Home / ಸಮಗ್ರ ಲಲಿತ ಪ್ರಬಂಧ

Browsing Tag: ಸಮಗ್ರ ಲಲಿತ ಪ್ರಬಂಧ

ನನ್ನ ಮಗಳು ರೇಖಾ ನನಗೆ ಅಚ್ಚುಮೆಚ್ಚು. ಒಬ್ಬಳೇ ಮಗಳೆಂದೋ ಏನೋ ಯಾವಾಗಲೂ ಅವಳು ನನ್ನ ಕಣ್ಮುಂದೆ ಸುಳಿಯುತ್ತಿರಬೇಕೆಂದು ಅನ್ನಿಸುತ್ತದೆ. ಸ್ವಲ್ಪ ಕೆಮ್ಮಿದರೂ ಸಾಕು ನನ್ನ ಗಂಟಲೇ ತುಂಬಿ ಬಂದಂತಾಗುತ್ತದೆ. ಅತ್ತಾಗ ಅವಳ ಕಣ್ಣಿನಿಂದ ನೀರು ಬರುವುದಿಲ...

ಹೆಂಡತಿಯನ್ನು ಅರ್ಧಾಂಗಿಯೆಂದು ಕರೆಯುತ್ತಾರೆ. ಹೆಂಡತಿಯ ಸಹೋದರ ಭಾವಮೈದುನನಾದರೋ ಪೂರ್ಣಾಂಗನೇ ಆಗಿದ್ದಾನೆ. ಹೆಂಡತಿಯನ್ನು ನಾವು ಪ್ರೀತಿಸಬಹುದು ಇಲ್ಲವೆ ಬಿಡಬಹುದು. ಆದರೆ ಭಾವಮೈದುನನನ್ನು ಪ್ರೀತಿಸದಿದ್ದರೆ ನಮಗೆ ಉಳಿಗಾಲವಿಲ್ಲ. ಆದಕ್ಕೆಂತಲೇ ಹ...

ಕ್ಷುಲ್ಲಕ ತೊಂದರೆಯೊದಗಿದರೂ ಮೋರೆಗೆ ಸೆರಗುಹಾಕಿ ಅಳುವನೆಂದೋ ಏನೋ, ನನ್ನ ಪಾಲಿಗೆ ಪೇಚಾಟದ ಪ್ರಸಂಗಗಳೇ ಬಹಳ. ಒಂದನೆಯ ಪಿರಿಯಡ್ಡು ಇದ್ದು ಕಾಲೇಜಿಗೆ ಮುಟ್ಟುವಲ್ಲಿ ತಡವಾದಾಗ ವಾಹನದ ಅನುಕೂಲತೆ ಆಗದೆ ಹೋಗುವುದು; ಚಹದ ಅಂಗಡಿಗೆ ಹೋದಾಗ ಜೇಬಿನಲ್ಲಿ ...

ಕಿಡಿಕಿಯಿಂದ ಬೆಳಕು ತೂರಿಬಂದಿದೆ; ಬೆಳಗಾಗಿದೆ. ಆದರೆ ಸೂರ್ಯನು ಮೋಡದಲ್ಲಿ ಮರೆಯಾಗಿದ್ದಾನೆ. ಮಳೆಯೂ ಬಾರದು, ಬಿಸಿಲೂ ಬೀಳದು. ಪ್ರಕೃತಿ ಅಳುತ್ತಲೂ ಇಲ್ಲ, ನಗುತ್ತಲೂ ಇಲ್ಲ. ಹಾಸಿಗೆಯ ಮೇಲೆ ಇನ್ನೂ ಬಿದ್ದುಕೊಂಡಿದ್ದ ನಾನು ನಿದ್ದೆಯ ಮಂಪರಿನಲ್ಲಿದ...

ಇದೋ ನಿಮಗೆ ಸುಸ್ವಾಗತ. ನೀವು ಈ ಊರಿಗೆ ಹೊಸಬರೇ ಸಾರ್. ನಿಮ್ಮ ಮುಖವೇ ಹೇಳುತ್ತಿದೆ-ನೀವು ಇಲ್ಲಿಯವರಲ್ಲವೆಂದು. ನಿಮ್ಮ ಮೊಗದಲ್ಲಿಯ ವಿಚಿತ್ರ ಕಳೆ ಇಲ್ಲಿಯ ಕಾಣಿಕೆಯಲ್ಲ. ಪ್ರವಾಸದಲ್ಲಿ ಮೊಗ ಬಾಡಿದೆಯಲ್ಲ… ಮುಖಕ್ಕೆಲ್ಲ ಧೂಳು-ಧೂಳು. ಈ ಹೋಲ...

ಒಂದು ಬೆಳಗು, ಒಂದು ದಿನದಂತೆ ಮತ್ತೂಂದು ದಿನ. ಅದರಂತೆ ಯಾವುದೋ ಬೆಳಗಿನಂತೆ ಇದೂ ಒಂದು ಬೆಳಗು. ಇದರಲ್ಲಿ ಹೊಸತನವೇನು ಬಂತು ಮಣ್ಣು? ನಾನು ಹಾಸಿಗೆಯನ್ನು ಬಿಟ್ಟು ಎದ್ದೆನೆಂದು ಬೆಳಗಾಗಲಿಲ್ಲ, ಬೆತ್ನಿಷೆಗಾಯಿತು ಎಂದು ಏಳಬೇಕಾಯಿತು ಅಷ್ಟೇ. ‘ಇದು ...

ಮನಸ್ಸು ಬಂದತ್ತ ಸ್ವೇಚ್ಛಾಚಾರಿಯಾಗಿ ಅಲೆಯುವಷ್ಟು ಸ್ಥಿತಿವಂತನೂ ನಾನಲ್ಲ. ‘ಪ್ರಯಾಣಕ್ಕಾಗಿ ಪ್ರಯಾಣ’ ಎನ್ನುವ ಷೋಕಿಲಾಲನೂ ನಾನಲ್ಲ. ಇಲ್ಲಿಯವರೆಗೆ ನಾನು ಸಂದರ್ಶಿಸಿದ ಸ್ಥಳಗಳಾಗಲಿ, ಸುತ್ತುವರಿದು ಅಲೆದಾಡಿದ ನಾಡುಗಳಾಗಲಿ ಕಡಿಮೆಯೆಂದೇ ಹೇಳಬೇಕು....

‘ಹಣವೆಂದರೆ ಹೆಣವೂ ಬಾಯಿ ತೆರೆಯುತ್ತದೆ’ ಎಂಬುದೊಂದು ಗಾದೆ. ‘ಹೊಗಳಿಕೆಯೆಂದರೆ ಹೆಣದಂತಿದ್ದವನೂ ಹುರುಪುದೊಟ್ಟು ನಿಲ್ಲುತ್ತಾನೆ’ ಎಂಬುದೊಂದು ಪ್ರತಿಗಾದೆ. ಹೊಗಳಿಕೆಯಾದರೆ ಸಿಹಿನುಡಿ, ಕಲ್ಲುಸಕ್ಕರೆಯಂತೆ ಎತ್ತ ಸವಿದರೂ ಸಿಹಿಯೇ. ಇದು ಭಾವನೆಗಳಿಗೆ...

ಮರೆವಿಗೂ ನನಗೂ ಬಹು ಹಿಂದಿನಿಂದ ನಂಟು ಅಂಟಿಕೊಂಡು ಬಂದಿದೆ. ಮರೆವು ಅಂದರೆ ಇಲ್ಲಿ ಅರವತ್ತರ ಅರಳು ಮರಳೂ ಅಲ್ಲ; ನಿಜದ ನೆನಹನ್ನು ಮರೆತು, ನಿಂತ ಪಾರಮಾರ್ಥಿಕ ಮರೆವೂ ಅಲ್ಲ. ಜೀವನವನ್ನು ಎದುರಿಸುಲಿಕ್ಕಾಗದೆ, ಮರೆವಿನ ವಿಶಾಲ ಬಾಹುವಿನಲ್ಲಿ ಆಶ್ರಯ ...

ಒಂದು ಮುಂಜಾನೆ ಎದ್ದೆ; ರಿಪವ್ಯಾನ್ ವಿಂಕಲನು ಹದಿನೆಂಟು ವರ್ಷಗಳ ದೀರ್ಘ ನಿದ್ರೆಯಿಂದ ಎದ್ದು ಮೊಳಕಾಲನ್ನು ಮುಟ್ಟುತ್ತಿರುವ ಗಡ್ಡವನ್ನು ಕಂಡಂತೆ ನನ್ನನ್ನು ನಾನು ವಿಪರೀತ ಎತ್ತರವಾಗಿ ಬೆಳೆದದ್ದನ್ನು ಕಂಡೆ. ಮಲಗಿದ್ದ ಹಾಸಿಗೆ ದಿನದಂತೆ ಅಸ್ತವ್ಯಸ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....