Home / ಏನೇನ್ ತುಂಬಿ

Browsing Tag: ಏನೇನ್ ತುಂಬಿ

ಅಮ್ಮಾ ಅಮ್ಮಾ ಮೋಡವ ಮುಟ್ಟಿ ನೋಡಲು ಹೇಗಿರತೆ? ಬೆಣ್ಣೆಯ ಹಾಗೆ ಮಿದುವಾಗಿರತೇ-ನಿನ್ನ ಕೆನ್ನೆಯ ಹಾಗೆ ನುಣುಪಾಗಿರತೇ? ಹಾಸಿಗೆಯಂತೆ ಮೆತ್ತಗಿರತ್ತೇ–ಬಿದ್ದು ಹೊರಳಾಡಬಹುದೇ ಉರುಳಾಡಬಹುದೇ? ಇರುಳೆಲ್ಲಾ ನಾವದರಲಿ ಮಲಗಿರಬಹುದೇ ಚದ್ದರ ಬಿಟ್ಪು ...

ಬೇಗಡೆ ಬೇಗಡೆ! ಯಾವಾಗ ಬರುವಿ ನಮ್ ಕಡೆ? ರಾಮನ ಮಕುಟದ ಬೇಗಡೆ ಕೃಷ್ಣನ ಕಿರೀಟದ ಬೇಗಡೆ ಬೆಳ್ಳಂಬೆಳಗೇ ಬೆಳ್ಳಿಯ ಹಾಗೆ ಬೆಳಗುವ ಬಿಳಿಯ ಬೇಗಡೆ ಸೂರ್ಯೋದಯಕೆ ಚಿನ್ನದ ಹಾಗೆ ಮಿರುಗುವ ಕೆಂಪಿನ ಬೇಗಡೆ ಸೀತೆಯ ಮನಸನು ಆಕರ್ಷಿಸಿದ ಮಾಯಾಜಿಂಕೆಯ ಬೇಗಡೆ ದ್...

ಕುಂತರೂ ನಿಂತರೂ ಸಂತರೂ ಮಹಾಂತರೂ ಶಾಂತರೂ ದಿಗ್ಭ್ರಾಂತರೂ ಯಾರು ಏನೇ ಅಂತರೂ ತುಂತುರು ಮಳೆ ನಿಲ್ಲದು ಅಲ್ಲಿಯು ತುಂತುರು ಇಲ್ಲಿಯು ತುಂತುರು ಆಚೆ ತುಂತುರು ಈಚೆ ತುಂತುರು ಮೇಲೆ ತುಂತುರು ಕೆಳಗೆ ತುಂತುರು ಎಲ್ಲೆಲ್ಲಿಯು ತುಂತುರು ಅಂತೂ ಇಂತೂ ತುಂತ...

ಚಂದ ಚಂದದ ಮಕ್ಕಳು ಅಂಗಳಕೆ ಬಂದರು ತಿಂಗಳ ಬೆಳಕ ನೋಡಿ ನಲಿದು ನಾಳೆ ಬರುವೆವೆಂದರು ಚಂದ ಚಂದದ ಮಕ್ಕಳು ಹೂದೋಟಕೆ ಹೋದರು ಒಂದೊಂದು ಹೂವಿಗೂ ಪರಿಮಳವ ತಂದರು ಚಂದ ಚಂದದ ಮಕ್ಕಳು ಪಾಠಶಾಲೆಗೆ ತೆರಳಿದರು ಪಾಠ ಕಲಿತು ಓಟಕಿತ್ತು ಊಟಕೆ ಮನೆಗೆ ಬಂದರು ಮಕ್...

ಪುಚ್ಚೆ ಪುಚ್ಚೆ! ಏನಿದು ಹುಚ್ಚೆ! ತಿಂಡಿ ತಿಂದಿ ಹಾಲು ಕುಡಿದಿ ಆಮೇಲನ್ನುವಿ ಮಿಯಾಂ ಸಂಜೆವರೆಗೆ ನಿದ್ದೆ ಮಾಡಿದಿ ಕತ್ಲೆಗೆದ್ದು ವಾಕಿಂಗ್ ಹೋದಿ ಆಮೇಲನ್ನುವಿ ಮಿಯಾಂ ಪುಚ್ಚೆ ಪುಚ್ಚೆ! ಏನಿದು ಮಚ್ಚೆ! ಜಾಗ್ರತೆ ಸ್ವಲ್ಪ! ಗುಂಡಿಲಿ ಬಿದ್ದೀ! ಆಮೇಲ...

ಒಬ್ಬೊಬ್ಬರಿಗೆ ಒಂದೊಂದ್ ಚಿಂತೆ ಗುಳ್ಳೆ ನರಿಗೆ ಬಾಲದ ಚಿಂತೆ ಕಂಠಪುಚ್ಚೆಗೆ ಮೀಸೆಯ ಚಿಂತೆ ಕಾಮನ ಬಿಲ್ಲಿಗೆ ಬಣ್ಣದ ಚಿಂತೆ ನವಿಲಿಗೆ ಸಾವಿರ ಕಣ್ಣಿನ ಚಿಂತೆ ನಿನಗೇತರ ಚಿಂತೆಯೊ ಪುಟ್ಟಾ ಎಂದರೆ ಸಂತೆಯ ಚಿಂತೆ ಅಂತಾನೆ ತುಂಟ! *****...

ಕಾಸಿದ ಹಸುವಿನ ಹಾಲಿನ ಬಣ್ಣ ಜಿಂಕೆಯ ಎರಡೂ ಕೊಂಬಿನ ಕಣ್ಣ ಕಿಟಕಿಯ ಹತ್ತಿರ ಇಣುಕುತ ನಿಂತ ತಾಳೆಯ ಮರದಿಂದ ದೊಪ್ಪಂತ ಬಿದ್ದ ಎದ್ದೊರೆಸಿಕೊಂಡು ಎಲ್ಲೋದ್ನಣ್ಣ ನಮ್ಮಯ ಮುದ್ದಿನ ಮೂನ್‌ಮೂನಣ್ಣ ಹಾಲಲ್ಲಿಲ್ಲ ನೀರಲ್ಲಿಲ್ಲ ಹುಡುಕಿ ನೋಡಿದರೆ ಎಲ್ಲೂ ಇಲ್...

ಗುಂಡ್ರು ಮಲ್ಲಿಗೆ ದುಂಡು ಮಲ್ಲಿಗೆ ಬಳ್ಳಿ ತುಂಬ ಕುಂಡ್ರು ಮಲ್ಲಿಗೆ ಯಾರು ನಿನ್ನ ಕಂಡ್ರು ಮಲ್ಲಿಗೆ ಮುಗಿಬಿದ್ದು ತಗೊಂಡ್ರು ಮಲ್ಲಿಗೆ ಸಂತೆಯಲಿ ಸೇವಂತಿ ಮಲ್ಲಿಗೆ ಅರಮನೆಯಲಿ ಎರವಂತಿ ಮಲ್ಲಿಗೆ ಮುಗುಳು ಮಲ್ಲಿಗೆ ಹೊಗಳು ಮಲ್ಲಿಗೆ ನಾಳೆ ನೀನು ಅರಳ...

ಮೊಸಳೆ ಮೊಸಳೆ ಯಾತಕೆ ಇಂತು ಕಣ್ಣೀರಿಡತೀಯಾ? ಅಯ್ಯೋ ಪುಟ್ಟಾ ನನಗೇನಿಲ್ಲ ನಿನಗೇ ಎಲ್ಲಾ ಕಷ್ಟ ಮುಂಜಾನೆದ್ದು ಶಾಲೆಗೆ ಹೋಗುತಿ ಸಂಜೆಗೆ ಬಂದು ಮತ್ತೂ ಓದುತಿ ಜೀವನವೆಲ್ಲಾ ನಷ್ಟಾಂತಪ್ಟ ಅಯ್ಯೋ ಪಾಪ ಅನಿಸದೆ ಇರುತಾ ನಿನ್ನ ಕಂಡರದೇಕೋ ಪುಟ್ಟ ಹೀಗಂತದು...

123...6

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...