡವರಾಗಲು, ಅವರಿಗೆ ...

ಸೀಗಿ ಹುಣ್ಣಿವೆ ಬಂದಿತ್ತು ಸಕ್ಕರೆ ಅಚ್ಚು ಮಾಡಿತ್ತು ರಂಗಿಯ ತಾಯಿ ತಂದಳು ತರ ತರ ಸಕ್ಕರೆ ಅಚ್ಚುಗಳ ಲಿಂಗ ತೇರು ಜೋರಿತ್ತು ಪೂಜಿಸಿ ಹೊಟ್ಟೆ ಸೇರಿತ್ತು ಜಿಂಕೆ ಕೋಳಿ ಹಸುಗಳ ಭರ್ಜರಿ ಆಯಿತು ಜಗಳ ಆರತಿ ತಟ್ಟೆ ಹಿಡಿದ ರಂಗಿ ಹೊರಗಡೆ ಹೆಜ್ಜೆ ಇಟ್ಟಳ...

1...89101112...31

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...