Home / Chandrashekara AP

Browsing Tag: Chandrashekara AP

ಪರಿಸರ ದಿನದ ಸಂಭ್ರಮದೊಳೊಬ್ಬ ವಿಚ್ಛೇದಿತನು ಪಕ್ಷಿ ತಾ ಗುಟುಕಿಡುವ ಛಾಯಾ ಚಿತ್ರವನು ಪ್ರಕಟಿಸುತ ಪ್ರಶಸ್ತಿಗಳೇನ ಪಡೆದೊಡದೇನು? ಪಾಠವೆಲ್ಲವು ಜೀವ ಜಗ ಸಂಬಂಧ ವಿಚ್ಛೇದನೆಗ ಪ್ಪಂತೆ ನಡೆಯುತಿರಲೇನು ಶಾಲೆಯದೇನು? – ವಿಜ್ಞಾನೇಶ್ವರಾ *****...

ಅವರಿಗವರೇ ತುತ್ತಿನುಂಡೆಯ ಮಾಡದಿರೆ ಕೆಟ್ಟಿ ರುವ ಪರಿಸರವನುಳಿಸುವೆವೆಂದು ಬಿತ್ತಿನುಂಡೆಯನೆ ಸೆವ ಮಕ್ಕಳಾಟಕದೇನೆಂಬೆ? ಆಟವದು ಪಾಠವ ಪ್ಪಾವ ಲಕ್ಷಣವು ತೋರದಲಾ ಆ ಕ್ರಿಕೆಟ್ಟಿನೊಳೆ ಸೆವ ಚೆಂಡಿಗೆ ಮತಿ ಕಳೆವ ಮಕ್ಕಳಿಳೆಯ ತುಂಬಿರಲು – ವಿಜ್ಞಾ...

ಕೃಷಿಗೊಂದು ಕಟ್ಟಡಕೊಂದು ಕಾರ್‍ಖಾನೆಗೊಂದು, ಕಾಲಸೂಚಿಗೊಂದು ಕಾಣೀ ಜಗದೊಳೊಂದೊಂದಕೊಂದೊಂದು ಕೃತಿ ಸೂತ್ರವಾದೊಡಂ ಒಂದ ಕೊಂದಿನ್ನೊಂದು ಬದು ಕುವುದೇ ಕಾಲಸೂತ್ರವಿದರೊಳೆಲ್ಲವೂ ಬಂಧಿ – ವಿಜ್ಞಾನೇಶ್ವರಾ *****...

ಕೆಲಸವಾವುದಾರದನು ಮನಕೊಟ್ಟು ಮಾ ಡಲದುವೆ ತಪವೆಂಬುದು ದಿಟವಾದೊಡಂ ಬಲು ತಪದೊಳುತ್ಕೃಷ್ಟ ಮರದಡಿಯ ತಪವು ಒಲವಿನೊಳೆಲ್ಲ ಮರವು ತಾನಿರ್‍ಪಲ್ಲೆ ತಪದೊಳಿ ರಲದನು ಗಣಿಸುವೆಲ್ಲ ಕರ್‍ಮವು ಯೋಗ್ಯ ತಪವೆನಲು – ವಿಜ್ಞಾನೇಶ್ವರಾ *****...

ಬೀಳುತಿವೆಯನುಭವದ ಮರಗಳೊಂದೊಂದೆ ಬೆತ್ತಲೆಯ ಪೇಟೆ ಸಾಕಲಿಕೆಂದು ಬರಿದು ಓದಿನ ಕಾಗದವಿರಲಲ್ಲಿ ಮುಂದು ಬರಡು ಮರಗಳದೇಕೆಂದು ಕೇಳುವುದೆ ಭವದೊಳನುಭಾವವೆನಿಸಿಹುದು – ವಿಜ್ಞಾನೇಶ್ವರಾ *****...

ಬಾಳ್ ಪಿಡಿವ ಬಂಡಾರಿಗೆಂತೋ ಅಂತೆಮ್ಮ ಬಾಳಿಗಿರಲೊಂದಷ್ಟು ಸಂಯಮ ನಿಯಮ ಬಾಳ ಲೋಚನನ ಒಲಿಸುವ ನೇಮ ಬಾನ ಬೆಳಕನೆ ಬಾಳಾಗಿಸುವ ಹಸುರು ಭಾಗ್ಯವ ಕೆರೆದು ಬೋಳಿಪ ಮುನ್ನ – ವಿಜ್ಞಾನೇಶ್ವರಾ *****...

ಕಳೆಯೆಂದೊಡದು ಇಳೆಯ ಜೀವಕಳೆಯಾದೊಡಂ ಮಳೆ ನೀರನದುವೆ ಇಂಗಿಸಲೆಮ್ಮ ಬಾವಿ ತುಂಬಿದೊಡಂ ಕಳೆ ತಾ ಬೆಳೆಯಲಾಗದೆಮ್ಮ ಬೆಳೆಗಿಂತ ಮೇಲೆ ಬೆಳೆದುದಾದೊಡೆಮ್ಮ ಬದುಕು ಹೆಮ್ಮರಂಗಳ ಮೇಲೆ ಬೆಳೆಯಲಾರದಾ ಹಣವು ಬದುಕಿಂದ ಮೇಲೆ – ವಿಜ್ಞಾನೇಶ್ವರಾ *****...

ಮೆದು ದೇಹ, ಮಧುಮೇಹದೊಳೊರಲಿದ ಜೀವ ಪಾದರಕ್ಷೆಯಿಲ್ಲದೊಂದು ಹೆಜ್ಜೆಯನಿಡಲಾಗದಾ ಓದಿಹರೊಮ್ಮೊಮ್ಮೆ ಜಾನಪದವನುದ್ಧರಿಪ ಮೊದ್ದು ಮಾತನಾಡಿದೊಡೇನುಪಯೋಗ ? ಪಾದದಚ್ಚುಳಿವಾರ್‍ದ್ರತೆಯಳಿಸಿ ಚಪ್ಪಲಡಿಯಿಟ್ಟಿರಲು – ವಿಜ್ಞಾನೇಶ್ವರಾ *****...

ಅನರಣ್ಯ ಪರಿಣಾಮದೊಳಿಂದು ಬೀಳ್ವಾ ಮಳೆಗೆಲ್ಲ ಮಣ್ ಕೊಚ್ಚಿ ಹರಿವಂತೆ ನಗರದೋದಿನ ಭರಕೆಲ್ಲ ಜಾನಪದ ಕರಗಿ ಕೆಂಪೇರುತಿರೆ ಬರಿಗಾಲ ನಡಿಗೆ ಯನುಭಾವವನೆಂತುಳಿಸುವರೋ ಬೂಟಿನುದ್ಯೋಗಿಗಳು ? ಜಾನಿಸುವೊಡಾ ಬೂಟೆ ಪದ ಮುದ್ರೆಯಳಿಸುತಿರಲು – ವಿಜ್ಞಾನೇಶ...

ಸಂಗೀತ ಸಾಹಿತ್ಯ ನೃತ್ಯ ಚಿತ್ರ ಚಲಚಿತ್ರ ವಿಂತೆಲ್ಲ ಕಲಾ ತರಂಗಗಳು ಪ್ರಕೃತಿಯಂತ ರಂಗದೊಳಗಿಂದ ಅನುರಣಿಸಿದೊಡದನು ಸುಂದರ ವೆಂದೆನಬೇಕಲ್ಲದಿದೇನನುಗಾಲ ಪೇಟೆಯೊಳು ಕರಿದೆಣ್ಣೆ ಬೋಂಡ ತಿನುತಿರಲು ಸಿಡಿದೆಣ್ಣೆ ಕಲೆಯನೈಸಿರಿ ಎನ್ನುವುದೋ? – ವಿಜ್...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...