ಓಗೊಡು, ಹಸಿದ ಕೂಗು ಕೇಳುತಿದೆ
ಮನವಬಿಚ್ಚು, ಕಲ್ಲೆದೆಯ ಉಚ್ಚು
ಓಡು, ಹೊಟ್ಟೆಯುರಿಯು ಕರೆಯುತಿದೆ
ಸಾಕು ಸಿರಿಯ ಹುಚ್ಚು ಬಡ ಬಡಬಾಗ್ನಿ ಕಿಚ್ಚು !

ನಿನ್ನಿ ಹೊಟ್ಟೆ ಸಿರಿತನದ ಮೊಟ್ಟೆ
ಅಂಬುಲಿಯ ಕಾಣದವ ಮಣ್ಣಿನಾ ಮೊಟ್ಟೆಯೆ ?
ರಸಿಕನಾ ವರ್ಣ ಚಿತ್ರವೆ ಓ ಅವನ ಚಿಂದಿ ಬಟ್ಟೆ !
ಹಾ! ಅವನೊಡಲ ಅಳಲನಿಂಗಿಸಲರಿಯಿರೇ ?

ಅರಳಿ ಮೃದುವಾಗಲಿ ನಿಮ್ಮ ಹೃದಯ
ತೆರೆದು ಅರಿಯಲಿ ಅವನ ಹೃದಯದಾತ್ಮ
ಕರೆದು ಕೈ ನೀಡಲಿ ಬಡವಗಭಯ
ತಾ ಬಡವನೆಂಬುದ ಮರೆಸಲದೇ ಪರಮಾತ್ಮ!
*****