ನುಡಿಮನವೆ

ನುಡಿ ಮನವೆ ನುಡಿ ಮನವೆ
ಕನ್ನಡ ನನ್ನದೆಂದು ನುಡಿ ಮನವೆ
ನುಡಿಯಿದುವೆ ನವ ಚೇತನವು ಬಾಳಿಗೆ||

ನುಡಿಯದಿರಲೇನು ಚೆನ್ನ
ನುಡಿ ಇದುವೆ ಕಸ್ತೂರಿ ರನ್ನ ನೀ ತಿಳಿಯೆ||

ತಾಯ್ ನುಡಿಯಿದುವೆ
ಸವಿ ಜೇನು ಸಿಹಿ ಜೇನು
ಸವಿಯದಿರಲೇನು ನೀನು
ನೆಲೆಯಿಲ್ಲದಿರಲೇನು ಮೈಲಿಗೆ
ಕನ್ನಡವೇ ಸತ್ಯವೆಂದ ಮನಕೆ||

ಅಂಬಾ ಎಂದ ಕರುವೂ
ಅಮ್ಮನೆಂದ ಮಗುವೂ
ಕಂದನ ಕರೆಯ ಓ ಗೊಟ್ಟ ಮನವೂ
ಕಂಪನು ಸೂಸಿ ನಲಿಯಲು ತನುವು
ಮಮತೆಯ ತಾಯ ನುಡಿಯಿದುವೆ
ಆನಂದದಾ ಹೊನಲು||

ಬಾಳೆ ಬಾಗಿರಲೇನು
ಹಸಿರೇ ಹಾಸಿರಲೇನು
ಯಾವ ತಾಯ ಮಡಿಲ
ಹೂವಾಗಿರಲೇನು ನೀ ತಿಳಿಯೆ
ನುಡಿಯದಿರಲೇನು ಚೆನ್ನ
ಕನ್ನಡವೇ ಕಸೂರಿ ತಿಳಿಯದಿರಲೇನು ಚೆನ್ನ
ಕನ್ನಡವೇ ಸತ್ಯ ನಿತ್ಯ ಚೇತನವಾಗುಮನವೇ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಾನವನ ಬಾಳಿನ ನಾಲ್ಕು ಹಂತಗಳು
Next post ಎಪ್ರಿಲ್ ಒಂದು

ಸಣ್ಣ ಕತೆ

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…