ಶತ ಶತಮಾನಗಳಿಂದ ಅದೇ ದಡ ಅದೇ ಕಡಲು ಕಡಲ ಸಿಟ್ಟಿಗೆ ಮತ್ತೆ ಮತ್ತೆ ಹಲ್ಲೆಗೊಳಗಾಗುವ ದಡದ ಒಡಲು. ಕಬಂಧ ಬಾಹುಗಳ ಚಾಚಿ ದಡವನೇ ಬಾಚಿ ನುಂಗುವ ಹುನ್ನಾರ ಕಡಲಿನದು ದೈತ್ಯ ಕಡಲಲೆ ಎಷ್ಟಾದರೂ ತಟ್ಟಲಿ ಹೇಗಾದರೂ ಮುಟ್ಟಲಿ ಮತ್ತೆ ಮತ್ತೆ ಬೆನ್ನಟ್ಟಲಿ ಒಂದ...

ನಲ್ಲೆ ನಮ್ಮ ಪ್ರೀತಿಗೇಕೆ ಇಂಥ ಪಾಡು ಈ ನೆಲೆ? ಆಯಿತೇಕೆ ಬಾಳು ಹೀಗೆ ಗಾಳಿಗೆದ್ದ ತರಗೆಲೆ? ನೀ ಉತ್ತರ ನಾ ದಕ್ಷಿಣ ಸೇರಲಾರದಂತರ, ತಾಳಿ ಹೇಗೆ ಬಾಳಿಯೇವು ವಿರಹವನು ನಿರಂತರ? ಇಲ್ಲಿ ಒಲುಮೆಗೆಲ್ಲಿ ಬೆಲೆ ಕಲೆಯಗೊಡದ ಜಗವಿದು, ಕನಸೊಂದೇ ದಾರಿ ನಮಗೆ ಮ...

ಕೆಂಪು ಸಮುದ್ರದ ಕನ್ಯೆ ಸೂರ್ಯನಿಗೆ ಪ್ರಾರ್ಥಿಸಿಕೊಂಡಾಗ ಕನಸಿನ ಮುತ್ತುಗಳು ಮಾಲೆಯಾಗಿ ಜೇನು ಹೊಳೆಯಾಗಿ ಕಾಮನ ಬಿಲ್ಲಾಗಿ ಬೆಳದಿಂಗಳಾಗಿ ಬಿಸಿಯುಸಿರಿನಲಿ ಕೆನ್ನೆ ಕಚ್ಚಿದ ಕೆಂಪು ಕೆನ್ನೆ ಅರಳಿಕೊಂಡು ಮತ್ತೇರಿದಾಗ ಕನ್ಯೆಯ ಒಡಲಾಳದಲ್ಲಿ ಮುಂಜಾವಿನ...

ಪ್ರತಿಯೊಂದು ರಸ್ತೆಯ ಎದೆಗೂಡು ಒಂದೊಂದು ನೋವಿನ ಮಡು ರಸ್ತೆ ತನ್ನ ನೋವು ಹೇಳುವುದಿಲ್ಲ ಬಿಡಿ ನಾವು ಕೇಳುವುದೂ ಇಲ್ಲ!   ರಸ್ತೆಗಳ ಗರ್ಭದೊಳಗೆ ಅದೆಷ್ಟೊಂದು ಗುಟ್ಟುಗಳಿವೆಯಲ್ಲಾ ವಿಪರ್ಯಾಸವೆಂದರೆ ರಸ್ತೆಗಳು ಮಾತನಾಡುವುದಿಲ್ಲ ಮಾತನಾಡಬಾರದಲ...

ಲೋಕನೀತಿಯ ಮೀರಿ ಬೆಳೆದ ಪ್ರೀತಿಗೆ ಬಾಯಿ ಎಲ್ಲಿದೆ? ಮೂಕನೋವನು ಸಹಿಸಿ ನಗೆನಟಿಸಿ ಮಾಡಿಕೋ ಕಲ್ಲೆದೆ ಎಂಥ ಬೆಂಕಿಯೆ ಪ್ರೀತಿ ನುಂಗಿ ತಾಳುವ ನೀತಿ ಚುಚ್ಚುನುಡಿ ಇರಿನೋಟ ಮೂದಲೆ, ಕರುಣೆಯೇ ಇರದೇನೊ ಕರಿಯುವುದೆ ಗುರಿಯೇನೊ ಕಾಯುತಿದೆ ಉರಿ ಎಣ್ಣೆ ಬಾಣಲ...

ಸುಪ್ರಭಾತ ಗೀತಗಳಿಲ್ಲದೆ ಅಂಗಳಕೆ ಹೆಂಗಳೆಯರ ರಂಗವಲ್ಲಿಗಳಿಲ್ಲದೆ ಓಡಾಡಿ ಹಾಲು ಕೊಡುವ ಪೇಪರ ಒಗೆಯುವ ತರಕಾರಿ ಎಂದು ಕೂಗುವ ಹುಡುಗರಿಲ್ಲದೆ ಘಮಘಮಿಸುವ ಹೂಮೊಗ್ಗುಗಳ ಯಾವೊಂದೂ ಸ್ವಾಗತವಿಲ್ಲದೆ ಸಿಟ್ಟಿಗೆದ್ದ ಸೂರ್ಯ ಧಗಧಗಿಸುತ್ತಲೇ ಹುಟ್ಟುತ್ತಾನೆ....

ಕಣ್ಣಿಗೆ ಕಟ್ಟಿದೆ ಪಟ್ಟಿ ಸಾಗಬೇಕಿದೆ ಕುರುಡುಹಾದಿ ಗುರಿಯ ಬೆನ್ನಟ್ಟಿ. ಕಲ್ಲುಮುಳ್ಳಿನ ದಾರಿ ದೂರದಲ್ಲೆಲ್ಲೋ ಅಸ್ಪಷ್ಟ ಗುರಿ ತಡವರಿಸಿ ತವಕಿಸಲು ಕೋಲೊಂದಿದೆ ಕೈಗೆ ಕಸುವು ಬೇಡವೇ ಮೈಗೆ? ಅಡ್ಡಾದಿಡ್ಡಿ ದಿಕ್ಕು ಕರೆದೆಡೆಗೆ ತಪ್ಪು ಹೆಜ್ಜೆ ಇಡುವ ...

ಪೆಟ್ರೋಲ್ ವಾಸ್ತೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...