Nagabhushanaswamy

#ಇತರೆ

ಸೌಂದರ್ಯದ ಉದ್ಯಮ, ಸೌಂದರ್ಯದ ರಾಜಕೀಯ

0

ಇದೇ ವರ್ಷ ನವೆಂಬರ್ ೨೨ ರಂದು ಪ್ರಸಾರಗೊಂಡ ಸುದ್ದಿ ಇದು. ಆಫ್ರಿಕದ ನೈಜೀರಿಯಾದ ಕಾಡುನಾ ಎಂಬಲ್ಲಿ ವಿಶ್ವಸುಂದರಿ ಸ್ಪರ್‍ಧೆಯ ಪರ-ವಿರುದ್ಧ ಗಲಭೆ ನಡೆಯಿತು. ಗಲಭೆಗೆ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಮತೀಯತೆಯ ರಂಗು ಬಂದಿತ್ತು. ನೂರ ಐದು ಜನ ಪ್ರಾಣಕೆಳದುಕೊಂಡರು. ಇದನ್ನು ಟಿವಿಯಲ್ಲಿ ನೋಡಿದಾಗ, ಓದಿದಾಗ ಮೂಡಿದ ವಿಚಾರಗಳು ಇವು. ‘ಮನದ ಪರಿಣಾಮವೇ ಚೆಲುವ.’ ಹನ್ನೆರಡನೆಯ ಶತಮಾನದಲ್ಲಿದ್ದ […]

#ಇತರೆ

ಪ್ರಶ್ನೆಯೋ ಉತ್ತರವೋ?

0

ಉತ್ತರವನ್ನು ತಿಳಿಯುವುದಕ್ಕಿಂತ ಪ್ರಶ್ನೆಯನ್ನು ಕೇಳುವುದು ಮುಖ್ಯ, ಆದರೆ ಕಷ್ಟ. ಕಳೆದ ಸುಮಾರು ಇಪ್ಪತ್ತೆಂಟು ವರ್ಷಗಳಲ್ಲಿ ನಾನು ನೋಡಿದ ನೋಡಿದ ವಿದ್ಯಾರ್‍ಥಿಗಳಲ್ಲಿ ಶೇಕಡಾ ೯೯ ಜನ ಉತ್ತರಗಳಲ್ಲಿ ಮಾತ್ರ ಆಸಕ್ತರು. ಬಹುಶಃ ನಾವು ಬೆಳೆಸಿಕೊಂಡಿರುವ ಶಿಕ್ಷಣ ಕ್ರಮವೇ ಹಾಗಿದೆ. ಒಂದು ಪ್ರಶ್ನೆಗೆ ಒಂದು, ಒಂದೇ ಒಂದು ಸರಿಯಾದ ಉತ್ತರವಿದೆ ಮತ್ತು ಅದನ್ನು ತಿಳಿದುಕೊಳ್ಳುವುದೇ ಜ್ಞಾನವೆಂಬ ನಂಬಿಕೆ ರೂಢಮೂಲವಾಗಿದೆ. […]

#ಇತರೆ

ಜ್ಞಾನ ಮತ್ತು ಕೌಶಲ್ಯ

0

ಜ್ಞಾನವು ದೊರೆತರೆ ನಾವು ಬದಲಾಗುತ್ತೇವೆ, ಶಿಕ್ಷಣದ ವ್ಯವಸ್ಥೆಯು ನಮಗೆ ಜ್ಞಾನವನ್ನು ಒದಗಿಸುತ್ತದೆ ಎಂದು ನಂಬುವುದು ಎಸ್ ಸರಿ? ಜ್ಞಾನವೆಂದರೆ ಏನು ಎಂಬ ವಿವರಣೆ ಎಲ್ಲ ಕಾಲದಲ್ಲೂ, ಎಲ್ಲ ಸಮಾಜಗಳಲ್ಲೂ ಒಂದೇ ರೀತಿಯಾಗಿ ಇರಲಿಲ್ಲ. ಈ ಮಾತನ್ನು ಒಂದು ಸಿದ್ಧಾಂತವೆಂಬಂತೆ ಪ್ರತಿಪಾದಿಸಿದಾತ ಫ್ರೆಂಚ್ ಭಾಷೆಯ ಚಿಂತಕ ಫೂಕೋ ಎಂಬಾತ. ಅವನವರಗೊ ಹೋಗುವುದು ಬೇಡ. ಕಳೆದ ಹತ್ತು ಇಪ್ಪತ್ತು […]

#ಇತರೆ

ಬದಲಾವಣೆ: ಯಾಕೆ ಓದಬೇಕು?

0

ಯಾಕೆ ಓದಬೇಕು? ಶಿಕ್ಷಣವೇ ಶಕ್ತಿ ಎಂಬ ಜನಪ್ರಿಯ ಘೋಷಣೆಯನ್ನು ಶಿಕ್ಷಣವೇ ವಿಶ್ಶಕ್ತಿ ಎಂದು ಬದಲಾಯಿಸಬೇಕು. ಸುಮ್ಮನೆ ನೆನಪು ಮಾಡಿಕೊಳ್ಳಿ. ಕನ್ನಡದ ಯಾವುದಾದರೂ ಗಾದೆ ಓದುವಿಕೆಯನ್ನು ಮೆಚ್ಚಿ ಶಿಫಾರಸು ಮಾಡುವಂಥದಿದೆಯೇ? ಓದಿ ಓದಿ ಮರುಳಾದ… ಓದು ಒಕ್ಕಾಲು…ಮಾಘ ಓದಿ ಮಗ ಕೆಟ್ಟ… ಎಲ್ಲ ಓದಿನ ವಿರುದ್ಧವಾಗಿರುವ ಗಾದೆಗಳೇ. ಕೈಲಾಸಂ ಅವರ ‘ಪೋಲಿ ಕಿಟ್ಟಿ’ ರವೀಂದ್ರನಾಥ ಟಾಗೂರರ ‘ಪಂಜರಶಾಲೆ’ […]

#ಇತರೆ

ಬದಲಾವಣೆ: ಮಾತು ಕೇಳುವುದು ಮತ್ತು ಕೇಳಿಸಿಕೊಳ್ಳುವುದು

0

ಮಾತು ಕೇಳುವುದಕ್ಕೂ ಕೇಳಿಸಿಕೊಳ್ಳುವುದಕ್ಕೂ ವ್ಯತ್ಯಾಸವಿದೆ. ಬೇರೆಯವರ ಮಾತನ್ನು ಕೇಳುವುದು ದೌರ್ಬಲ್ಯ, ಕೇಳಿಸಿಕೊಳ್ಳದೆ ಇರುವುದು ಅಪರಾಧ. ಆದರೆ ನಮಗೆಲ್ಲ ಸಾಮಾನ್ಯವಾಗಿ ಬೇರೆಯವರು ನಮ್ಮ ಮಾತು ಕೇಳಬೇಕೆಂಬ ಆಸೆ ಇರುತ್ತದೆಯೇ ಹೊರತು ಕೇಳಿಸಿಕೊಳ್ಳಬೇಕು ಎಂಬ ಇಚ್ಛೆಯಲ್ಲ. ಮಕ್ಕಳು ನನ್ನ ಮಾತು ಕೇಳುವುದಿಲ್ಲ, ನನ್ನ ಹಿಂಬಾಲಕರು ನನ್ನ ಮಾತು ಕೇಳುವುದಿಲ್ಲ, ನಾನು ಹೇಳಿದ್ದೆ ನೀನು ಕೇಳಿದೆಯಾ? ಹೀಗೆಲ್ಲ ಹೇಳುವುದುಂಟಲ್ಲ, ಅದರ […]

#ಇತರೆ

ಬದಲಾವಣೆಯ ಅರಿವು

0

ನಿಜವಾದ ಏಕಾಂತ ಯಾರಿಗೆ ದೊರೆತಿದೆಯೋ ಅಂಥದ್ದು ಇದೆಯೋ ಗೊತ್ತಿಲ್ಲ. ನಾವು ಏಕಾಂತ ಎಂದು ಕರದುಕೊಳ್ಳುವುದರಲ್ಲಿ ಲೋಕ ಇದ್ದೇ ಇರುತ್ತದೆ. ಲೋಕ ಎಂಬುದು ಕೂಡ ನಾವು ಏಕಾಂತದಲ್ಲಿ ಏನೇನು ಕಲ್ಪಿಸಿಕೊಳ್ಳುತ್ತೇವೋ, ಭಾವಿಸುತ್ತೇವೋ, ಅನುಭವಿಸುತ್ತೆವೋ ಅದರ ಪತಿಫಲನವೇ ಆಗಿರುತ್ತದೆ. ನಮ್ಮ ಏಕಾಂತಗಳಲ್ಲಿ ಬೇರು ಬಿಟ್ಟು ದೃಢವಾಗಿ ಬೆಳೆದು ನಿಂತಿರುವ, ನಮ್ಮ ಲೋಕದ ರೂಪರೇಖೆಗಳನ್ನು ತಿದ್ದುವ ಕೆಲವು ಮೂಲ ಕಲ್ಪನೆಗಳನ್ನೂ, […]

#ಹನಿಗವನ

ಚಿನ್ನದ ಬೆಳ್ಳಿಯ ಕೆಸರು

0

ಚಿನ್ನದ ಬೆಳ್ಳಿಯ ಕೆಸರನ್ನು ತೊಳೆದು ಕೊಂಡು ಬಟ್ಟೆ ಹಾಕಿಕೊಂಡು ಬರುವಷ್ಟು ಹೊತ್ತಿಗೆ ಸಮುದ್ರದ ನೀರೆಲ್ಲ ಖರ್‍ಚಾಗಿರುತ್ತದೆ ನಕ್ಷತ್ರ ಮುಳುಗಿ ಹೋಗಿರುತ್ತದೆ ಸೂರ್ಯ ಚಂದ್ರ ಸತ್ತು ಹೋಗಿರುತ್ತಾರೆ ಅಲ್ಲಿಯವರೆಗೆ ನೀನು ಕಾದಿರುತ್ತೀಯಾ ಪಾವನಾ…. *****