Home / Kannada

Browsing Tag: Kannada

ಬಸ್ಸು ಹೊರಡುವ ಸಮಯವಾಯ್ತು. ಜೇಬಿನೊಳಗೆ ಎರಡೂ ಕೈಗಳನ್ನು ಇಳಿಬಿಟ್ಟು ನಿಂತಿದ್ದ ಶಂಕರನನ್ನೇ ಕಿಟಕಿಯಿಂದ ದಿಟ್ಟಿಸಿದಳು ಸುಮಿತ್ರಾ. ಆ ನಿರ್ಭಾವದ ಮುಖದಲ್ಲಿ ಯಾವ ವೇದನೆಯ ಎಳೆಯನ್ನು ಅವಳಿಂದ ಹುಡುಕಲಾಗಲಿಲ್ಲ. ಮರುಕ್ಷಣವೇ ಮನಸ್ಸು ನಿರಾಶೆಗೊಂಡಿತ...

ಸ್ಕೂಟರ್ನಿಂದ ಹಿಂದೆ ಕುಳಿತಿದ್ದ ಹೆಂಡತಿ ಬಿದ್ದು ಅವಳ ತುಟಿ ಹನುಮಂತನ ಮುಸುಡಿ ಆಯಿತು. “ಡಾಕ್ಟರ್ ಬಳಿಗೆ ಹೋದಾಗ ಪರೀಕ್ಷೆ ನಡಯಿತು.” ನೋಡಿ ಮೇಲ್ತುಟಿಗೆ ಹೊಲಿಗೆ ಹಾಕಬೇಕು, ನೀವು ಒಪ್ಪಿಗೆ ಕೊಟ್ಟರೆ ಮುಂದುವರೆಯುತ್ತೇನೆ. &#8220...

ನಾನು ಎಲ್ಲಿ ಕರೆದೆ ನಿನ್ನ? ನೀನೆ ಬಂದೆ ಬೆನ್ನಿಗೆ ಮುಗಿಲನೇರಿ ಅಲೆಯುತಿದ್ದ ನನ್ನ ಇಳಿಸಿ ಮಣ್ಣಿಗೆ ಕಾಡಿ ಬೇಡಿ ಭಾಷೆ ಹೂಡಿ ಹನಿ ಚಿಮ್ಮಿದೆ ಕಣ್ಣಲಿ ಗಂಡು ಬರಿಯ ಬೆಂಡೆ ಹೇಳು? ರುಚಿ ಮೊಳೆಯಿತು ಹಣ್ಣಲಿ ಹಾಲು ಜೇನು ಹಣ್ಣ ರಸದ ಅಭಿ‍ಷೇಕವ ಸಲಿಸಿ ...

ಆಕಾಶ ಸಾಕ್ಷಿಯಾಗಿ ಸೂರ್ಯನೊಂದಿಗೆ ಕೂಡಿದ ಹೊಟ್ಟೆ ಉಬ್ಬುಬ್ಬಿನ ಮರುಭೂಮಿಯ ಬಸಿರು, ಸುಖವಾಗಿ ಪ್ರಸವಿಸಲೇ ಇಲ್ಲ ಬಯಕೆಯಲಿ ಬೆಂದು ಓಯಸಿಸ್ ನೀರು ಕುಡಿದು ತನ್ನ ಸಿಟ್ಟಿಗೆ ತಾನೇ ಕ್ಯಾಕ್ಟಸ್ ಗಂಟಿಯಾಗಿ ಮೈ ಪರಿಚಿಕೊಂಡು, ದಳ್ಳುರಿಗೆ ಸಿಡಿದೆದ್ದ ಬಸ...

ಮಾನವನ ನಾಗರೀಕತೆಯ ಪ್ರಾರಂಭದಿಂದಲೇ ಸಮಯವನ್ನು ಅಳೆಯುವ ಗಡಿಯಾರಗಳ ಉಪಯೋಗವಾಗುತ್ತಲಿವೆ. ಪುರಾತನ ಅಳತೆಯ ವಿಧಾನಗಳು ಅಷ್ಟೇನೂ ಕರಾರುವಾಕ್ಕಾಗಿರಲಿಲ್ಲ. ಇದೀಗ ಸಮಯವನ್ನು ಕರಾರುವಾಕ್ಕಾಗಿ ತೋರಿಸುವ ಅತ್ಯಂತ ಸುಧಾರಿತ ಗಡಿಯಾರಗಳು ರಚನೆಯಾಗುತ್ತಲಿವೆ...

ಒಂದಿಷ್ಟೇ ಹೀರಿ ಪಕ್ಕಕ್ಕಿಟ್ಟಿದ್ದ ಕಾಫಿ ಕಪ್ಪಿನೊಳಗೆ ಭರ್ರನೆ ಹಾರಿ ಬಂದ ಪಾಪದ ನೊಣ ಸರ್ರನೆ ಬಿದ್ದಾಗ ಕರುಳು ಚುರ್ರೆಂದು ಎರಡೇ ಬೆರಳು ಕಾಫಿಯಲ್ಲಿ ಅದ್ದಿ ನೊಣ ಹೊರತೆಗೆದೆಸೆದು ‘ಜೀವ ಉಳಿಸಿದೆ’ ಎಂದು ಬೀಗುವಾಗ ರೆಕ್ಕೆ ಕೊಡವಿ ಫಕ್ಕನೆದ್ದ ಅದೇ...

ಬೆಳಗಿನ ಹೊತ್ತಿನಲ್ಲಿ ವಿಧಾನಸೌಧದ ಮುಂದೆ ಗುಡಿಸುವವರಿಗೆ ನಿನ್ನೆಯ ಘೋಷಣೆಗಳು ದೊರಕುತ್ತವೆ ಕುಪ್ಪೆಯನ್ನು ಪುಟ್ಟಿಗಳಲ್ಲಿ ತುಂಬುವಾಗ ಗಾಜು ಚೂರುಗಳಂತೆ ವಾಗ್ದಾನಗಳು ಚುಚ್ಚಿಕೊಳ್ಳುತ್ತವೆ *****...

ಒಬ್ಬ ರಾಜನಿದ್ದನು. ಅವನಿಗೆ ಜಾಣನಾದ ಮಂತ್ರಿಯಿದ್ದನು. ಮಂತ್ರಿಯ ಸಹಾಯದಿಂದ ರಾಜ್ಯವಾಳುತ್ತ ರಾಜನು ಸುಖದಿಂದ ಇದ್ದನು. ರಾಜನು ಒಂದು ದಿವಸ ಮಂತ್ರಿಮಾನ್ಯರೊಡನೆ ತನ್ನೋಲಗದಲ್ಲಿ ಕುಳಿತಾಗ ನೆರೆಯ ರಾಜನ ಕಡೆಯಿಂದ ಒಬ್ಬ ದೂತನು ಬಂದು, ತಾನು ತಂದ ಪತ್...

“ವಿವಾಹ ಬಂಧನಕ್ಕೂ ಪೋಲೀಸ್ ಬಂಧನಕ್ಕೂ ವ್ಯತಾಸ ಹೇಳು ನೋಡೋಣ” ಶಾಮಣ್ಣ ಕೇಳಿದ. ಶೀನಣ್ಣ: ಪೋಲೀಸ್ ಬಂಧನವಾದಲ್ಲಿ ಕನಿಷ್ಠಪಕ್ಷ ಜಾಮೀನಿನ ಮೇಲಾದರೂ ಬಿಡಿಸಿಕೊಳ್ಳಬಹುದು- ವಿವಾಹ ಬಂಧನಕ್ಕೆ ಸಿಲುಕಿದರೆ ಪರಮಾತ್ಮನೇ ಕಾಪಾಡಬೇಕು! ***...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...