
ಬುವಿಯ ಚಾಪೆಯ ತೆರದಿ ಸುತ್ತಿ ಹೊತ್ತೊಯ್ವಂತೆ ಕತ್ತಲೆಹಿರಣ್ಯಾಕ್ಷ ಮುತ್ತಿಬಹ ನಕ್ಷತ್ರ- ಮೊತ್ತಮಂ ಧಿಕ್ಕರಿಸಿ ಬರುತಿಹನು ಗೆಲವಾಗಿ ದಿವಕಶಾಂತಿಯ ತಂದು. ಹೊಸರಾಜ್ಯವಾಯ್ತಿಂದು ಇದರ ಸತ್ಯವೆ ಬೇರೆ, ಶಾಸನವೆ ಬೇರೆ. ರವಿ ತೋರಿದಾ ಜಗದ ಮಾಯೆ ತೀರಿತು....
ಬಾನ ಬಣ್ಣ ಮಾಗಿಸಿ ಶಶಿ ಮೂಡುತಿಹನದೋ. ಸಂಜೆ ಹೂವನೆರಚಿ ಸಾರೆ ನಮ್ರವಾಗಿ ತಾರೆ ತೋರೆ ಶರದದಿರುಳ ಕರವ ಪಿಡಿದು ಏರುತಿಹನದೋ. ಉದ್ಯಾನದ ಪುಷ್ಪಬೃಂದ ಲಜ್ಜೆಯ ಸಿರಿ ಹೊಂದಿದಂದ ತೆಳು ಬೆಳಕಿನ ಮೇಲುದುವನು ಧರಿಸುವಂತಿದೋ. ತಮವನುಳಿದುವೆನುವ ತೆರದಿ ನಿಡಿ...
ಇಗೊ ಸಂಜೆ, ಸಖಿ, ಚೆಂಬೊಗರಿಂ ರಂಗೇರಿಹ ಜಲದಾಬ್ಜಮುಖಿ ತುಸ ತುಟಿತೆರೆದು ಶಿಶುಚಂದ್ರನ ನಗೆ ನಗುವಳು ಸ್ವಾಗತವೊರೆದು; ನಿನ್ನು ಸಿರ್ ಕಂಪ ಕೊಳ್ಳಲು ಎಲರ್ ತರುತಿಹನೀ ಬನದಲರಿಂಪ; ಓ ಚಪಲಾಕ್ಷಿ, ಎನ್ನೆದೆಯಾಗಸದೊಳು ಬಿಡು ಅಕ್ಷಿಯ ಪಕ್ಷಿ, (ಇಗೊ ಸಂ...
ಸಂಜೆಗಾಳಿಗೆ ಜಳಕ ಮಾಡಿಸೆ ಹನಿತು ಮಳೆ ಹೊಳೆಯೋಡಿತು ಬಾನ್ ಬೆಸಲೆ ಶಶಿ ನೋಡಿ ನಗುತಿರೆ ತಿರೆಗೆ ತಂಗದಿರಾಯಿತು. ಮುಗಿಲ ರೆಂಬೆಯ ಮೇಲೆ ಮಿಂಚಿನ ಹಕ್ಕಿ ರೆಕ್ಕೆಯ ಕೆದರುತ ಹವಣಿಸಿದೆ ಉಡ್ಡೀನ ಲೀಲೆಗೆ ಚಂದ್ರಲೋಕವ ಬಯಸುತ. ಕಪ್ಪೆ ಜೀರುಂಡೆಗಳು ಮೇಳದಿ...
ಕದ್ದಿಂಗಳಿನಿರುಳು: ಬುವಿ ಬಾನಂತರವೆಲ್ಲವ ಕತ್ತಲು ತುಂಬಿರಲು, ದೆಸೆಯಳಿಯದೆ ನಿಲಲು ತಮಕಿವು ಸೇತುವೊ ಎನೆ ದಟ್ಟೈಸಿರೆ ತಾರೆಗಳು, ಭೂತ ಭವಿಷ್ಯವನು ಮುಸುಕಿನೊಳವಿತಿಟ್ಟಂತಿಳೆ ಹೊದೆದಿರೆ ಮೌನವನು, ಸೆರೆಬಿದ್ದಿಹ ಕಾಲ ಹುಯಿಲಿಡುವುದೊ ಎನೆ ಜಿರ್ರನೆ ...
ಸೃಷ್ಟಿ ಸ್ವಯಂಪ್ರಭೆಯಗುಹೆಯ ದಾರಿಗನಾಗಿ ಚೇತನಂ ನಡೆಯುತಿರೆ, ವಿಸ್ಮಯಂಗೊಳಿಸಿತಿದ ನೂತನದ ನಸುಕೊಂದು ಒಂದೆಡೆಯೊಳ್ ; ಅದರಿಂದ ಸ್ಪಷ್ಟ ಮಂದದಕಾಯ್ತು ಅಹಮಸ್ಮಿ ಎಂಬರಿವು. ನಾನುಂಟು’ ಎನ್ನುತಿದು ಹಿಗ್ಗಿ ಕಣ್ಮನ ತೆರೆಯ- ಲೆನಿತು ಭಯಮಾಯ್ತದಕೆ...














