Home / ಕಾವ್ಯಕಲಾಪಿ

Browsing Tag: ಕಾವ್ಯಕಲಾಪಿ

ಒಸರಿ ಕೊಸರಿ ಕಸುವಿನಿಂದ ಹಾರಲೆನ್ನ ಜೀವನ ಕಸಕು ಮಸಕು ದೂರ ಸರಿಸಿ ಅಳಿಯಲೆನ್ನ ಬಂಧನ ಸತ್ಯಸುಧೆಯ ಉಸಿರಿನಿಂದ ಕಾಣಲೆನಗೆ ಮುಂದನ ಶ್ರೀಯ ಮೋಹ, ಶ್ರೇಯ ದಾಹ ಅಳಿಯಲದೇ ನಂದನ ರಕ್ತ ಉಕ್ಕಿ, ಶಕ್ತಿ ಮಿಕ್ಕಿ ಕೋಡಿಯೊಡೆದು ಓಡಲಿ ಕಾಮ ಮೋಹ ಸಿರಿಯು ಸ್ವಾರ...

ಓ ದೇವ ! ಓ ನಿನ್ನ ಚರಣಕೆನ್ನ ಶರಣು ! ಈ ದೇಹ! ಈ ಪ್ರಾಣ ನಿನಗೆ ಶರಣು !! ಅದೊ ! ಅಲ್ಲಿ-ಅಗೋ!! ನಾ ಕಂಡೆ ನಿನ್ನ ಇಗೋ ! ಇಲ್ಲಿ-ಇಗೋ !! ನಾ ಪಡೆದೆ ನಿನ್ನ ಅಲ್ಲಿ! ಹುಲ್ಲ ಗುಡಿಸಿಲಿನಲಿ ಕಂಡೆ ನಿನ್ನ ಅಲ್ಲಿ! ಅವರಾಡುವ ಬಡ ಸೊಲ್ಲಿನಲ್ಲಿ!! ಅಲ್ಲಿ...

ಚಿಗುರಿದಾ ಹುಲ್ಲಲ್ಲಿ; ಚಲುವಿನಾ ಓಟದಲಿ ಆಡುತಲಿ ಸುಳಿಸುಳಿವ ಓ ನಿಲ್ಲು ಹಾವೇ ! ನಿನ್ನ ಅಂದವೇನು ಬಣ್ಣ ಮಿಂಚುವ ನಿಲವಿನಲಿ ವಿಷಹೊತ್ತ ಹೆಡೆಯೇ ನಿನ್ನ ಗೆಲುವಿನ ಠೀವೆ! ತಡೆ ಇನ್ನೂ ಕ್ಷಣವನ್ನು ಮಿನುಗು ಮಿಂಚೆ ನಾಕದಿಂ ಭುವಿಗೊಗೆದ ಬೆಳ್ಳಿಯೂ ಛಡಿ...

ಈ ಸಲಾರೆ ಇನ್ನು ನಾನು; ಕಾಣಲಾರೆ ಮುನ್ನು ಕಡಲ ನಡುವೆ ಈಸಿದೆ ತುದಿ‌ಇಲ್ಲ, ಮೊದಲಿಲ್ಲ; ಮಾಡಲೇನು ಇನ್ನು ದಣಿದು ನಾನು ಬಳಲಿದೆ ಏಸು ಕಾಲ ಈಸಿದೆ! ಎನಿತು ದಿನ ನೂಕಿದೆ! ಮುಗಿಯ ಬಹುದೆ ಕಡಲು? ಮುಗಿಯಲಿಲ್ಲ ತಿಳಿಯಲಿಲ್ಲ; ಕೈಯಬೀಸಿದೆ ಇನ್ನು ತಾಳದೆನ...

ಏಕೀಕರಣದ ಪೂರ್ವದಲ್ಲಿ ಬರೆದ ಕವನ ೧ ಒಂದಿರುಳ ಕನಸಿನಲಿ ಕನ್ನಡಮ್ಮನ ಕೇಳಿದೆನು ‘ಬೇಕು ನಿನಗೇನು ಎಂದೂ’ ೨ ಪೌರ್ಣಿಮೆಯ ಚಂದ್ರನಿಗೆ ಕಲೆಯ ತೆರದೀ ನನಗೆ ಒಡೆದ ಕರ್ನಾಟಕದ ಕುಂದು ಎಂದೂ ೩ ಕೋಡಿಯೊಡೆದಿಹ ಕಣ್ಣೀರು ಹೊಳೆಯಾಗಿ ಬಿಡದೆ ಸುರಿಸಿ ಮನಬಿಚ್ಚಿ...

ದಿಳ್ಳಿಯೊಂದರ ಒಳಗೆ, ದಿಬ್ಬವೊಂದರ ಮೇಲೆ, ದೊಡ್ಡ ದೀವಿಗೆಯಡೆಗೆ ನಾ ಕುಳಿತಿದ್ದೆ. ಯಾವುದೋ ಎಡೆಯಲ್ಲಿ; ಹಣತೆಯೊಂದರ ಮೇಲೆ ಮಿಣುಗುವಾ ಜಿನುಗುದೀವಿಗೆ ಕಂಡಿದ್ದೆ ಬೀಸುಗಾಳಿಯ ಮೇಲೆ ಈಸು ಬಾರದೆ ಸಾಗಿತ್ತು ಇಲ್ಲಿಯೋ ಅಲ್ಲಿಯೋ ಎಂಬಂತೆ ಮುಳುಗಿ ಮರೆಯಾ...

ಓಗೊಡು, ಹಸಿದ ಕೂಗು ಕೇಳುತಿದೆ ಮನವಬಿಚ್ಚು, ಕಲ್ಲೆದೆಯ ಉಚ್ಚು ಓಡು, ಹೊಟ್ಟೆಯುರಿಯು ಕರೆಯುತಿದೆ ಸಾಕು ಸಿರಿಯ ಹುಚ್ಚು ಬಡ ಬಡಬಾಗ್ನಿ ಕಿಚ್ಚು ! ನಿನ್ನಿ ಹೊಟ್ಟೆ ಸಿರಿತನದ ಮೊಟ್ಟೆ ಅಂಬುಲಿಯ ಕಾಣದವ ಮಣ್ಣಿನಾ ಮೊಟ್ಟೆಯೆ ? ರಸಿಕನಾ ವರ್ಣ ಚಿತ್ರವೆ...

ನಾಡನಾಳುತೆ, ಜಗವ ಕಾಯುತೆ; ಅದೋ ದೇವಿ ! ನಿಂದಿಹಳು ಭುವನ ಭಾಗ್ಯೇಶ್ವರಿ, ಇದೋ ಕಾಣ ಬನ್ನಿ!! ದುಷ್ಟರನು ದಂಡಿಸುವ, ಭಕ್ತರನ್ನು ರಕ್ಷಿಸುವ ಶಾಂಭವಿ ವಿಜಯಿ ಮಹಾ ತಾಯಿ ಚಂಡಿಯಾ ಭಜನೆಗೈತನ್ನಿ ಗಗನದಲಿ ಗುಡುಗುವಾ ಗುಡುಗಿವಳು ಕಾರ್‌ಮೋಡಗಳೇ ತಾರಕಾಸು...

ಗಚ್ಚು ಮಾಳಿಗೆ ಮೇಲೆ, ಕಲ್ಲು ಹಾಸಿಗೆ ಕೆಳಗೆಲ್ಲ ಎಡಬಲಕು ಇಹುದು ರಂಜಿಸುವ ರಂಗು ಮಿರುಗುವ ಗೋಡೆ ಸದ್ದಿಲ್ಲ ! ಕಂಡು ಕಂಡಿಲ್ಲ !! ಬಂದು ಬಂದಿಲ್ಲ !!! ಯಾವೆಡೆಯಿಂದಿಳಿಯುವಿರಿ ನೀವು? ನಿಮ್ಮ ನಾ ನೋಡೆ ಮಿಣಿಕೊಮ್ಮೆ, ಇಣಿಕೊಮ್ಮೆ ಮಿಂಚುವಿರಿ ಕಣವೇ...

ಯಾರಿಹರು ಬನ್ನಿರೋ; ದೀಪವೊಂದನು ತನ್ನಿರೋ ಕಡಿಯಿತೊಂದೇನೋ ಈ ಕತ್ತಲಲ್ಲಿ ತಾಳಲಾರೆನು; ಎಲ್ಲಿ ಹೋಗಿರುವಿರೋ? ನಾ ಮಾಡಬಲ್ಲೆನೇನು ಕಾವಳಲ್ಲಿ ! ಅವ್ವ ಬರಲಿಲ್ಲ, ಅಕ್ಕ ಇಲ್ಲಿಲ್ಲ, ಮತ್ತಾರ ಸುಳಿವಿಲ್ಲ ನಮ್ಮಮ್ಮ ಹೋದವಳು ಬರಲೇ ಇಲ್ಲ ಯಾರು ಕಾಣುವದಿಲ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....