ನನ್ನ ಕೊಲ್ಲಬೇಡ ಅಂತ ಹೇಳು. ಜಸ್ಟಿನೋ! ಹೋಗಿ ಹೇಳು ಅವರಿಗೆ, ದಮ್ಮಯ್ಯ! ಹೇಳು ಅವರಿಗೆ. ಪ್ಲೀಸ್, ಹೇಳು." ‘ನನ್ನ ಕೈಯಲ್ಲಿ ಆಗಲ್ಲ. ಅಲ್ಲಿರುವ ಸಾರ್ಜೆಂಟ್ ನಿನ್ನ ವಿಚಾರ ಏನೂ ಕೇಳಳಲ್ಲ.’ ‘ಕೇಳುವ ಹಾಗೆ ಮಾಡು....
ಹೆಣ್ಣು ನಾಯಿ ಆಗಲೇ ಕೊಂದರು ಮರಿಗಳಿನ್ನೂ ಉಳಿದಿವೆ - ಜನಪ್ರಿಯ ಗೀತೆ ‘ವಿವಾ ಪೆಟ್ರೋನಿಲೋ ಫ್ಲೋರೆಸ್! ಪೆಟ್ರೋನಿಲೋ ಘ್ಲೋರೆಸ್‍ಗೆ ಜಯವಾಗಲಿ’ ಕೂಗಿನ ದನಿ ಆಳ ಕಮರಿಯ ಗೋಡೆಗಳಿಗೆ ಬಡಿದು ಪ್ರತಿದನಿಸುತ್ತಾ ನಾವಿದ್ದ ಮೇಲಿನ ತುದಿ...
ಚರಂಡಿ ಪಕ್ಕ ಕೂತು ಕಪ್ಪೆಗಳು ಹೊರಗೆ ಬರುವುದನ್ನೇ ಕಾಯುತ್ತಾ ಇದೀನಿ. ನಿನ್ನೆ ರಾತ್ರಿ ನಾವು ಊಟ ಮಾಡುತಿರುವಾಗ ಗಲಾಟೆ ಎಬ್ಬಿಸಿದ್ದವು. ಬೆಳಗಿನ ಜಾವದವರೆಗೆ ವಟವಟ ಗಾನ ನಿಲ್ಲಿಸಲೇ ಇಲ್ಲ. ನನ್ನ ಗಾಡ್‍ಮದರ್ ಕೂಡ ಅದನ್ನೇ...
ನತಾಲಿಯಾ ಅಮ್ಮನ ತೋಳಿನಲ್ಲಿ ಹುದುಗಿ ತುಂಬ ಹೊತ್ತು ಮೌನವಾಗಿ ಬಿಕ್ಕಿದಳು. ನಾವು ಝೆನ್‌ಸೋಂಟ್ಲಾದಿಂದ ವಾಪಸು ಬಂದು ಅವಳು ಅಮ್ಮನನ್ನು ನೋಡುವ ಈವತ್ತಿನವರೆಗೆ, ಅವಳಿಂದ ಸಮಾಧಾನ ಮಾಡಿಸಿಕೊಳ್ಳಬೇಕು ಅನ್ನಿಸುವ ಈ ಕ್ಷಣದವರೆಗೆ, ಎಷ್ಟೋ ದಿನದಿಂದ ಅಳುವನ್ನು...
ಸಾನ್ ಗಾಬ್ರಿಯಲ್ ಊರು ಥಂಡಿ ಕಾವಳದಿಂದ ಇಷ್ಟಿಷ್ಟೆ ಹೊರತೋರುತ್ತಿದೆ. ಜನಗಳ ಮೈ ಬಿಸಿ ತಾಕಲೆಂದು ರಾತ್ರಿಯಲ್ಲಿ ಮೋಡಗಳು ಊರಿನ ಮೇಲೆ ಕವುಚಿಕೊಂಡು ನಿದ್ದೆ ಹೋಗಿವೆ. ಸೂರ್ಯ ಇನ್ನೇನು ಕಾಣಬೇಕು ಅನ್ನುವಾಗ ಕಾವಳದ ತೆರೆಯ ಹಚ್ಚಡ...
ಕೆಟ್ಟದ್ದು ಹದಗೆಡುತ್ತಿದೆ ಇಲ್ಲಿ. ಹೋದವಾರ ಅತ್ತೆ ಜಸಿಂಟಾ ತೀರಿಕೊಂಡಳು. ಮತ್ತೆ ಶನಿವಾರ, ಅವಳನ್ನು ಮಣ್ಣುಮಾಡಿ ಬಂದು ದುಃಖ ಮಸುಕಾಗುತಿದ್ದಾಗ ಮಳೆ ಹುಚ್ಚು ಹಿಡಿದ ಹಾಗೆ ಸುರಿಯಿತು. ನಮ್ಮಪ್ಪನಿಗೆ ತಬ್ಬಿಬ್ಬು. ಬಾರ್‍ಲಿ ಬೆಳೆಯೆಲ್ಲ ಕೊಯ್ದು ಚಪ್ಪರದಲ್ಲಿ...
ಟೋರಿಕೋ ಮನೆಯವರು ನನಗೆ ತುಂಬ ಸ್ನೇಹಿತರು, ಬೇಕಾದವರು. ಝಪೋತ್ಲಾನ್ ಊರಿನಲ್ಲಿ ಅವರನ್ನು ಕಂಡರೆ ಯಾರಿಗೂ ಆಗತಿರಲಿಲ್ಲ ಅನ್ನಿಸತದೆ. ನನ್ನ ಮಟ್ಟಿಗೆ ಹೇಳುವುದಾದರೆ ತುಂಬ ಒಳ್ಳೆಯ ಸ್ನೇಹಿತರು, ಅವರೆಲ್ಲ ಸಾಯವುದಕ್ಕೆ ಸ್ವಲ ಮುಂಚಿನವರೆಗೂ ಹಾಗೇ ಇದ್ದರು....
ಒಂದೇ ಒಂದು ಮರದ ನೆರಳನ್ನಾಗಲೀ, ಬೀಜವನ್ನಾಗಲೀ, ಬೇರನ್ನಾಗಲೀ ಕಾಣದೆ ಇಷ್ಟು ಹೊತ್ತು ನಡೆದುಕೊಂಡು ಬಂದ ಮೇಲೆ ನಾಯಿ ಬೊಗಳುವುದು ಕೇಳುತ್ತಿದೆ. ರಸ್ತೆಯಲ್ಲದ ರಸ್ತೆಯಲ್ಲಿ ಅರ್ಧ ದೂರ ನಡೆದ ಮೇಲೆ-ಇದರಾಚೆಗೆ ಇನ್ನೇನೂ ಇಲ್ಲ, ಹಳ್ಳ, ಕೊರಕಲು,...