ಅಲಿ ಸೂತ್ತರದಾಟಾ ಐಸುದದಿ ಅಲಾವಿ ಬಲುದಾಟಾ                         ||ಪ|| ಕಲಿಯೊಳಗ ಹೆಚ್ಚಾದಿತು ಕರ್ಮವು ಕೊಲಿಯುಕ್ಕಿ ಬರಬರಿತು ಭೂಮಿಗೆ ದುಷ್ಕಾಳದ ಮಾಟ ಐಸುರದಿ ಅಲಾವಿ ಬಲುದಾಟಾ                       ||ಅ.ಪ.|| ನೊಂದಿತು ಬಹುಮಂದಿ ಗ...

ಹಿಂದೆ ಹೇಗೆ ಚಿಮ್ಮುತ್ತಿತ್ತು ಕಣ್ಣ ತುಂಬ ಪ್ರೀತಿ! ಈಗ ಯಾಕೆ ಜ್ವಲಿಸುತ್ತಿದೆ ಏನೋ ಶಂಕೆ ಭೀತಿ! ಜೇನು ಸುರಿಯುತಿತ್ತು ನಿನ್ನ ದನಿಯ ಧಾರೆಯಲ್ಲಿ, ಕುದಿಯುತಿದೆ ಈಗ ವಿಷ ಮಾತು ಮಾತಿನಲ್ಲಿ. ಒಂದು ಸಣ್ಣ ಮಾತಿನಿರಿತ ತಾಳದಾಯ್ತೆ ಪ್ರೇಮ? ಜೀವವೆರಡು...

ಹುಟ್ಟಿನಿಂದ ಆ ಚಟ್ಟ ಮಟ್ಟ ಈ ಬಟ್ಟ ಬಯಲಿನಾಟ ಜಗದ ಸೊಗದ ಬೇರಾದ ಬಂಧವಿದು ಸೃಷ್ಟಿಕರ್ತನಾಟ ಹೆಣ್ಣು: ಕಾಯಿ ಬೆಳೆದು ದೊರೆಗಾಯಿಯಾಗುತಿರುವಾಗ ಬೇರೆ ಬಣ್ಣ ಯಾರ ಕಣ್ಣು ತಾಕೀತು ಎಂದು ಅಡಗುವಾ ನಡುವು ಸಣ್ಣ ಅಂಗ ಅಂಗದಲಿ ಆ ಅನಂಗನಾಡುವನು ಮಂಗನಾಟ ಉಬ್...

ಕರ್ಣಬಂದು ಕರ್ಬಲದಲಿ ಪಾರ್ಥಾ ವರ್ನಕಂಡು ಕದನಕ ನಿಂತ ಸು-       ||ಪ|| ವರ್ಣಪೀಠ ಮದೀನ ಶಾರದಿ ಪರ್ವ ಅಶ್ವನೇರಿದನೆಂತು             ||ಅ.ಪ.|| ಭಾಪುರೆ ಅರ್ಜುನ ತಪ್ಪಿಸಿ ಹರಿತ ವರ್ನ ಕೋಪ ತಿಳಿ ಕುರುಕ್ಷೇತ್ರದಲಿ ಭಾಪುರೆ ನಿನ್ನನು ಹುಡಕುತ ಬಂ...

ವರ್ಗ: ಕವನ ಲೇಖಕ: ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ ಪುಸ್ತಕ: ಕೀಲಿಕರಣ: ಕಿಶೋರ್‍ ಚಂದ್ರ ವ್ಯಾಕರಣ ದೋಷ ತಿದ್ದುಪಡಿ:   ನಿನ್ನ ಹೂಬನದಲ್ಲಿ ಮಾಲಿ ಮಾಡಿಕೊ ನನ್ನ ಕನ್ನಯ್ಯಾ, ಓ ಕನ್ನಯ್ಯಾ, ನಿನ್ನ ಶ್ರೀಚರಣಗಳ ಹಾದಿ ಬೆಳೆಸುವೆ ವನವ ಕನ್ನಯ್ಯ...

ಚಾರೋ ಯಾರೋ ಅಲಿ ಪಾದಕ್ಕೆರಗಿ                 !|ಪ|| ಧರಿಸ್ಥಲದಿ ವಿರಾಟ ನಗರದಲ್ಲಿ ಪಾಂಡವರ ಗುರುತವು ತಿಳಿದುಬಂದು ಇರಲಿಕ್ಕಾಗಿ ತ್ವರಿತದಿ ಸಾಗಿ ಕೌರವರನ್ನು ನೀಗಿ ಧರಿ ಭಾರಕ್ಕಾಗಿ ಸಾರಿ ಬೀಳಬೇಕನ್ನುತ ದಕ್ಷಿಣಭಾಗಕ್ಕೇರಿ  ||೧|| ಮಾರ್ಗ ಹಿ...

ಒಲವಿನ ಬೇಗೆಯ ಬೀಸುಗೋಲಿನ ಬಾಸಾಳಗಳ ತಾಳಲಾರೆ ಬಾರೆ ಮನ್ಮಥನ ಚೆಂದುಟಿ ನಿನ್ನ ಚೆನ್ನೈದಿಲೆ ಮೈಯನೆಲ್ಲ ಮುದ್ದಿಟ್ಟು ರಂಗೇರಿಸಿದೆ ಭಾವೋದ್ವೇಗದ ಸೆಳೆಮಿಂಚು ಉಕ್ಕಿಹರಿದು ಬಾಯಿ ಕಣ್ಣುಗಳ ಮುದ್ರಿಸಿದೆ ನರನರಗಳನುದ್ರೇಕಿಸಿದೆ ಮದಿರೆಯ ಮತ್ತೊಂದು ಮದನ...

ಯಾ ಇಮಾಮ ಹಸನೈನ ಎನ್ನುತಲಿ ಭೂಮಿ ಸ್ಥಲದಲಿ ಯುವಜಾತ ನೇಮಗೊಂಡು ವನವಾಸ ಹೊರಟನು ವಿರಾಟನಲ್ಲಿ ಇದ್ದನು ಜೀತಾ ||ಪ|| ಬಗಿಯನರಿಯದೆ ಶಕುನಿ ಸಾರಿದ ಆಗ ಪಾಂಡು ಪುಣ್ಯಕದಾತಾ ವಿಗಡ ಕಾಳಿಕಾ ಬಂದು ಕಾಡುತಿರೆ || ಆ. ಪ.|| ಜಗದೊಳಗೆ ದ್ರೌಪದಿ ಸೋತಾ ಮುಕ್ತ...

ಐಸುರ ಮೋರುಮ ಎರಡರ ಮಧ್ಯದಿ ನಾಶವಾಯಿತು ಲಂಕಾದ್ರಿ ಪುರಾ ಭಾಸುರ ಕಿರಣವ ನುಂಗಿದ ಹನುಮನು ಈಸಿ ಅಸುರ ಕುಲ ಸಂಹಾರ       ||ಪ|| ಒಂದು ದಿವಸ ಆನಂದಕಾಲದಲಿ ಸುಂದರಶ್ರೀ ಮುಖ್ಯಪ್ರಾಣಾ ಚಂದದಿ ರಾಮನ ಕೇಳಿ ನಡದನು ನೋಡಬೇಕೆನುತಲಿ ಮದೀನಾ ಬಂದು ಹೊಕ್ಕು ...

ಪೆಟ್ರೋಲ್ ವಾಸ್ತೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...