ಗಳಿಗೆಬಟ್ಟಲ ತಿರುವುಗಳಲ್ಲಿ – ೯೭

ಹಸಿವಿಂಗಿಸುವುದೊಂದೇ ರೊಟ್ಟಿಗೆ ಹೊರಿಸಿದ ಹೊಣೆ. ಅಸ್ಮಿತೆಯ ಅರಿವಿನ ಬೀಜ ಏಕೆ ಬಿತ್ತು ಅದರೆದೆಗೆ? ತನ್ಮಯತೆಯಲಿ ಹಸಿವಿನಲಿ ಕರಗಲಾಗದ ಶಾಪ ತಾನೇ ಹೊತ್ತಿದೆ ಬೆನ್ನಿಗೆ. *****

ಗಳಿಗೆಬಟ್ಟಲ ತಿರುವುಗಳಲ್ಲಿ – ೯೩

ಚೆಂಡು ಸದಾ ಹಸಿವಿನಂಗಳದಲ್ಲಿ. ಬೇಕೆನಿಸಿದಾಗ ಅಪ್ಪುವ ಮುದ್ದಿಸುವ ಬೇಡೆನಿಸಿದಾಗ ಒದೆಯುವ ಎಸೆಯುವ ಆಯ್ಕೆ ಹಸಿವೆಗೆ. ಕಾಯುವ ಅನಿವಾರ್ಯತೆಯಷ್ಟೇ ಚೆಂಡಾಗುವ ರೊಟ್ಟಿಗೆ. *****

ಗಳಿಗೆಬಟ್ಟಲ ತಿರುವುಗಳಲ್ಲಿ – ೯೨

ಹಸಿವೆಂಬೋ ಕಡಲಿಗೆ ಬಿದ್ದು ಈಜುತ್ತದೆ ತೇಲುತ್ತದೆ, ಮುಳುಗುತ್ತದೆ. ಕಡೆಗೆ ನಿಧಾನಕ್ಕೆ... ಕರಗಿ ಉಪ್ಪಾಗಿ ಹೋಗುತ್ತದೆ ರೊಟ್ಟಿ. ಕಾಣದಿದ್ದರೂ ಇರುತ್ತದೆ. ರುಚಿ ನೀಡುತ್ತದೆ. *****

ಗಳಿಗೆಬಟ್ಟಲ ತಿರುವುಗಳಲ್ಲಿ – ೯೦

ಹಸಿವು ರೊಟ್ಟಿಗಾಗಿ ನಿರಂತರ ಕಾಯಬೇಕು ರೊಟ್ಟಿ ಹಸಿವೆಗಾಗಿ ನಿರತ ಬೇಯಬೇಕು ಕಾಯುವ ಬೇಯುವ ಪ್ರಕ್ರಿಯೆಯಲಿ ನಿರ್‍ವಿಕಾರ ಬದ್ಧತೆ ಸ್ಥಾಯಿಗೊಳಬೇಕು. ಅಲ್ಲಿಯವರೆಗೂ ಎಲ್ಲವೂ ಬರೀ ಆಟ. *****

ಗಳಿಗೆಬಟ್ಟಲ ತಿರುವುಗಳಲ್ಲಿ – ೮೯

ಹಸಿವಿನ ಎದೆಯೊಳಗೆ ಕೂತು ಕವಿತೆ ಕಟ್ಟಿ ಆಡುವ ಹಾಡುವ ಹಂಬಲದ ಹುಚ್ಚು ರೊಟ್ಟಿಗೆ ಅದರ ಬಾಯಿಗೆ ಸಿಕ್ಕಿ ನರುಕಿ ಕಾಲಕೆಳಗೆ ನಲುಗಿ ನುಣ್ಣಗಾಗುವ ಅಸಹಾಯಕತೆಯಲ್ಲೂ ಹುಟ್ಟಿಬಿಡುತ್ತದೆ ಕವಿತೆಯ ಸಾಲು. *****

ಗಳಿಗೆಬಟ್ಟಲ ತಿರುವುಗಳಲ್ಲಿ – ೮೮

ಹಸಿವೆಗೆ ಬೇಕಾದಾಗ ಬೇಕೆಂದಂತೆಲ್ಲಾ ರೊಟ್ಟಿ ಹೊಂದಿಕೊಳ್ಳುವುದು ಅಲಿಖಿತ ನಿಯಮ. ಹಸಿವಿನಿಂದ ರೊಟ್ಟಿಯೂ ಅದನ್ನೇ ಬಯಸಿದರೆ..... ಶಾಂತಂಪಾಪಂ ಅದು ಅನಿಯತ. *****
cheap jordans|wholesale air max|wholesale jordans|wholesale jewelry|wholesale jerseys