ಅವನು-,
ಸ್ವಚ್ಛಂದವಾಗಿ ನಗುವ
ಜೋಡಿಗಳನು ನೋಡಿ ಕರಬುತ್ತಿದ್ದೇನೆ
ಕಿಲುಬುಗಟ್ಟಿದ ಗೊಡ್ಡುಯೋಚನೆಗಳಿಗೆ
ಸೋನೆ ಮಳೆ ಸುರಿಸು.

ಅವಳು-,
ಚಂದಿರ ನಗುನಗುತ ಬೆಂಕಿಹಚ್ಚಿದರೆ
ಸೂರ್ಯ ಉರಿದುರಿದು ಕರಕಲಾಗಿಸಿದ
ಪ್ರೀತಿಯ ಮಾತುಗಳಿಂದ ಒಮ್ಮೆಯಾದರೂ
ಕಣ್ಣೀರು ಸುರಿಸುವಂತೆ ಮಾಡು.

ಇಬ್ಬರಿಗೂ,
ಧಾರಾಕಾರವಾಗಿ ಸುರಿವಮಳೆ ಹೊರಗೆ
ಮನೆ ತುಂಬ ಆವರಿಸಿದ ಕಗ್ಗತ್ತಲು
ಪ್ರೀತಿ ಹೊತ್ತಿಕೊಳ್ಳಲು ಹೇಳಿದಂತಿತ್ತು
ಏನಾದರೂ ಮಾತನಾಡಲು ಒಳಗೊಳಗೇ ಹಂಬಲ
ಆದರೂ ಮತ್ತೆ ಮತ್ತೆ ಮನಕೆ ಮಳೆಯ ರಭಸ
ಮೌನ ಮುರಿಯಲಿಲ್ಲ
ಧ್ವನಿ ಚಿಗುರಲೇ ಇಲ್ಲ
*****

ಲತಾ ಗುತ್ತಿ
Latest posts by ಲತಾ ಗುತ್ತಿ (see all)