Home / Nagarekha Gaonkar

Browsing Tag: Nagarekha Gaonkar

ಅನಾದಿಕಾಲದಿಂದಲೂ ಸಾಮಾಜಿಕ ರೂಪರೇಷೆಗಳು ನಿರಂತರ ಪೃಕ್ರಿಯೆಗೆ ಒಳಗಾಗುತ್ತಲೇ ಬರುತ್ತಿವೆ. ಭಾರತೀಯ ಕೌಟಂಬಿಕ ಮೌಲ್ಯಗಳು ವಿಶ್ವಕ್ಕೆ ಮಾದರಿ. ಕೌಟಂಬಿಕ ಹಿನ್ನೆಲೆಯಲ್ಲಿ ಅವಿಭಕ್ತ ಕುಟುಂಬ, ವಿಭಕ್ತ ಕುಟುಂಬ, ಅಣು ಕುಟುಂಬ ಸಂಬಂಧಗಳು ಎಲ್ಲವೂ ಕಾಲಕ...

ಮಾನವ ಸಂಬಂಧಗಳು ತೀರಾ ಸಂಕೀರ್‍ಣ, ಕ್ಲಿಷ್ಟಕರ. ಇಂದಿಗೆ ಬೇಡವೆನಿಸಿದ್ದು ಮುಂದೊಂದು ದಿನ ಆಪ್ತವಾಗುತ್ತದೆ. ಆಪ್ತವಾದ ವಸ್ತು ವ್ಯಕ್ತಿಗಳು ಅಸಹ್ಯವಾಗುತ್ತವೆ. ಇಂತಹುದೇ ಪ್ರೇಮ ಸಂಬಂಧದ ಸಂದಿಗ್ಧತೆಯಲ್ಲಿ ಕಂಡುಬರುವ ಪಾತ್ರಗಳು ಎಮಿಲಿ ಬ್ರೊಂಟೆಯ W...

ಗಂಡು ವಿಸ್ತಾರವನ್ನು ಆಪೇಕ್ಷಿಸಿದರೆ ಹೆಣ್ಣು ಆಳವನ್ನು ಬಯಸುತ್ತಾಳೆ ಎಂಬ ಮಾತಿದೆ. ಹೌದಲ್ಲ. ಗಂಡು ಎಷ್ಟು ಸಲೀಸಾಗಿ ತನ್ನ ಸ್ವಗತವನ್ನು ತೋಡಿಕೊಂಡು ಬಿಡುತ್ತಾನೆ. ವಿಸ್ತಾರದ ಆಕಾಂಕ್ಷೆಯಲ್ಲಿ ಅತೃಪ್ತನಾಗುತ್ತ ಹೋಗುವುದು ಆತನ ಜಾಯಮಾನವೇ? ಅದು ಆತ...

ಅದು ರವಿವಾರ. ಹಾಗಾಗಿ ಸಂತೆ ದಿನ. ಸಂತೆಯಲ್ಲಿ ತರಕಾರಿ ಕೊಳ್ಳುವ ಸಲುವಾಗಿ ಹೊರಟಾಗ ತರಕಾರಿ ಮಂಡಿಯ ಹೊರ ಪ್ರವೇಶದ್ವಾರದಲ್ಲೇ ಆ ಇಬ್ಬರು ದಂಪತಿಗಳು ಹುಣಸೇ ಹಣ್ಣು ಇಟ್ಟು ಮಾರುತ್ತಿದ್ದರು. ತಾಯಿಯ ತೊಡೆಯೇರಿದ ಕಂದನನ್ನು ಸಂಭಾಳಿಸುತ್ತಾ ಆ ಮಹಾತಾಯ...

ಆಕೆಯೊಬ್ಬ ವಿದ್ಯಾವಂತೆ. ಬುದ್ದಿವಂತೆ. ಆದರೀಗ ಗೃಹಿಣಿ.. ವಿವಾಹವಾಗಿ ನಾಲ್ಕೈದು ತಿಂಗಳುಗಳಷ್ಟೇ ಕಳೆದಿವೆ. ಆಕೆಯ ಆ ವಯಸ್ಸು ಸೊಗಸಾದ ಪ್ರೇಮದ ಬಯಕೆಯನ್ನು ವ್ಯಕ್ತಪಡಿಸುವ, ಪತಿಯ ಜೊತೆಜೊತೆಯಲ್ಲಿ ಬಹುಹೊತ್ತು ಇರಬೇಕೆನ್ನಿಸುವ, ರಸಮಯ ಜೀವನದ ಆಕಾಂ...

“ಅಲ್ಲೊಂದು ಕಾಗೆಗಳ ಆಕ್ರಮಣಕ್ಕೆ ಗುರಿಯಾದ ಸಾಯುತ್ತ ಬಿದ್ದಿರುವ ಹದ್ದು. ಸೀತಾ ಅದನ್ನು ಉಳಿಸುವ ಪ್ರಯತ್ನ ಮಾಡುತ್ತಾಳೆ. ಆದರೆ ಉಪಯೋಗವಾಗುವುದಿಲ್ಲ. ಗಾಯಗೊಂಡು ಜೀವಕ್ಕಾಗಿ ಅಸಹಾಯಕತೆಯಲ್ಲಿಯೇ ಗುದ್ದಾಡುತ್ತಿರುವ ಆ ಹದ್ದು ತಪ್ಪಿಸಿಕೊಳ್ಳ...

ಡಾ. ಸೌಮ್ಯ ಸ್ವಾಮಿನಾಥನ್ ವಿಶ್ವ ಆರೋಗ್ಯ ಸಂಸ್ಥೆಯ ಭಾರತದ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ. ಭಾರತದ ಮಟ್ಟಿಗೆ ಪ್ರಪ್ರಥಮ ಬಾರಿಗೆ ಒಬ್ಬ ಮಹಿಳೆ ಆಯ್ಕೆಯಾಗಿರುವುದು ಸ್ತ್ರೀ ಸಮಾಜ ಹೆಮ್ಮೆ ಪಡುವಂತಹ ಸಂಗತಿ. ಮಹಿಳೆಗೆ ಅಸಾಧ್ಯವೆನ್ನುವಂತಹ ಜವಾಬ...

ಆಧುನಿಕ ಮಹಿಳಾ ಜಗತ್ತು ತನ್ನದೇ ಸ್ವಯಂಕೃತ ಸಾಧನೆಯ ಸರಣಿಯಲ್ಲಿ ಸಾಗಲು ಅತೀ ಜರೂರತ್ತು ಇರುವುದು ಆಕೆಗೆ ಶಿಕ್ಷಣದ ಅಗತ್ಯತೆ. ಶೈಕ್ಷಣಿಕ ಕ್ಷಮತೆಯಲ್ಲಿ ಆಕೆಯ ಹೆಜ್ಜೆಗಳು ದಿಟ್ಟ ದಾಪುಗಾಲು ಹಾಕಬೇಕಿದೆ. ಶೈಕ್ಷಣಿಕ ಅಗತ್ಯತೆಯ ಅರಿವು ಇನ್ನೂ ಹಲವು ...

ಫೆಬ್ರುವರಿ ತಿಂಗಳ ಮಯೂರ ಪತ್ರಿಕೆಯಲ್ಲಿ ನಮ್ಮ ಉತ್ತರ ಕನ್ನಡದ ಹೆಮ್ಮೆ ಖ್ಯಾತ ಕಥೆಗಾರ ಶ್ರೀಧರ ಬಳಿಗಾರರು ನನ್ನ ಕಥಾ ಪ್ರಸಂಗ ಎಂಬ ಸ್ವ ಅನುಭವವನ್ನು ದಾಖಲಿಸಿದ್ದರು. ವಾಸ್ತವ ಮತ್ತು ಕಲ್ಪನೆಗಳ ನಡುವಿನ ವಿಚಿತ್ರವಾದ ಮನೋವ್ಯಾಪಾರದ ಕಣದಲ್ಲಿ ಅರೆ...

ಬದಲಾವಣೆಯ ಕಾಲಘಟ್ಟದಲ್ಲಿ ಹೆಣ್ಣು ಮತ್ತಾಕೆಯ ಸ್ಥಿತಿಗತಿಗಳ ಬಗ್ಗೆ, ಸಮಾನತೆಯ ಬಗ್ಗೆ ಚರ್‍ಚಿಸುವ ಅದಕ್ಕಾಗಿ ಹೋರಾಟ ನಡೆಸುತ್ತಿರುವ ಉಚ್ಪ್ರಾಯ ಕಾಲವಿದು. ಆದರೆ ಅದರೊಂದಿಗೆ ಆಕೆಯ ಮೇಲಾಗುತ್ತಿರುವ ದೌರ್‍ಜನ್ಯಗಳ ಪ್ರಮಾಣಗಳೂ ಅಧಿಕವಾಗುತ್ತಿರುವ ಸ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...