ಸ್ಮಶಾನ

ಇತಿಹಾಸ ಪ್ರಸಿದ್ಧ ಊರಿಗೆ ಹೋದೆ; ಆ ಊರಿನ ಕರಿಯ ಹರಿದ ಬಾಳಿನ ಗೆಳೆಯ ತೋರಿಸಿದ ಒಂದೊಂದೇ ಸ್ಥಳ. ಕನಸು ಕಲ್ಲೊಳಗೆ ಮೂಡಿದ ಮೂರ್‍ತಿ ಭೂತ ಬೆಟ್ಟವಾದ ಕೋಟೆಯ ಕೀರ್‍ತಿ ಸೀತೆ ಸ್ನಾನ ಮಾಡಿದ ಪುರಾಣ...

ಆತ್ಮವಂಚನೆ

ಗುಲಾಬಿಯ ವಾಸನೆ ಹಿಡಿಯಹೋಗಿ ಮೂಗೊಳಗೆ ಮುಳ್ಳು ಮುರಿದು ಅದೇ ಮೂಗುತಿಯೆಂದು ಮುಟ್ಟಿ ಮುಟ್ಟಿ ನೋಡುತ್ತ ಕನ್ನಡಿ ಮೀರಿ ಮುಖ ಹಿಗ್ಗಿಸುತ್ತ ಉರುಹೊಡೆದ ಇತಿಹಾಸ ಹೇಳುತ್ತ ವರ್‍ತಮಾನದ ಮಾನ ಕಳೆಯುತ್ತ ಕನ್ನಡಿಗೆ ಕಲ್ಲು ಬೀಳುತ್ತದೆ. ಆತ್ಮ...

ಗಿಳಿ-ಗಿಡುಗ

ಗಿಳಿಯೊಳಗೆ ಗಿಡುಗ ಕೂತು ಊರು ಹಾಳಾಗುವವರೆಗೆ ಆಕಾಶದಲ್ಲಿ ಹಾರಾಡುತ್ತದೆ ಗಿಡುಗ, ಒಳಗೊಳಗೇ ಕುಕ್ಕುತ ರಕ್ತ ಮಾಂಸಗಳನ್ನು ಬಸಿದಾಗ ಆಯತಪ್ಪಿದ ಆಕಾಶದ ಗಿಳಿ ತಿಪ್ಪರಲಾಗ ತೂರಾಡುತ್ತದೆ. ಗಿಳಿಯೊಳಗೆ ಸಿಡಿಲು ಸ್ಫೋಟಗೊಂಡು ಚೂರು ಚೂರಾಗಿ ನೆಲಕಚ್ಚಿದಾಗ ಗಿಡುಗ...

ಪಂಜಾಬು-ಕಾಶ್ಮೀರ

ಹೇಗೆ ಹೇಳಲಿ ನಿಮಗೆ ನನ್ನೊಳಗಿನ ಪಂಜಾಬು ಸ್ವರ್‍ಣ ದೇಗುಲದಲ್ಲಿ ಕರ್‍ಣ ಕಿವುಡು ಹೇಗೆ ಹೇಳಲಿ ನಿಮಗೆ ನನ್ನೊಳಗಿನ ಕಾಶ್ಮೀರ ಸೇಬು ತೋಟದ ತುಂಬ ಚೀರು ಚೂರು. ಹಾಳು ಬಾವಿಯ ಬದುಕ ಹೇಗೆ ಹೇಳಲಿ ನಿಮಗೆ...

ಹಸಿರು ಸೀರೆ

ಬಡವರ ಬೆತ್ತಲೆ ಕಂಡು ಕಂಗಾಲಾದ ಸೂರ್ಯ ಮೋಡದ ಮರೆ ಸೇರಿದ, ಯಾತನೆಯ ಎಚ್ಚರಕ್ಕಂಜಿದ ಗಾಳಿರಾಯ ಗಡ ಗಡ ನಡುಗಿ ಹೆಪ್ಪುಗಟ್ಟಿದ. ಮೈ ಮುಚ್ಚಲು ಮನಸ್ಸು ಹುಡುಕುತ್ತ ಮನುಷ್ಯ ನೆಲ ಸೇರಿದ. ಅಲ್ಲೊಂದು ಮರ ಬೆಳೆದು...

ಪದವಾಗುವ ಪ್ರೀತಿ

ಕಾಡುತ್ತಿವೆ ರಾತ್ರಿಗಳು ಹಗಲು ಕಟ್ಟಿದ ಇರುಳ ಕೋಟೆ ಒಳಗೆ ಒಂದೇ ಸಮ ಕತ್ತಿವರಸೆ ಪ್ರಾಣ ಹೋಗದ ಸಾವುಗಳು ಸದ್ದು ಮಾಡದ ನೋವುಗಳ. ಕತ್ತಲ ಸೋನೆ ಚರಿತ್ರೆಯಲ್ಲಿ ತೋಯ್ದ ಮೆದುಳ ನೆಲದಲ್ಲಿ ಮನಸ್ಸಿನ ಬೀಜ ಬಿರಿದು...

ಬದುಕು

ನಾನು ಕಾಲಿಟ್ಟಲ್ಲಿ- ಕರುಳು ಕಿಟಾರನೆ ಕಿರುಚಿ ಬೆವರೊಡೆಯುತ್ತದೆ. ನೆರಳು ನಗುತ್ತದೆ. ನಾನು ಕೂತಲ್ಲಿ- ನೆಲ ಕೀವೊಡೆದು ಬಾವು ಬಿರಿಯುತ್ತದೆ; ನೋವು ಹರಿಯುತ್ತದೆ. ನಾನು ಮಲಗಿದಲ್ಲಿ- ಮಂಚ ಮೌನ ಮುರಿದು ಉರಿಯುತ್ತದೆ; ಕನಸು ಬೂದಿಯಾಗುತ್ತದೆ. *****

ಒಂದಿಷ್ಟು ಅಳು ಕೊಡುತ್ತೀರಾ?

ನಿಮ್ಮ ಹಣ ಬೇಡ ನಿಮ್ಮ ನೆಣ ಬೇಡ ಒಂದಿಷ್ಟು ಅಳು ಕೊಡುತ್ತೀರ ನನಗೆ? ನಿಮ್ಮ ಕಾರು ಬೇಡ ನಿಮ್ಮ ಜೋರು ಬೇಡ ಕೇವಲ ಒಂದಿಷ್ಟು ಅಳು ಕೊಡುತ್ತೀರ ನನಗೆ? ಸದ್ಯ ನಿಮ್ಮ ಭೂಮಿ ಬೇಡ...

ಅರಿವು

ಬೆದೆ ಹತ್ತಿದ ಎದೆ ಹಾಡಿದಾಗ ಸದೆ ಬಡಿಯುವ ಸಿಂಹಾಸನವೇ ಸಾವ ಸಂಭ್ರಮದಲ್ಲಿ ನೋವು ನಿವಾರಿಸುವ ಜೋಳವಾಳಿಯೇ. ಕಾಲ ಚಕ್ರ ಉರುಳುತ್ತಲೇ ಅರಿವು ಅರಳುತ್ತ ನಾಲಗೆ ನಿಧಾನವಾಗಿ ಮಿಸುಕಾಡುತ್ತಿದೆ ಬಾಯೊಳಗೆ ಬ್ರಹ್ಮಾಂಡ, ಶತಶತಮಾನದ ವಿರಾಟ್ ದರ್‍ಶನ...

ಸುಖ

ಖುಶಿ ಬಸಿದು ಹಿಂಡಿ ಎಸೆದು ಕರುಳ ಕತ್ತಲಲ್ಲಿ ಬತ್ತಿ ಹೊಸೆದು ಕಣ್ಣಹನಿ ಹತ್ತಿಸಿದ ಬೆಳಕಲ್ಲಿ ಹುಡುಕುತ್ತಿದ್ದೇನೆ ಸುಖವೇ ಎಲ್ಲಿ ಹೋದೆ ನೀನೆಲ್ಲಿ ಹೋದೆ? ಹಜ್ಜೆ ಮುಂದಿಟ್ಟಂತೆಲ್ಲ ಗುರುತು ಹಿಂದಾಗಿ ಹಿನ್ನೋಟ ಮುನ್ನೋಟ ಬೆರೆತು ಒಂದಾಗಿ...
cheap jordans|wholesale air max|wholesale jordans|wholesale jewelry|wholesale jerseys