
ಪರಮ ಪರಮಾನಂದ ಪರಿಮಳ ಲಕ್ಷ ಪಕ್ಷಿಯ ನಗಿಸಿದೆ ಅಂತರಂಗದಿ ವಿಶ್ವರಂಗದ ರಂಗವಲ್ಲಿಯ ಬರೆದಿದೆ ನಗೆ ವಿಮಾನದ ಗಗನ ತುಂಬಿದೆ ಮುಗಿಲು ಮಲ್ಲಿಗೆ ಸುರಿದಿದೆ ದೂರ ಬೆಟ್ಟದ ಶಿಖರ ಕನ್ನಡಿ ಪ್ರೇಮ ಕರ್‍ಪುರ ಬೆಳಗಿದೆ ತಾಯ ಕಣ್ಣಿನ ಕೊಳವು ಶೀತಲ ಹಂಸೆಯಾಗಿ ತೇ...
ರಂಗು ರಂಗಿನ ನೂರು ಗಂಧದ ಆತ್ಮ ಹೂಗಳು ಅರಳಿವೆ ಚಂಗುಲಾಬಿಯು ದುಂಡುಮಲ್ಲಿಗೆ ಕೆಂಡಸಂಪಿಗೆ ನಗುತಿವೆ ಯುಗದ ಮೇಲೆ ಯುಗವು ಬಂದಿತು ಹೆಗಲು ಏರಿತು ಕಾಲವು ಕಲ್ಪ ಕಾಲಕೆ ಪುಷ್ಪತಲ್ಪವು ತೂಗುಮಂಚವ ತೂಗಿತು ಗಂಧ ಪರಿಮಳ ಪುಷ್ಪ ಅರಳಿವೆ ಗಂಧವಿಲ್ಲದ ಹೂ ಇವ...
ಆರತಿಯನೆತ್ತೀರೆ ಗಿಣಿನತ್ತು ಗರತೇರೆ ಸಿದ್ಧಗುರು ಸಿದ್ಧನಿಗೆ ಶುಭವೆನ್ನಿರೆ ಕಣ್ಣು ಕರಪುರ ದೀಪ ಮನವು ತುಪ್ಪದ ದೀಪ ಗಾನಗಂಗಾಧರಗೆ ಜಯವೆನ್ನಿರೆ ಹಸನಾಗಿ ಬನ್ನೀರೆ ಹೊಸಹೂವು ತನ್ನೀರೆ ಆರು ಚಕ್ರದ ಕಮಲ ಶುಭವೆನ್ನಿರೆ ನೀತಿ ನಿಜಗುಣ ಗೆಜ್ಜೆ ಹೆಜ್ಜೀ...
ಗಗನದಂಗಳ ಹಾರು ಹಕ್ಕಿಯೆ ಯಾವ ಜಾತಿಯು ನಿನ್ನದು ಶಾಂತ ಶೀತಲ ಮಧುರ ಗಾಳಿಯೆ ಯಾವ ದೇಶಾ ನಿನ್ನದು ಮನುಜ ಮನುಜನ ಜಡಿದು ಒಡೆದನು ಮನುಜ ದನುಜಾ ಅದನೆ ಆತ್ಮ ಧರ್ಮಾ ವಿಶ್ವ ಧರ್ಮಾ ಮರೆತು ಮಣ್ಣನು ತಿಂದನೆ ನನ್ನ ದೇವರು ಅವನ ದೇವರು ಇವನ ದೇವರು ಭಿನ್ನವೇ...
ನಾವು ಗೆಳೆಯರು ಹೂವು ಹಣ್ಣಿಗೆ ಚಿಗುರು ಕಾಯಿಗೆ ಚಲುವಿಗೆ ನಾವು ಹೊಸಯುಗ ನಗೆಯ ಹುಡುಗರು ಕಲ್ಲು ಮುಳ್ಳಿಗೆ ಕಾಡಿಗೆ ಗಿಡದ ಹಕ್ಕಿಯ ಕಂಠ ಕಂಠಕೆ ಸಿಹಿಯ ಸಕ್ಕರೆ ಹಂಚುವಾ ಮುಗಿಲ ಗಲ್ಲಕೆ ಪ್ರೀತಿ ತುಂಬಿಸಿ ಗುಡ್ಡ ಬೆಟ್ಟವ ನಗಿಸುವಾ ಹೊಲವ ನಂಬಿಸಿ ನೆ...
ನಾನು ಹೂವು ಮಧುರ ಮಾವು ನಾನು ಶಿವನ ಗಾನವು ನಾನು ಅವನು ಕಬ್ಬು ಬಾಳೆ ಅವನೆ ನನ್ನ ಪ್ರಾಣವು ಮುಳ್ಳು ಇಲ್ಲ ಕಲ್ಲು ಇಲ್ಲ ಬೆಟ್ಟವೆಲ್ಲ ಬೆಣ್ಣೆಯು ಬಂಡೆಯೆಲ್ಲ ಉಣ್ಣೆ ಬಂಡೆ ದೊಡ್ಡ ಬೆಲ್ಲ ಕಣ್ಣೆಯು ಗಂಧ ಮರದ ಚಂದ ಗಾಳಿ ನಮ್ಮ ಪ್ರೇಮ ಸಾರಿದೆ ಚಂಡು ಹ...
ಏಳು ಕಂದಾ ಮುದ್ದು ಕಂದಾ ತಂದೆ ಶ್ರೀಗುರು ಕರೆದನು ಮಕ್ಕಳಾಟವು ಸಾಕು ಮಗುವೆ ವ್ಯರ್ಥ ಸಾಕು ಎಂದನು ಕೈಯ ಹಿಡಿದನು ಕರುಣೆ ಮಿಡಿದನು ಮೇಲು ಮೇಲಕೆ ಕರೆದನು ಮೇಲು ಮೇಲಿನ ಮೇಲು ಮಠದಾ ಪ್ರೇಮ ಪಾಠವ ಕೊಟ್ಟನು ಮಾತು ಜ್ಯೋತಿರ್ಲಿಂಗವಾಗಲಿ ಮನವು ಆರತಿ ಬೆ...
ಹೂವು ಹೂವಿಗೆ ಚಿಗುರು ಚಿಗುರಿಗೆ ಪ್ರೀತಿ ಚುಂಬನ ನೀಡುವೆ ದೇವ ಗಂಗಾಧರನ ಗಾಯನ ಹಾಡಿ ಹರುಷದಿ ಕುಣಿಯುವೆ ಗಾಳಿ ಬೀಸಲಿ ಚಳಿಯು ಚಿಮ್ಮಲಿ ಹಸಿರ ಉಡುಗರೆ ತೊಡಿಸುವೆ ಬಿಸಿಲು ಕೆಂಡದ ಮಳೆಯ ಸುರಿಸಲಿ ಪ್ರೀತಿ ಕೊಡೆಯನು ಹಿಡಿಯುವೆ ಸುತ್ತಮುತ್ತ ಹಸಿರು ಹ...
ಹೆಂಗ ಹೇಳಲಿ ನಾನು ಹೇಳಲಾರದ ಹಿಗ್ಗು ಯೋಗ ನಂದೀಶ್ವರನ ಶಿಖರ ಕಂಡೆ ಭೋಗನಂದಿಯು ಕೆಳಗ ಯೋಗನಂದಿಯು ಮ್ಯಾಗ ನಂದಿ ಬೆಟ್ಟದ ಖುಶಿಯ ಬೆಳಕು ಕಂಡೆ ಬೆಟ್ಟ ಬೆಟ್ಟದ ಮ್ಯಾಲೆ ಗಟ್ಟ ಗಟ್ಟದ ಮಾಲೆ ನೋಡಿಲ್ಲಿ ನಿಂದಾನು ನಂದಿದೇವಾ ಇವನೆ ಪ್ರೀತಿಯ ದೇವಾ ವಿಶ್ವ...
ನನ್ನತನವನು ನಿನ್ನತನದಲಿ ಗಂಧದಂತೆ ತೇಯುವೆ ನನ್ನ ಬದುಕಿನ ತಾಳ ತಮ್ಮಟೆ ಗಂಟು ಮೂಟೆ ಕಟ್ಟುವೆ ನಿನ್ನ ಪಾದಕೆ ಒಟ್ಟುವೆ ಅಂತರಂಗದ ಹುಚ್ಚು ಆಸೆಯ ಬಿಚ್ಚಿ ಬಿಡಿಸಿ ಚಲ್ಲುವೆ ಕಲ್ಲು ಮಣ್ಣು ಮುಳ್ಳು ಕೊಟ್ಟು ಹಾಲು ಬೆಣ್ಣೆ ಪಡೆಯುವೆ ಬಾಳೆ ಹಣ್ಣು ಸವಿಯ...













