ಹುಟ್ಟೊಂದು ಯುಗಾದಿ ಹಬ್ಬ
ಬದುಕಿನ ಆರಂಭ
ಬಾಲ್ಯ ಸಂಕ್ರಾಂತಿ ಹಬ್ಬ
ಬೆಳವ ಬಾಳಿಗೆ ಬುನಾದಿ ಕಂಬ
ಯೌವ್ವನ ಕಾಮನಹುಣ್ಣಿಮೆ
ರಂಗಮಹಲಿನ ಮಹಡಿ ಮೆಟ್ಟಲು
ಮಧ್ಯವಯಸ್ಸು ದೀಪಾವಳಿ ಹಬ್ಬ
ಕನಸುಗಳು ತೂಗಲು ಬೆಳಕಿನ ತೊಟ್ಟಿಲು
ಇಳಿವಯಸ್ಸು ಆಷಾಢ, ಅಮಾವಾಸ್ಯೆ ಸೂರ್ಯಗ್ರಹಣ!
ಸಾವು, ಕತ್ತಲೆಯ ಹಾದಿ ಹೇಳುವುದೇನಿದೆ ಹೇಳಿ?
*****