ತಂದೆ ಮಗ

ಸನಗಿನ ವ್ಯಾಪಾರಮಾಡುವುದರಲ್ಲಿಯೇ ಮುದುಕನಾದ ಶಿವಲಿಂಗಪ್ಪನು, ಕೈಗೆ ಬಂದ ಮಗನಿಗೆ ತನ್ನ ವ್ಯಾಪಾರದ ಹಾಗು ತನ್ನ ಗಿರಾಕಿಗಳ ಪರಿಚಯ ಮಾಡಿಸಿಕೊಟ್ಟರೆ ತಾನು ಕೆಲಸದಿಂದ ನಿವೃತ್ತನಾಗುವುದಕ್ಕೆ ನಿಶ್ಚಿಂತವಾಗುವುದೆಂದು ಆಲೋಚಿಸಿ, ಮಗನನ್ನು ಕರೆದು ತನ್ನ ವಿಚಾರವನ್ನು ಆತನ ಮುಂದೆ...

ನಗೆ ಡಂಗುರ – ೮೩

ಒಬ್ಬ ತನ್ನ ಹೆಂಡತಿಗೆ ಕೇಳಿದ, "ಥಪ್ಪಡ್ (ಹೊಡೆತ)ಕ್ಕೂ ಪಾಪಡ್(ಹಪ್ಪಳ) ಗೂ ಏನು ವ್ಯತ್ಯಾಸ?" ಹೆಂಡ್ತಿ: "ನೀವು ಎರಡನ್ನೂ ನನ್ನ ಕೈಯಿಂದ ತಿಂದುನೋಡಿ. ನಂತರ ನೀವೆ ಹೇಳುತ್ತೀರಿ." ಎಂದಳು. ***

ನಿನಗಾಗೇ ಈ ಹಾಡುಗಳು

ನಿನಗಾಗೇ ಈ ಹಾಡುಗಳು ನೀ ಕಟ್ಟಿಸಿದ ನಾಡುಗಳು; ನೀನೇ ಇದರ ಮೂಲ ಚೂಲ ಒಳಗಿವೆ ನನ್ನ ಪಾಡುಗಳು. ಯಾಕೆ ಕಂಡೆನೋ ನಾ ನಿನ್ನ ತುಂಬಿ ಹರಿಯುವ ಹೊಳೆಯನ್ನ? ಯಾಕೆ ಹೊಕ್ಕಿತೋ ಹಿಡಿವಾಸೆ ಹೊಳೆಯುವ ಕಾಮನ...

ಶಾಂತಿಗಾಗಿ ಹಂಬಲ

ಬಾಂಬು ಭಯೋತ್ಪಾದನೆಯ ಸದ್ದುಗಳು ಇಲ್ಲಿ ಕೇಳಿಸದೇ ಕಾಣಿಸದೇ ಹೋದರೂ ಮನೆಗೆ ಬಂದು ಬೀಳುತ್ತವೆ ಪತ್ರಿಕಾ ಸುದ್ದಿಗಳು, ಟಿ.ವಿ. ಚಿತ್ರಗಳು ಮುಗಿಲುದ್ದ ಬಾಂಬುಗಳ ಹೊಗೆ ನೆಲತುಂಬ ಸಾವು ನೋವುಗಳ ಆಕ್ರಂದನ ಅಮಾಯಕರ ಗೋಳಾಟ ತುಂಡು ತುಂಡಾದವರ...

ಕೃತಕ ವನ

ಕೈಯಾರೆ ಬೆಳೆಸಿಕೊಂಡು ತಿದ್ದಿತೀಡಿ ಗಳಿಸಿಕೊಂಡ ಈ ತೋಟದಲ್ಲಿ ಸಹಜ ಸಮೃದ್ಧಿ ಇಲ್ಲ, ನೈಜ ಸಂಸಿದ್ಧಿ ಇಲ್ಲ, ಬೇರಿಳಿಸಿಕೊಂಡ ಪುಣ್ಯವಿಲ್ಲ, ಪವಿತ್ರವಾದ ಪಾಪವಿಲ್ಲ ಗಾಳಿಗೊಡ್ಡಿ ಬಾಹುಗಳು ಬಯಲ ತಬ್ಬಿ ಸುಖಿಸಲಿಲ್ಲ ಎಲರಿನಲ್ಲೆಲೆಗಳು ಎಲ್ಲೆ ಮೀರಿದ ಮಾತನುಲಿಯಲಿಲ್ಲ...

ಮೆಂಟ್ಲು ಕೇಸು ಬಳ್ಳಾರಿ ರೆಡ್ಡಿನಾ? ಯಡ್ಡಿನಾ? ಕುಮ್ಮಿನಾ?

ಬಳ್ಳಾರಿ ರೆಡ್ಡಿ ಬಾಂಬ್ನ ಬಿಜೆಪಿ ಮುದಕರು ಡೆಲ್ಲಿನಾಗೆ ನಿಷ್ಕ್ರಿಯಗೊಳಿಸಿ ರೆಡ್ಡಿ ಬಾಯಿಗೆ ಬೊಂಬಾಟ್ ಪ್ಲಾಸ್ಟರ್ ಜಡ್ದು ಕಳಿಸಿದ್ದರಿಂದ ಯಡ್ಡಿ ಕುಮ್ಮಿ ಆನಂದ ತುಂದಿಲರಾಗಿದ್ದರು. ಆದ್ರೆ ಈ ಆನಂದ ಐದೇ ದಿನ್ದಾಗೆ ಠುಸ್ ಆಗಿ, ರೆಡ್ಡಿ...

ಕಡಲೇ ಒಮ್ಮೊಮ್ಮೆಯಾದರೂ ಬಾ

ಹೀಗೆ ಒಮ್ಮೊಮ್ಮೆಯಾದರೂ ಎಲ್ಲ ಮಿತಿಗಳ ಮೀರಿ ನನ್ನೆದೆಯ ದಡಕೆ ಅಪ್ಪಳಿಸು ಬಾ ಕಡಲೇ. ಶತಶತಮಾನಗಳಿಂದ ಕಾದು ಕೆಂಡವಾಗಿರುವ ನನ್ನೆದೆಯ ಸುಡುಮರಳ ಕೊಂಚ ತಂಪಾಗಿಸಿಕೊಳ್ಳುತ್ತೇನೆ. ನೀ ಹೊತ್ತು ತರುವ ಕುಳಿರ್ಗಾಳಿಗೆ ಒಮ್ಮೆಯಾದರೂ ಅರಳಿ ಮತ್ತೊಮ್ಮೆ ಪಕ್ಕಗಳಲ್ಲಿ...

ಉದ್ದನ್ನವರ ಮುಂದೆ ಕೀರ್ತನ

‘ಊರಿಗೆ ಬಂದ ಪ್ರಖ್ಯಾತ ಕೀರ್ತನಕಾರನೊಬ್ಬನ ಕೀರ್ತನ ಮಾಡಿಸಬೇಕೆಂದು, ಪ್ರಮುಖರು ಎತ್ತುಗಡೆ ನಡೆಯಿಸಿದರು. ಕೀರ್ತನಕಾರನು ಮೊದಲೇ ಸೂಚಿಸಿದಂತೆ ಶ್ರೋತೃವೃಂದಲ್ಲಿ ಕುಳಿತ ಗಿಡ್ಡಗಿಡ್ಡ ಜನರನ್ನೆಲ್ಲ ಎಬ್ಬಿಸಿ ಕಳಿಸಲಾಗಿತ್ತು. ಕುಳಿತವರೆಲ್ಲರೂ ಉದ್ದನ್ನವರೇ ಆಗಿದ್ದಾರೆಂಬ ಭರವಸೆಯಾದ ಬಳಿಕ ಕೀರ್ತನಕಾರನು ತನ್ನ...

ನೀ ಸಿಗದೆ ನಾನೆಂತು ತಿಳಿವೆನೇ ನನ್ನ?

ನೀ ಸಿಗದೆ ನಾನೆಂತು ತಿಳಿವೆನೇ ನನ್ನ ಸಾಣೆ ಗೆರೆಮಿಂಚದೆ ತಿಳಿವರೇ ಹೊನ್ನ? ನೂರಾರು ಕೊಪ್ಪರಿಗೆ ನಿಧಿ ಹುಗಿದ ಗವಿಯು ಆತ್ಮ ಸೆರೆಯಿದ್ದೂ ಅರಿತಿರದ ಭವಿಯು ನಾನೊಂದು ಕಗ್ಗಾಡು ನನ್ನ ನಾ ಅರಿಯೆ ಬೆಳಕಾಗಿ ಒಳತೂರಿ...