Home / ಏಕಾಂತ ಲೋಕಾಂತ

Browsing Tag: ಏಕಾಂತ ಲೋಕಾಂತ

ಇದು ಅಲ್ಲಮನ ಮಾತು. ನಮ್ಮ ಜನ ಆಚಾರದ ಬಗ್ಗೆ ಮಾತಾಡುತ್ತಾರೆ. ರೀತಿ ಅನ್ನುತ್ತಾರೆ. ರಿವಾಜು ಅನ್ನುತ್ತಾರೆ. ಪದ್ದತಿ ಅನ್ನುತ್ತಾರೆ. ಆದರೆ ದಿನ ನಿತ್ಯದ ಆಡು ಮಾತಿನಲ್ಲಿ ಸಂಸ್ಕೃತಿ ಅನ್ನುವ ಮಾತನ್ನು ಬಳಸುವುದಿಲ್ಲ. ಸಂಸ್ಕೃತಿ ಅನ್ನುವುದು ಸಂಸ್ಕ...

ಡಿಸೆಂಬರ್ ೧೯. ಊರು, ಚಳ್ಳಕೆರೆಯ ಸಮೀಪದ ದೊಡೇರಿ. ಆಶ್ರಮ. ರಾತ್ರಿ ಹನ್ನೊಂದು ದಾಟಿತ್ತು. ಹೊಸ್ತಿಲು ಹುಣ್ಣಿಮೆ. ಉತ್ತರ ಕರ್ನಾಟಕದಲ್ಲಿ ಒಂದೊಂದು ಹುಣ್ಣಿಮೆಗೂ ಒಂದೊಂದು ಹೆಸರಿದೆ. ಈ ಹೆಸರುಗಳು ಯಾಕೆ ಬಂದವೋ? ತುಮಕೂರಿನ ಬಳಿ ಆಕಾಶದ ಅಂಚಿನಲ್ಲಿ...

ಈ ಬಾರಿ ಕೆಲವು ಕತೆಗಳು. ಕತೆಗಳು ಕನ್ನಡಿಯಂತೆ. ಅಥವ ಹಾಗೆ ಆಗಬೇಕು, ಕತೆಯ ಕನ್ನಡಿಯಲ್ಲಿ ನಮ್ಮ ಮುಖ ನಾವು ನೋಡಿಕೊಳ್ಳದಿದ್ದರೆ ಕತೆ ಕೇಳಿ, ಹೇಳಿ ಏನು ಪ್ರಯೋಜನ? ಮೊದಲ ಕತೆ ಇದು. ಝೆನ್ ಗುರು ಒಬ್ಬ ಇದ್ದನಂತೆ. ಅವನಿಗೆ ಒಬ್ಬ ಶಿಷ್ಯ. ಶಿಷ್ಯ ಧ್ಯ...

ಅನೇಕ ಬಾರಿ ಇಂಥ ಕನಸು ಬಿದ್ದಿದೆ. ನನ್ನ ಎಡಗಡೆಗೆ ದೊಡ್ಡದೊಂದು ಬೆಟ್ಟ. ಅದರ ತುಂಬ ದೊಡ್ಡ ಕಲ್ಲು ಬಂಡೆಗಳು. ನುಣ್ಣನೆಯ, ಕಪ್ಪನೆಯ ಬಂಡೆಗಳು. ಅಲ್ಲಲ್ಲಿ ಬಂಡೆಯ ಮೇಲೆ ಮಳೆಯ ನೀರು ಇಳಿದು, ಹರಿದ ಆಗಿರುವ ಗುರುತುಗಳು. ಬೆಟ್ಟದ ಬುಡಕ್ಕೆ ಹೋಗಲು ಮಣ...

ಇದೇ ವರ್ಷ ನವೆಂಬರ್ ೨೨ ರಂದು ಪ್ರಸಾರಗೊಂಡ ಸುದ್ದಿ ಇದು. ಆಫ್ರಿಕದ ನೈಜೀರಿಯಾದ ಕಾಡುನಾ ಎಂಬಲ್ಲಿ ವಿಶ್ವಸುಂದರಿ ಸ್ಪರ್‍ಧೆಯ ಪರ-ವಿರುದ್ಧ ಗಲಭೆ ನಡೆಯಿತು. ಗಲಭೆಗೆ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಮತೀಯತೆಯ ರಂಗು ಬಂದಿತ್ತು. ನೂರ ಐದು ಜನ ಪ್ರಾಣ...

ಉತ್ತರವನ್ನು ತಿಳಿಯುವುದಕ್ಕಿಂತ ಪ್ರಶ್ನೆಯನ್ನು ಕೇಳುವುದು ಮುಖ್ಯ, ಆದರೆ ಕಷ್ಟ. ಕಳೆದ ಸುಮಾರು ಇಪ್ಪತ್ತೆಂಟು ವರ್ಷಗಳಲ್ಲಿ ನಾನು ನೋಡಿದ ನೋಡಿದ ವಿದ್ಯಾರ್‍ಥಿಗಳಲ್ಲಿ ಶೇಕಡಾ ೯೯ ಜನ ಉತ್ತರಗಳಲ್ಲಿ ಮಾತ್ರ ಆಸಕ್ತರು. ಬಹುಶಃ ನಾವು ಬೆಳೆಸಿಕೊಂಡಿರು...

ಜ್ಞಾನವು ದೊರೆತರೆ ನಾವು ಬದಲಾಗುತ್ತೇವೆ, ಶಿಕ್ಷಣದ ವ್ಯವಸ್ಥೆಯು ನಮಗೆ ಜ್ಞಾನವನ್ನು ಒದಗಿಸುತ್ತದೆ ಎಂದು ನಂಬುವುದು ಎಸ್ ಸರಿ? ಜ್ಞಾನವೆಂದರೆ ಏನು ಎಂಬ ವಿವರಣೆ ಎಲ್ಲ ಕಾಲದಲ್ಲೂ, ಎಲ್ಲ ಸಮಾಜಗಳಲ್ಲೂ ಒಂದೇ ರೀತಿಯಾಗಿ ಇರಲಿಲ್ಲ. ಈ ಮಾತನ್ನು ಒಂದು...

ಯಾಕೆ ಓದಬೇಕು? ಶಿಕ್ಷಣವೇ ಶಕ್ತಿ ಎಂಬ ಜನಪ್ರಿಯ ಘೋಷಣೆಯನ್ನು ಶಿಕ್ಷಣವೇ ವಿಶ್ಶಕ್ತಿ ಎಂದು ಬದಲಾಯಿಸಬೇಕು. ಸುಮ್ಮನೆ ನೆನಪು ಮಾಡಿಕೊಳ್ಳಿ. ಕನ್ನಡದ ಯಾವುದಾದರೂ ಗಾದೆ ಓದುವಿಕೆಯನ್ನು ಮೆಚ್ಚಿ ಶಿಫಾರಸು ಮಾಡುವಂಥದಿದೆಯೇ? ಓದಿ ಓದಿ ಮರುಳಾದ…...

ಮಾತು ಕೇಳುವುದಕ್ಕೂ ಕೇಳಿಸಿಕೊಳ್ಳುವುದಕ್ಕೂ ವ್ಯತ್ಯಾಸವಿದೆ. ಬೇರೆಯವರ ಮಾತನ್ನು ಕೇಳುವುದು ದೌರ್ಬಲ್ಯ, ಕೇಳಿಸಿಕೊಳ್ಳದೆ ಇರುವುದು ಅಪರಾಧ. ಆದರೆ ನಮಗೆಲ್ಲ ಸಾಮಾನ್ಯವಾಗಿ ಬೇರೆಯವರು ನಮ್ಮ ಮಾತು ಕೇಳಬೇಕೆಂಬ ಆಸೆ ಇರುತ್ತದೆಯೇ ಹೊರತು ಕೇಳಿಸಿಕೊಳ್...

ನಿಜವಾದ ಏಕಾಂತ ಯಾರಿಗೆ ದೊರೆತಿದೆಯೋ ಅಂಥದ್ದು ಇದೆಯೋ ಗೊತ್ತಿಲ್ಲ. ನಾವು ಏಕಾಂತ ಎಂದು ಕರದುಕೊಳ್ಳುವುದರಲ್ಲಿ ಲೋಕ ಇದ್ದೇ ಇರುತ್ತದೆ. ಲೋಕ ಎಂಬುದು ಕೂಡ ನಾವು ಏಕಾಂತದಲ್ಲಿ ಏನೇನು ಕಲ್ಪಿಸಿಕೊಳ್ಳುತ್ತೇವೋ, ಭಾವಿಸುತ್ತೇವೋ, ಅನುಭವಿಸುತ್ತೆವೋ ಅದ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...