ತಿದ್ದಲಾರದ ಭೂತ

ತಿದ್ದಲಾರದ ನಿನ್ನೆ ಕಾಣಲಾರದ ನಾಳೆ ಇದ್ದರೂ ಇರದಂಥ ವರ್‍ತಮಾನ ನಿಲ್ಲಲಾರದ ಕಾಲ ಕಾಲ ಕ್ರಮದಲ್ಲಿ ಮರಳದಿದ್ದರು ಮರಳಿದಂಥ ಅನುಮಾನ ಬೇಡವೆಂದರು ಬೆನ್ನು ಬಿಡದಂಥ ನೆನಪುಗಳು ಬೇಕೆಂದು ಬೇಡಿದರು ತಡೆವ ವಿಸ್ಮೃತಿಗಳು ಕ್ಷಣ ಕೂಡ ನಿಂತಲ್ಲಿ...
ಆಸ್ಟರಿನ್, ಮಾತ್ರೆ ಒಂದೇ ಸರ್ವ ರೋಗಕ್ಕೂ ಮದ್ದು

ಆಸ್ಟರಿನ್, ಮಾತ್ರೆ ಒಂದೇ ಸರ್ವ ರೋಗಕ್ಕೂ ಮದ್ದು

ಮನುಷ್ಯ ಅಂದ ಮೇಲೆ ಕೈಕಾಲು ನೋವು, ಹೊಟ್ಟೆನೋವು, ಹೃದಯದ ಬೇನೆ, ಪಾರ್ಶ್ಯುವಾಯು ಕಣ್ಣಿನ ದೋಶ, ರಕ್ತದ ಹೆಚ್ಟು ಒತ್ತಡ ಹೀಗೆ ಏನೇನೋ ಕಾಯಿಲೆಗಳು ಬರುತ್ತವೆ. ಇವೆಲ್ಲವುಗಳಿಗೂ ಬೇರೆ ಬೇರೆ ಔಷಧಿ ಪಡೆದು ಸೇವಿಸುವುದು ಕಷ್ಟ....

ಕಟ್ಟುತ್ತಿರುವೆನು ಮಂದಿರವನ್ನು

ಕಟ್ಟುತ್ತಿರುವೆನು ಮಂದಿರವನ್ನು ಎದೆಯ ಗೂಡಿನಲ್ಲಿ ರಾಮ ರಹೀಮ ಕ್ರಿಸ್ತ ಅಲ್ಲಮ ಎಲ್ಲರಿರುವರಲ್ಲಿ ಆಂಜನೇಯನಿಗೂ ಏಸುಕ್ರಿಸ್ತನಿಗೂ ಬಹಳ ನ್ಯಾಸ್ತವಿಲ್ಲಿ ಬುದ್ಧ ನಾನಕ ಮಹಾವೀರರು ಇವರ ಸ್ನೇಹದಲ್ಲಿ ರಾಮ ಪವಡಿಸಿಹ ಮಸೀದಿಯಲ್ಲಿ ಕ್ರಿಸ್ತನಾ ಕೋಣೆಯಲ್ಲಿ ಇದಕೆ ಹೆಸರುಗಳು...

ಒಳತೋಟಿ

‘ಇವಳ’ ತೆಕ್ಕೆಯಲ್ಲಿ ‘ಅವಳ’ ಕಲ್ಪಿಸಿ ಕೊಳ್ಳುತ್ತ ‘ಅವಳೆ’ ಎಂದು ಭ್ರಮಿಸಿ ಸ್ಪಂದಿಸಿದಾಗ ‘ಇವಳಿಗೆ’ ‘ನನ್ನ ಮೇಲೆ ಎಷ್ಟೊಂದು ಮೋಹ’ ಅನ್ನಿಸಿ ಸುಖಿಸಿದರೆ ನನಗೆ ಪಾಪ! ಅನ್ನಿಸುತ್ತದೆ ಸಮಾಧಾನ ತರುತ್ತದೆ! ನನ್ನ ಒಳತೋಟಿ ಬಹಿರಂಗವಾಗಿಲ್ಲವಲ್ಲ ಅಂತ...

ಕೋವಿ ಹಿಡಿಯದ ಕೈಗಳೇ ಕಂಬನಿ ಒರೆಸಬೇಕು…

ಒಬ್ಬ ಮನುಷ್ಯ ಹಸಿವೆಯಂದ ಎಷ್ಟು ನರಳಬಹುದೋ ಅಷ್ಟು ದಾರುಣವಾಗಿ ಅವನು ನರಳಿದ್ದ. ಒಂದು ತುಂಡು ರೊಟ್ಟಿಗಾಗಿ ಎಷ್ಟು ಹೋರಾಡಬಹುದೋ ಅಷ್ಟು ತೀವ್ರವಾಗಿ ಅವನು ಹೋರಾಡಿದ್ದ. ಅವನ ಒಡಲಾಗ್ನಿ ಯಾರನ್ನೂ ಸುಡಲಿಲ್ಲ. ದುಃಖ ದುಮ್ಮಾನಗಳಿಂದ ಒಬ್ಬ...
ಏಕಾಂತದ ಆಲಾಪ

ಏಕಾಂತದ ಆಲಾಪ

ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ. ಮತ್ತೆ ನಿಯಂತ್ರಣಕ್ಕೆ ಬಾರದ ಸಕ್ಕರೆ ಅಂಶ....

ಸೃಷ್ಟಿಯ ಲೀಲೆ

ಮೂಡಣದ ಬಾಗಿಲಲಿ ತೆರೆಗಳ ಸರಿಸಿ ಜೀವಿಗಳ ಬೆಳಗುತಿಹನು ಬಿಂಕದಲಿ ತಾರೆಗಳು ಮಿನುಗುತಿವೆ ರಾತ್ರಿ ಚೆಲುವಿಯ ಕಂಗಳಲಿ ರಮಿಸುತಿಹವು ನೀರವತೆ ಬೆಳ್ದಿಂಗಳ ತಂಪಿನಲಿ ಜಗವೆಷ್ಟೊಂದು ಸುಂದರ ಈ ಸೋಲಾರಿನಲಿ ಹಣ್ಣೆಲೆ ಉದುರಿ ಚಿಗುರೆಲೆ ಮೂಡಿರಲು ಧರೆ...

ಆ ಹುಡುಗಿ

ಜಗಮಗಿಸುವ ಬೆಳಕಲ್ಲಿ ಜರಿಸೀರೆಯ ಭಾರಹೊತ್ತು ನಿಂತಿದ್ದಳು ಮದುಮಗಳು ಭವಿಷ್ಯದ ಕನಸುಗಳ ಹೊತ್ತು! ಸಾಕ್ಷಿಯಾಗಿದ್ದವು ಸಾವಿರಾರು ಕಣ್ಣುಗಳು ಹರಸಿದ್ದವು ನೂರಾರು ಹೃದಯಗಳು. ಪತಿಯಾಗುವವನ ಕೈ ಹಿಡಿದು ಸಪ್ತಪದಿಯ ತುಳಿವಾಗ ಅರಳಿತ್ತು ಪ್ರೀತಿ. ರಂಗಾಗಿತ್ತು ಮನಸ್ಸು ಒಲವು...