Home / Jaanakitanayaananda

Browsing Tag: Jaanakitanayaananda

ಒಮ್ಮೆ ಪ್ರೀತಿಯಲಿ ಸೋತರೇನು, ಮೋಸ ಹೋದನೆಂದೇಕೆ ಕೊರಗುವೆ ನೀನು| ನವಚೈತನ್ಯವ ತಂದುಕೊ ಸೋತು ಸೊರಗಿ ನೀ ಮಂಕಾಗದಿರು| ಹೊಸ ಜೀವನವ ನೋಡು ಹಳೆಯದನ್ನೆಲ್ಲಾ ಮರೆತುಬಿಡು|| ಏಕೆ? ಪ್ರೇಮ ಫಲಿಸಲಿಲ್ಲವೆಂದು ಯೋಚಿಸು| ನಿನ್ನ ಪ್ರೀತಿಸುವವರ ನೀ ಪ್ರೀತಿಸೆ...

ನನ್ನ ಕೆಲಸ ನಾ ಮಾಡಿದೆನೆಂದರೆ ಮುಂದಿನ ಕೆಲಸ ಯಾರು ನೋಡುವರು? ಕಾರ್ಯ ಸಂಪೂರ್ಣವಾದರೇನೇ ನಿನ್ನ ಕೆಲಸಕೆ ಬೆಲೆಯು ದೊರೆಯುವುದು|| ನಿನ್ನ ಕೆಲಸ ಮಾಡುವುದು ನಿನ್ನ ಕರ್ತವ್ಯ ಅದಕೆ ಸರಿ ಪ್ರತಿಫಲವ ನೀ ಪಡೆಯುವೆ| ಆದರೆ ಎಲ್ಲರೂ ನಿನ್ನಹಾಗೆ ಅವರವರ ಕೆ...

ನೀನಿರುವೆ ಎಲ್ಲೋ| ಸುಂದರ ಶಿಲ್ಪಕಲೆಯ ಗುಡಿಯಲೋ ಈ ವನರಾಶಿ ಪ್ರಕೃತಿಯ ಮಡಿಲಲೋ| ಶ್ರೀಮಂತರ ಸುಪ್ಪತ್ತಿಗೆಯಲೋ ಬಟ್ಟೆ ಪೀತಾಂಬರವಿರದ ಹರಕು ಬಟ್ಟೆಯನುಟ್ಟ ಮುರುಕು ಮನೆಯ ತಿರುಕನಲೋ|| ಜಗಜಗಿಸುವ ವಜ್ರಖಚಿತ ಮುತ್ತುರತ್ನ ಮುಕುಟ ಧರಿಸಿದವನಾಗಿಯೋ ಮಣಿ...

ನನ್ನ ಹೆಂಡತಿ ನನ್ನನೀಗ ಕರೆಯುವುದು| ಅದು ಐತಿ, ಅದು ಕುಂತತಿ ಅದು ಪೇಪರ್ ಓದುತ್ತತಿ, ಇಲ್ಲಾ ಟಿ.ವಿ ನೋಡ್ತುತಿ|| ಮದುವೆಯಾದ ಹೊಸದರಲಿ ರೀ, ಎನ್ರೀ, ರೀ ಬರ್ರೀ, ರೀ ಹೌದಾರೀ ಅದೂ ಒಂತರಾ ರೀ…. ಬರೀ ರೀ ಸಾಮ್ರಾಜ್ಯ| ನಂತರ ಕ್ರಮೇಣ ದಾಂಪತ್ಯ...

ಬದುಕು ಒಂದು ರುದ್ರವೀಣೆ ನಡೆಸುವವನು ನುಡಿಸು ನೀನು ಬೆರಸಿ ನಿನ್ನ ತನು ಮನವನು|| ಕಲಿಸಿ ಎಲ್ಲಾನಡೆಸುತಿರಲವನು ಭಯವದೇಕೆ ಬದುಕುವುದಕೆ?|| ನಾಳೆಯ ಚಿಂತೆಯ ಬಿಟ್ಟುನೀನು ಮುಗಿಸು ಇಂದಿನ ಕಾರ್ಯದಲ್ಲಿ ಮಗ್ನನಾಗಿ| ನಾಳೆಕೊಡುವನು; ಉಳಿದೆಲ್ಲವ ಕೊಟ್ಟೇ...

ಹೇಗೋ ನನಗೆ ತಿಳಿದಹಾಗೆ ಬರದೆ ನಿನಗೆ ಒಲವಿನೋಲೆ|| ಕಲ್ಪಿಸಿ, ಬಣ್ಣಿಸಿ ಮೆಚ್ಚಿಸೆ ಬರೆಯೆ ನಾನೇನು ಕಥೆ ಕವಿಗಾರನಲ್ಲ|| ಇದೇ ಮೊದಲ ಪ್ರೇಮದೋಲೆ ಒಲಿದ ನಿನಗದುವೆ ಹೂಮಾಲೆ ಗಾಂಧರ್ವ ವಿವಾಹ ಕರೆಯೋಲೆ|| ಇದರಲಿದೆ ನನ್ನ ನೂರಾರು ಭಾವನೆಯ ಪ್ರತಿಬಿಂಬ| ...

ಪ್ರೀತಿಯೆಂದರೇನು ಎಂದು ಅರಿಯುವ ಮುನ್ನವೇ ಸೋತು ಶರಣಾದೆನು| ನಿನ್ನ ಪ್ರೀತಿಗೆ ಪರವಶನಾಗಿ ನಿನ್ನ ನಭದಲಿ ತೇಲಿ ನನ್ನೇ ನಾನು ಮರೆತೆನು || ನಿನ್ನ ಪ್ರೀತಿಯ ಸ್ಪರ್ಶದಲಿ ನಾನು ಸಂತುಷ್ಟನಾದೆನು| ನಿನ್ನ ಪ್ರೀತಿಯ ಆಲಾಪನೆಯಲಿ ಮಿಂದು ನಾನು ಪುನೀತನಾದ...

ಪ್ರೀತಿ ಬಯಸಿ ಮರಳಿಬಂದ ಜೀವವೇ ತುಂಬು ಹೃದಯದಿ ಸ್ವಾಗತಿಸಿ ನಿನ್ನ ಸ್ವೀಕರಿಸುವೆ ನನ್ನೊಲವೇ|| ಏಕೆ ನಿನಗೆ ನಿನ್ನ ಮೇಲೆ ಸಂದೇಹವು ನಾನು ನಿನ್ನ ಸ್ವೀಕರಿಸುವುದಿಲ್ಲ ಎಂಬಾ ಆತಂಕವು| ಪ್ರೀತಿಯಲಿಂತ ಸಣ್ಣ ಕಲಹಗಳು ಸಹಜವೇ| ಪ್ರೀತಿಯಲಿ ಸೋತು ಗೆಲುವು...

ಇಷ್ಟವಿಲ್ಲದಿದ್ದರುನೂ ನಮ್ಮ ಮಕ್ಕಳನ್ನು ಇಂಗ್ಲೀಷ್ ಶಾಲೆಗಳಿಗೆ ಸೇರಿಸುತ್ತಿದ್ದೇವೆ | ಹೆಂಡತಿಯ ಒತ್ತಾಯಕ್ಕೋ, ನೆರೆಮನೆಯವರ ಅಹಿತಕರ ಜೀವನ ಸ್ಪರ್ಧೆಗೋ ಅಥವಾ ನಾವು ಹೆಚ್ಚೆಂದು ತೊರಿಸಿಕೊಳ್ಳಲೋ|| ವಾಸ್ತವದಲಿ ಕಠಿಣವೆನಿಸಿದರೂ ಕೈಯಲ್ಲಿ ಕಾಸಿಲ್ಲ...

ಕನ್ನಡವಾಗಲಿ ನಿತ್ಯ ಕನ್ನಡವಾಗಲಿ ಸತ್ಯ| ಕನ್ನಡ ಕಂಪಿನ ಹೂಮಳೆ ಸುರಿದು ಸಮೃದ್ಧಿಯಾಗಲಿ ಕರುನಾಡು| ಭವ್ಯ ಪರಂಪರೆಯ ಈ ನಾಡು|| ಕರುಣೆಯ ಕಡಲು ಈ ಕರುನಾಡು ಶಾಂತಿಗೆ ಹೆಸರು ಈ ಕನ್ನಡನಾಡು ಪ್ರೀತಿಗೆ ಮನೆಮಾತು ಈ ಕರುನಾಡು ತ್ಯಾಗಕೆ ಎತ್ತಿದಕೈ ಈ ಕನ್...

1...45678...17

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...