ಹನಿಗವನ ಸಂಬಂಧ ಜರಗನಹಳ್ಳಿ ಶಿವಶಂಕರ್ November 28, 2022December 28, 2021 ಶಾಶ್ವತವಾಗಿರುತ್ತೆ ನಮ್ಮ ನಡುವೆ ಕಂದರ ಕಾಲುವೆ ಕಟ್ಟುತ್ತಿರಬೇಕು ಕಾಲ ಕಾಲಕ್ಕೆ ಸೇತುವೆ ***** Read More
ಹನಿಗವನ ಸೂರು ಶ್ರೀವಿಜಯ ಹಾಸನ November 27, 2022December 29, 2021 ನಂಬಿ ಕೆಟ್ಟವರಿಲ್ಲವೋ ಹರಿಯ; ದಾಸರೆಂದರು ನಂಬಿ ಕೆಟ್ಟೆ ನಾ ಮಾರಿ ಮನೆ ಮಾರು ಮಾಡಿದ ಊರಿಂದೂರಿಗೆ ಗಡಿಪಾರು ಆದರೂ ಕಳಿಸಿರುವೆ ಅವಸರದಿ ತಾರು ಬೇಕೇಬೇಕೆಂದು ನೆಮ್ಮದಿಯ ಸೂರು ***** Read More
ಹನಿಗವನ ಹಾಡು ಪರಿಮಳ ರಾವ್ ಜಿ ಆರ್ November 26, 2022December 19, 2021 ಮನವೊಂದು ಬಯಕೆಯ ಗೂಡು ಅಲ್ಲಿ ಕೇಳುವುದೆಲ್ಲ ಬೇಕು ಬೇಡುಗಳ ಹಾಡು ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೦೨ ಶರತ್ ಹೆಚ್ ಕೆ November 25, 2022November 28, 2021 ಹುಮ್ಮಸ್ಸು ಹುಟ್ಟಲು ಜೀವಸೆಲೆ ಹೊತ್ತ ಬಸ್ಸು ಬರ್ರೆಂದು ಮನದ ನಿಲ್ದಾಣದಲ್ಲಿ ಬಂದು ನಿಲ್ಲಲು ಅವಳ ನೆನಪೊಂದು ಸಾಕು ***** Read More
ನಗೆ ಹನಿ ಇಷ್ಟ ತೈರೊಳ್ಳಿ ಮಂಜುನಾಥ ಉಡುಪ November 24, 2022February 27, 2022 ಹುಡುಗಿ: "ನನ್ನಮ್ಮನಿಗೆ ನೀವು ತುಂಬಾ ಹಿಡಿಸಿದ್ರಾ..." ಹುಡುಗ (ನಾಚಿಕೆಯಿಂದ): "ಏನೇ ಆಗ್ಲಿ ನಾನು ಮದುವೆಯಾಗುವುದು ನಿನ್ನನ್ನೇ. ನಿಮ್ಮ ಅಮ್ಮನಿಗೆ ನನ್ನ ಮರೆಯಲು ಹೇಳು.." ***** Read More
ಹನಿಗವನ ರೂಪಾಂತರ ಜರಗನಹಳ್ಳಿ ಶಿವಶಂಕರ್ November 21, 2022December 28, 2021 ಕಾಲಲ್ಲಿ ತುಳಿದ ಮಣ್ಣು ಗಡಿಗೆಯಾಗಿ ಏರುತ್ತದೆ ತಲೆಯನ್ನು ***** Read More
ಹನಿಗವನ ಗೀಳು ಶ್ರೀವಿಜಯ ಹಾಸನ November 20, 2022December 29, 2021 ಚುಟುಕ ಬರೆಯುವುದು ನನಗೊಂದು ಗೀಳು ಎಲ್ಲವೂ ಯಥಾರ್ಥವಲ್ಲ ಅರೆಬರೆ ಸುಳ್ಳು ಬರೆದುದು ಹತ್ತರಲಿ ಒಂಬತ್ತು ಜೊಳ್ಳು ಒಂದು ಮುತ್ತಾದಾಗ ನಾನಾದೆ ಮರುಳು ***** Read More
ಹನಿಗವನ ಚುಚ್ಚು ಮಾತು ಪರಿಮಳ ರಾವ್ ಜಿ ಆರ್ November 19, 2022December 19, 2021 ಚುಚ್ಚು ಮಾತು ಅಸ್ತ್ರ ಬಿಚ್ಚು ಮಾತು ಮನದ ಅಂಗ ವಸ್ತ್ರ ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೦೧ ಶರತ್ ಹೆಚ್ ಕೆ November 18, 2022November 28, 2021 ಸಂಭ್ರಮದ ಎದೆಯ ಮೇಲೆ ಅಮರಿಕೊಂಡಿದ್ದ ಹತಾಶೆಯ ಪೊರೆ ಅವಳ ಒಲವಿನ ದಾಳಿಗೆ ಈಡಾಗಿ ಕಳಚಿಕೊಳ್ಳುತ್ತಿದೆ ***** Read More
ನಗೆ ಹನಿ ಮಾರುತಿ ತೈರೊಳ್ಳಿ ಮಂಜುನಾಥ ಉಡುಪ November 17, 2022February 27, 2022 ತಿಮ್ಮ: "ಸುಮಾರು ೮೦೦ ವರ್ಷದ ಹಿಂದಿನ ಹನುಮಂತ ದೇವಸ್ಥಾನವನ್ನು ಶಾರ್ಟ್ ಅಂಡ್ ಸ್ವೀಟಾಗಿ ಹೇಗೆ ಹೇಳ್ತಿ.." ಶೀಲಾ: "ಮಾರುತಿ ೮೦೦" ***** Read More