Home / ಪಿ ಧೂಲಾ

Browsing Tag: ಪಿ ಧೂಲಾ

(ವೀರಕಾಶೀಮ) ಭಾವದಲ್ಲಿ:- “ಅಸಮ ಆಶಾಪಾಶ ಹರಿದುಬಿಟ್ಟೆ ವಿಷಮ ವಾಸನೆಗಳನ್ನು ಸುಟ್ಟುಬಿಟ್ಟೆ ಈಶ ಕೋಪದ ಕತೆಯ ಬಲ್ಲೆ ನಾನು ಈಶ ಕರುಣೆಯ ಮಹಿಮೆ ಅರಿತೆ ನಾನು ಜಯಿಸಿ ಇಂದ್ರಿಯಗಳನು ವಶಕೆ ತಂದೆ ಜಯಶೀಲನಾದೆನು ತಪಸಿನಿಂದೇ ಆರುವಿನಸ್ತ್ರದಲಿ ಭವ...

ನಾನು ನನ್ನನು ತೊರೆದೆ ಧ್ಯಾನ ಗಾನದಿ ಬೆರೆದೆ ಭಾನವೇರಿತು ಹರಿದು ಸಕಲ ಪರದೆ ಭಾವಭಕ್ತಿಯ ಭರದೆ ಜೀವ ಅರ್‍ಪಿಸಿ ಕರೆದೆ ಸಾವುನೋವಿನ ತಡೆಯನೊಡೆದು ಮೆರೆದೆ ಆತನಾಡುವ ಲೀಲೆ ಭಿತ್ತಿಯಿಲ್ಲದ ಶಾಲೆ ಮಾತು ಮೌನದ ಜ್ವಾಲೆ ಬೆಳಕಿನೋಲೆ ತಿಮಿರ ಚಕ್ರದ ಮೂಲೆ ...

ಹೃದಯದಾಕಾಶವಿದು ಅದುರಿ ಗಡ ಗದ್ದರಿಸಿ ಪ್ರೇಮವಂಕುರಿಸಿ ಸೌರಭವು ಹಾರಿ ಭೇದಿಸುತ ಸಪ್ತತಲ ಇಂದ್ರಚಂದ್ರರ ಲೋಕ ಪಾರ ಅಪರಂಪಾರ ದೂರ ಸೇರಿ ಆವ ಲೋಕವ ಕಾಣೆ-ದಿವ್ಯಜ್ಯೋತಿಯ ಕಂಡೆ ಕಣ್ಣರಳಿ ಬಂತಾಗ ಭವ್ಯದೃಷ್ಟಿ ಆವ ಆಶೆಯ ಪಾಶವೆಸಗಿಲ್ಲ ಬಿರುಗಾಳಿ ಬೀಸಿ ...

ಸೌಂದರ್‍ಯಸರಸಿಯೊಳು ಕವನೀಯ ಸುಕುಮಾರ ಸಿರಿರಾಜಹಂಸವಾಗಿ ಇಂದು ಮೂಜಗ ಮೀರಿ ಅವರ ಗದ್ದುಗೆ ಏರಿ ಆಳ್ವ ಅಧಿಕಾರಿಯಾಗಿ ಋತುರಾಜ ನವತರುಣ ಮಧುವನದ ಅಭಿರಾಮ ಮೃದು ಮಂದವಾಯುವಾಗಿ ಅತಿರೂಪಲಾವಣ್ಯ ಅರೆದೆರೆದು ಬಿರಿಬಿರಿದ ಅರಳು ಹೂದುಂಬಿಯಾಗಿ ಸುರಗಂಗೆ ತೆರ...

ಬಿರಿಬಿರಿದ ಬಕುಲ ಪರಿಮಳ ಸೂಸಿಚೆಲ್ಲಿ ಹರವಿರುವ ಹಾಲ್ಬೆಳ್ಳಿ ಬೆಳದಿಂಗಳಲ್ಲಿ ತರುಲತೆಯ ಕಿರುಶಬ್ದ ಸುಳಿಗಾಳಿಯಲ್ಲಿ ಮರಿಕೋಗಿಲೆಯ ಕೂಗು ಮಧುರಧ್ವನಿಯಲ್ಲಿ ಝರಿಯೊಂದು ಚಿಮ್ಮುತಿದೆ ಗಿರಿಶಿಖರದಲ್ಲಿ ದರಿಯಲ್ಲಿ ಹರಿಯುತಿದೆ ಬಹುದೂರದಲ್ಲಿ ಹರವಿಕೊಂಡಿ...

ನೀಲವರ್‍ಣದ ಮುಗಿಲು ಮೋಡಗಳ ಸುಳಿಯಿಲ್ಲ ತಿಳಿಬೈಲು ಸೊಗಸು ನಾಲ್ದೆಸೆಗೆ ಹಸರು ಕುಸುರಿನ ಧರಣಿ ಕಣ್ತುಂಬ ಕಂಡರಳಿ ಮನಸು ಸ್ವರದೆಗೆದು ಹಾಡಿದೆನು ಸ್ವರವೇರಿ ಸುಳಿಯುತಿದೆ ಗಿರಿಗಗನದಲ್ಲಿ ಗಿರಿಯ ಶಿಖರದ ಮೇಲೆ ನಿಂತಿರುವೆ ಅರಳುತಿವೆ ಮಲ್ಲಿಗೆಯು ಅಲ್ಲ...

ಗುರುದೇವನ ಕೃತಿ ಸೃಷ್ಟಿಯು| ಹಿರಿದಾದುಪಕಾರ ಮನುಜ ಜನ್ಮದ ಮೇಲೆ || ಮರೆವುದು ಥರವಲ್ಲೆಚರ- ವಿರಿಸೆಲೆ ನೆನಪಿಲ್ಲವೇನು ಮರವಿನ ಮನವೇ || ಮಾಡಿದ ಗರ್‍ಭದಿ ಪಾಲನ | ದೂಡಿದ ಕಡುಕಷ್ಟ ದುಃಖ ವೇದನೆಗಳನು || ನೀಡಿದ ಮೊಲೆವಾಲ್ಧಾರೆಯ | ಗೂಢವು ನೆನಪಿಲ್ಲ...

ಕಾಣಬಾರದೇನೊ ಕಣ್ಣಿಗೆ ತಾಣವಾವುದೆನ್ನ ಆಸೆಗೆ. ಕುಕ್ಷಿಗಾಗಿ ಭಿಕ್ಷೆ ಬೇಡದೆ ರಕ್ಷಣಕ್ಕೆ ಕಯ್ಯ ನೀಡಿದೆ. ಅಂತರಂಗದಮಲ ಬೆಳಕಿಗೆ ಅಂತರಾಳವೆಲ್ಲ ಹಸಿದಿದೆ. ಕಣ್ಣತುಂಬ ಮೋಡ ಮುಸುಕಿದೆ ಕಣ್ಣಗೊಂಬೆ ಕುಗ್ಗಿ ಕುಸಿದಿದೆ. ಪ್ರಳಯದಗ್ನಿ ಒಳಗೆ ಅಡಗಿದೆ ಜ್ವ...

ಬಾವಿಕೆರೆ ಹೊಳೆಹಳ್ಳ ಕುಂಟೆಕಾಲುವೆ ನೀರ ಕುಡಿಕುಡಿದು ಸಾಕುಸಾಕಾಯಿತೆನಗೆ ಯಾವ ಹೊಂಡದೊಳಿಳಿದು ಎಷ್ಟು ಈಂಟಿದರು ಸಹ ತೀರಲಾರದ ತೃಷೆಯು ಒಳಗೆ ಒಳಗೆ ಒಮ್ಮೆ ಕುಡಿದರೆ ಸಾಕು ತಿರುಗಿ ತೃಷೆ ತಾನೆಂದು ಸುಳಿಯಬಾರದು ಜೀವಶುಕದ ಮುಂದೆ ಒಮ್ಮೆಯಾದರು ಇಂಥ ಅ...

ಸಂತಸದ ಸಾಗರದಿ ಶರಶೂರೆ ಸರಸಾಟ ನೆಲಕಿಷ್ಟು ಸಿರಿಯು ವಾಸಂತದಲ್ಲಿ ಅಂತವಿಲ್ಲದ ಇಂಥ ಶುಭದ ಸಂತೆಯು ಕೂಡ ಹರಿಯುವದು ಕೊನೆಗೆ ಮಳೆಗಾಲದಲ್ಲಿ ದೊರೆಯ ಭಯ ಅಲ್ಲಿಲ್ಲ ಹಿರಿಯರಂಜಿಕೆಯಿಲ್ಲ ಋತುರಾಜ ವಾಸಂತ ಕಾಲದಲ್ಲಿ ಕೊರತೆಯಿಲ್ಲದ ಸುಖವ ಬಡವಬಲ್ಲಿದರೆಲ್ಲ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...