ಕೆಮ್ಮಣ್ಣ ಗುಡ್ಡಕೇ ಗೊಲ್ಲ ದನಗಳ ಬಿಟ್ಟಿದನೋ
ಕೆಮ್ಮಣ ರಾಜಾರ ಮಗಳು ನೀರಿಗೆ ಬಂದಿದಳೋ || ೧ ||
ಹೊರಸು ಬಾರಯ್ಯ ಗೊಲ್ಲ | ನೆಗಹು ಬಾರಯ್ಯಾ |
ಹೆಣ್ಣೆ ಕೊಡವನು ಹೊರಿಸಿದರೇ ನನಗೇನು ಕೊಡುವಿಯೇ || ೨ ||
ನಮ್ಮ ಕೇರಿಗೆ ಬಂದಿದ್ದಾರೇ ಯೆಮ್ಮೆ ದಾನ ಕೊಡವೇನೇ
ನಿಮ್ಮಲ್ಲಿರುವ ಯೆಮ್ಮೆದಾನ ನಮ್ಮಲ್ಲೇನು ಕಡಮೇನೇ || ೩ ||
ನಮ್ಮ ಕೇರಿಗೆ ಬಂದಿದ್ದರೇ ಆಕಳದಾನ ಕೊಡವೇನೇ
ನಿಮ್ಮಲ್ಲಿರುವ ಆಕಳದಾನ ನಮ್ಮಲ್ಲೇನು ಕಡಮೇನೇ || ೪ ||
ಹೊರಸು ಬಾರಯ್ಯ ಗೊಲ್ಲ | ನೆಗಹು ಬಾರಯ್ಯಾ
ನಮ್ಮ ಕೇರಿಗೆ ಬಂದಿದ್ದಾದ್ರೆ ಬೆಳ್ಳಿದಾನ ಕೊಡುವೇನೂ
ನಿಮ್ಮಲ್ಲಿರುವ ಬೆಳ್ಳಿದಾನ ನಮ್ಮಲ್ಲೇನು ಕಡಮೇನೇ || ೫ ||
*****
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.