ಇಳಾ ಕಾದಂಬರಿ

#ಕಾದಂಬರಿ

ಇಳಾ – ೧೬

0

ಪಟ್ಟಣಕ್ಕೆ ಹೋಗುವೆನೆಂದು ಕುಣಿಯುತ್ತಿರುವ ತಮ್ಮ ಕುಮಾರ ಕಂಠೀರವ ತಂಗಿಯನ್ನು ನೋಡಿಯಾದರೂ ಬದಲಾಗಲಿ, ಅವಳ ಸಾಧನೆ ಅವನಿಗೆ ಸ್ಫೂರ್ತಿಯಾದೀತೆಂದು ನಿರೀಕ್ಷಿಸಿದ್ದರು ಸುಂದರೇಶ್. ಗಂಡು ಮಗನಾದ ತಮ್ಮ ಮಗನೇ ಕೃಷಿಯಲ್ಲಿ ಆಸಕ್ತಿ ತೋರುತ್ತಿಲ. ತೋಟವೆಂದರೆ…. ತೋಟದ ಕೆಲಸವೆಂದರೆ ಅಸಡ್ಡೆ. ತಾವೇ ಎಲ್ಲವನ್ನು ಹೇಳಿ ಹೇಳಿ ಮಾಡಿಸಬೇಕಿತ್ತು. ಒಂದುವೇಳೆ ತಾವು ಏನೂ ಹೇಳದಿದ್ದರೆ ಸ್ವಂತ ಬುದ್ಧಿಯಿಂದ ಯಾವ ಕೆಲಸಕ್ಕೂ ಕೈಹಾಕದೆ […]

#ಕಾದಂಬರಿ

ಇಳಾ – ೧೫

0

ಸ್ಫೂರ್ತಿಯ ಮದುವೆ ಮುಗಿಸಿಕೊಂಡು ಮನೆಗೆ ಬಂದ ಮೇಲೂ ಇಳಾ ಅದೇ ಗುಂಗಿನಲ್ಲಿದ್ದಳು. ಅವಳ ಮದುವೆಯದ್ದೆ ಮಾತು ಮನೆಯಲ್ಲಿ. ಅಜ್ಜಿಯ ಬಳಿ, ನೀಲಾಳ ಬಳಿ ಆ ಬಗ್ಗೆ ಹೇಳಿದ್ದ ಹೇಳಿದ್ದು. ನಿಜಕ್ಕೂ ಈ ಕಾಲದಲ್ಲಿ ಇಂತಹ ಮದುವೆಗಳ ಅವಶ್ಯಕತೆ ಇದೆ. ಸುಮ್ಮನೆ ಮದುವೆಗಾಗಿ ಲಕ್ಷಾಂತರ ಖರ್ಚು ಮಾಡುವುದು ಅದೆಷ್ಟು ವ್ಯರ್ಥ. ಹಾಗಾಗಿಯೇ ಹೆಣ್ಣುಮಕ್ಕಳನ್ನು ಸಮಾಜದ ಹೊರೆ ಎಂದು […]

#ಕಾದಂಬರಿ

ಇಳಾ – ೧೪

0

ಸ್ಫೂರ್ತಿ ನಿವಾಸನ ಮನೆಯಿಂದ ಬಂದ ಮೇಲೆ ಕೊಂಚ ದಿನ ಎಲ್ಲದರಲ್ಲೂ ನಿರಾಸಕ್ತಳಾಗಿದ್ದಳು. ನಿವಾಸನ ಕುಟುಂಬದ ಕಥೆ ಕೇಳಿ, ಅವನ ಮೇಲಿದ್ದ ಗೌರವ ಆದರ ಮತ್ತಷ್ಟು ಹೆಚ್ಚಾಗಿತ್ತು. ಜೊತೆಗೆ ಅನುಕಂಪ ಕೂಡ ಸೇರಿಕೊಂಡಿತು. ಪಾಪ ನಿವಾಸ್ ಅದೆಷ್ಟು ಸಂಕಟ ಅನುಭವಿಸಿದ್ದಾರೆ. ಚಿಕ್ಕಂದಿನಿಂದಲೂ ವಿದ್ಯಾಭ್ಯಾಸ ಅಂತ ಹೆತ್ತವರಿಂದ ದೂರ ಇದ್ದರು. ಈಗ ಹೆತ್ತವರೇ ಅವರಿಂದ ದೂರ ಆಗಿಬಿಟ್ಟಿದ್ದಾರೆ. ಪಾಪ […]

#ಕಾದಂಬರಿ

ಇಳಾ – ೧೩

0

ಟೂರ್ ಮುಗಿಸಿ ಬಂದ ಇಳಾ ಮಂಕಾಗಿಯೇ ಇದ್ದಳು. ಪ್ರವಾಸದ ಆಯಾಸವೆಂದು ತಿಳಿದುಕೊಂಡ ಅಂಬುಜಮ್ಮ ‘ತೋಟಕ್ಕೆ ಒಂದೆರಡು ದಿನ ಹೋಗಲೇಬೇಡ. ಏನು ಮಾಡಬೇಕೊ, ಇಲ್ಲಿಂದಲೇ ಹೇಳು’ ಎಂದು ಕಟ್ಟುನಿಟ್ಟಾಗಿ ಹೇಳಿ ಅವಳನ್ನು ಯಾವ ಕೆಲಸ ಮಾಡೋಕೂ ಬಿಡಲಿಲ್ಲ. ಆಳುಗಳು ತಾವೇ ಬಂದು ಕೆಲಸದ ಬಗ್ಗೆ ಕೇಳಿಕೊಂಡರು. ಅಂಬುಜಮ್ಮನೇ ತೋಟಕ್ಕೆ ಹೋಗಿ ಕೆಲಸ ನೋಡಿಕೊಂಡು ಬಂದರು. ಮನೆಯಲ್ಲಿ ಕುಳಿತಿರಲು […]

#ಕಾದಂಬರಿ

ಇಳಾ – ೧೨

0

ತೋಟಕ್ಕೆ ಗಿಡಗಳ ಮಧ್ಯೆ ಬಾಳೆ ಹಾಕಬೇಕು ಅಂದುಕೊಂಡಿದ್ದ ಇಳಾ ಮೊದಲು ಮಣ್ಣು ಪರೀಕ್ಷೆ ಮಾಡಿಸಬೇಕು ಅಂತ ಗೊತ್ತಾದ ಮೇಲೆ ಅದನ್ನು ಮಾಡಿಸಿದಳು. ಮಣ್ಣು ಪರೀಕ್ಷೆ ಮಾಡಿಸಿ ಬಾಳೆ ಹಾಕಬಹುದು ಅಂತ ಗೊತ್ತಾದ ಮೇಲೆ ಅಂಗಾಂಶ ಕಸಿ ಪದ್ಧತಿಯಿಂದ ಬಾಳೆ ಬೆಳೆದರೆ ಒಳ್ಳೆ ಇಳುವರಿ ಸಿಗುತ್ತೆ ಅಂತ ಓದಿಕೊಂಡಿದ್ದ ಇಳಾ, ಅದೇ ವಿಧಾನದಲ್ಲಿ ಬಾಳೆ ಬೆಳೆಯಲು ನಿರ್ಧರಿಸಿದಳು. […]

#ಕಾದಂಬರಿ

ಇಳಾ – ೧೧

0

ಸ್ಫೂರ್ತಿ ಊರಿಂದ ಬಂದ ಮೇಲೆ ಮತ್ತೆ ಊರಿಗೆ ಹೋಗಬಾರದೆಂದು ನಿರ್ಧರಿಸಿದ್ದಳು. ತನ್ನದಿನ್ನು ಓದು ಮುಗಿದಿಲ್ಲ-ಆಗಲೇ ಅಪ್ಪ ಮದುವೆ ಮಾಡುವ ಪ್ರಯತ್ನ ನಡೆಸಿದ್ದು ಅವಳಿಗೆ ತುಂಬಾ ನೋವಾಗಿತ್ತು. ಯಾಕಾಗಿ ಅಪ್ಪ ಇಷ್ಟು ಅವಸರಿಸಿದ್ದು ಎಂದೇ ತಿಳಿಯಲಿಲ್ಲ. ಓದಿನಲ್ಲಿ ತೊಡಗಿಸಿಕೊಳ್ಳಬೇಕು ಆ ವಿಚಾರಗಳಿಗೆಲ್ಲ ತಲೆ ಕೆಡಿಸಿಕೊಳ್ಳಬಾರದೆಂದು ಮನಸ್ಸಿನಿಂದ ಗಂಡು ಬಂದಿದ್ದು. ತನ್ನನ್ನು ನೋಡಿದ್ದು. ಎಲ್ಲವನ್ನು ಕಿತ್ತುಹಾಕಲು ಪ್ರಯತ್ನಿಸಿದಳು. ಆದರೆ […]

#ಕಾದಂಬರಿ

ಇಳಾ – ೧೦

0

ಇಳಾ ಪ್ರಾಸ್ಪೆಕ್ಟ್ ತಗೊಂಡು ಮೀಟಿಂಗ್ ಮುಗಿಸಿ ಮನೆಗೆ ಬರುವಷ್ಟರಲ್ಲಿ ಸಂಜೆಯೇ ಆಗಿಬಿಟ್ಟಿತ್ತು. ಹೊಟೆಲಿನಲ್ಲಿ ನಿವಾಸ್ ಊಟ ಕೊಡಿಸಿದ್ದರಿಂದ ಹಸಿವಿರಲಿಲ್ಲ. ಮುಂದೆ ಓದಲು ಅಮ್ಮನನ್ನು ಹೇಗೆ ಒಪ್ಪಿಸುವುದು- ಎಂಬುದೇ ದೊಡ್ಡ ಚಿಂತೆಯಾಗಿತ್ತು. ಆದರೆ ಅಮ್ಮ ಶಾಲೆಯಲ್ಲಿಯೇ ಮುಂದುವರೆಯುತ್ತೇನೆ ಎಂದರೆ ಓದಲೇಬೇಕಿತ್ತು. ಅದೇ ಯೋಚನೆಯಲ್ಲಿ ಮನೆ ಸೇರಿದ್ದೇ ತಿಳಿಯಲಿಲ್ಲ. ನೀಲಾ ಆಗಲೇ ಮನೆಗೆ ಬಂದಿದ್ದಳು. ಇವಳಿಗಾಗಿಯೇ ಕಾಯುತ್ತಿದ್ದರು. ಹೊರ […]

#ಕಾದಂಬರಿ

ಇಳಾ – ೯

0

ಕಾಲೇಜಿಗೆ ಹೋಗಿ ಎರಡು ಪ್ರಾಸ್ಪೆಕ್ಟ್ ಕೊಂಡು ಸೀದಾ ಆಟೋ ಹತ್ತಿ ಪರಿಷತ್ತು ಭವನದ ಮುಂದೆ ಇಳಿದಳು. ಇದೇ ಮೊದಲ ಬಾರಿ ಸಾಹಿತ್ಯ ಪರಿಷತ್ತು ಭವನ ನೋಡುತ್ತ ಇರುವುದು. ಅದರ ಪಕ್ಕದಲ್ಲಿದ್ದ ಕಲಾಭವನವನ್ನು ನೋಡಿದ್ದಳು. ಆದರೆ ಸಾಹಿತ್ಯ ಪರಿಷತ್ತು ಭವನ ಇದೆ ಎಂಬುದೇ ಅವಳಿಗೆ ತಿಳಿದಿರಲಿಲ್ಲ. ಗೇಟು ತರೆದಿತ್ತು ಸೀದಾ ಒಳ ಬಂದಳು. ಆಷ್ಟರಲ್ಲಾಗಲೇ ಸುಮಾರು ಜನ […]

#ಕಾದಂಬರಿ

ಇಳಾ – ೮

0

ಪತ್ರಿಕೆಯನ್ನು ಓದುತ್ತಿದ್ದ ಇಳಾ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಹಿಂದಿನ ಶೈಕ್ಷಣಿಕ ಅರ್ಹತೆಯಿಲ್ಲದೆ ಪದವಿಯನ್ನು ಓದಬಹುದು. ಮನೆಯಲ್ಲಿಯೇ ಕುಳಿತು ಓದಿ ಪರೀಕ್ಷೆಗೆ ಹಾಜರಾಗಬಹುದು ಎಂದು ತಿಳಿದುಕೊಂಡಳು. ಡಿಗ್ರಿಗೆ ಕಟ್ಟಿಬಿಡೋಣವೆಂದು ಆಲೋಚನೆ ಮಾಡಿದಳು. ಯಾವುದೋ ಒಂದು ಡಿಗ್ರಿ, ಮನೆಯಲ್ಲಿಯೋ, ಕಾಲೇಜಿಗೆ ಹೋಗಿಯೋ ಒಂದು ಡಿಗ್ರಿ ಅಂತ ಆದರೆ ಸಾಕು ಎಂದುಕೊಂಡು ಬಿಕಾಂಗೆ ಸೇರೋಣ ಅಂತ ತೀರ್ಮಾನ ಮಾಡಿದಳು. ಹಾಗೆ ಮತ್ತೊಂದು […]

#ಕಾದಂಬರಿ

ಇಳಾ – ೭

0

ಪ್ರತಿನಿತ್ಯ ಪತ್ರಿಕೆಯಲ್ಲಿ ರೈತರ ಆತ್ಮಹತ್ಯೆ ಅಂತ ನೋಡಿ ನೋಡಿ ಇಳಾಳ ಮನಸ್ಸು ರೋಸಿ ಹೋಗಿತ್ತು. ಯಾಕೆ ಈ ರೈತರು ಇಷ್ಟೊಂದು ಹತಾಶರಾಗಿ ಸಾವಿಗೆ ಮೊರೆ ಹೋಗುತ್ತಾರೆ, ಇದಕ್ಕೇನು ಕಾರಣ? ಇದನ್ನು ತಡೆಯುವ ಮಾರ್ಗ ಯಾವುದು? ಕೃಷಿ ನಂಬಿಕೊಂಡಿದ್ದಕ್ಕೆ ಸಾವೇ ಗತಿಯೇ… ಈ ಬಗ್ಗೆ ಒಂದಿಷ್ಟು ಚಿಂತಿಸುವ ಮನಸ್ಸುಗಳನ್ನೆಲ್ಲ ಒಂದೆಡೆ ಸೇರಿಸಬೇಕು. ಆ ಮೂಲಕ ಏನನ್ನಾದರೂ ಮಾಡಿ […]