ಉದ್ಯೋಗದೊಳುನ್ನತದುದ್ಯೋಗ ಕೃಷಿಯಲ್ಲದಿನ್ನೇನು?

ಜಾಬೆಂಬಾಗ್ಲ ಪದಕೆಮ್ಮ ಉದ್ಯೋಗವೆಂಬುದೆಂದೆಂದುಂ ಬದಲಿ ಪದವಲ್ಲವಿದರರ್ಥದೌನ್ನತ್ಯವದಕಿಲ್ಲ ಜಾಬೆಂದರೆಮ್ಮ ಪ್ರಕೃತಿಯನರ್ಥ ಲಾಭಕೊಳಪಡಿಸುವುದು ಉದ್ಯೋಗದೊಳೆಮ್ಮ ಬುದ್ಧಿ ಮೈ ಮನಗಳನ್ನದೊಳೊಂದಾಗಿ ಲಾಭದರ್‍ಥವನುನ್ನತದ ಕೃಷಿಗೇರಿಪುದು - ವಿಜ್ಞಾನೇಶ್ವರಾ *****

ಆರಂಭವೇ ಇಷ್ಟು ದುಬಾರಿಯಾದರೆ ಅಂತ್ಯವಿನ್ನೆಂತು?

ಆರಣ್ಯಿಕವೆಮ್ಮ ಸಂಸ್ಕೃತಿಯು ಕಾಡೊಳ ಗರಿತು ಬದುಕುವ ಕಲೆಯು. ಕಾಡ ಕಳೆಗಳೆಡೆಯಲ್ಲಿ ಆರಂಭ ಎನುತಷ್ಟಿಷ್ಟು ಕಳೆಯ ಕೀಳುವ ಕಲೆಯು ಬರ ಬರುತಾರಂಭವೀ ಪರಿವೇಷದೊಳಂತ್ಯವನು ದೂರಿಡಲೆಳಸುವಾಸ್ಪತ್ರೆವೊಲ್ ದುಬಾರಿಯಾಯ್ತಲಾ - ವಿಜ್ಞಾನೇಶ್ವರಾ *****

ಜಂಗಮ ಜಡವಾದೊಡನ್ನ ಸಂಭ್ರಮ ಸಾಧ್ಯವೇ?

ಸ್ವಂತ ಕೃಷಿ ಸಂಬಂಧದುದ್ಯೋಗ ಗೌರವಕ್ಕೆ ಕುಂದೆಂದು ಬಂದಿಹುದನೇಕ ಬೂಟು ಕೋಟಿನುದ್ಯೋಗಗ ಳಿಂದವರಿವರ ಕುಂತಲ್ಲೇ ದುಡಿಸಲಿಕೆ ತುಂಬ ಸಂಬಳವಿದಕೆ ಮೇಲಧಿಕ ಗೌರವಾರೈಕೆ ಕುಂತಲ್ಲೇ ಸಂಶೋಧನೆಗಳನ್ನ ಬಂದುದುರಲಿಕೆ - ವಿಜ್ಞಾನೇಶ್ವರಾ *****

ತಪ್ಪಾಗಬಹುದು ! ತಪ್ಪನೊಪ್ಪವೆನಬಹುದೇ?

ಒಪ್ಪವೀ ಜಗವು ಇಲ್ಲಿರ್‍ಪೆಲ್ಲ ಜೀವಿಯುಂ ತಪ್ಪದೀ ಜಗದ ನಿಯಮದೊಳನ್ನ ಪಡೆಯು ತಿರ್‍ಪುದಿದನು ಕಂಡಾದಿ ಋಷಿಗಳುಸುರಿದ ವೇದ ವೊಪ್ಪುವ ಕೃಷಿಯ ಮೀರಿರಲೆಲ್ಲೆಡೆಗಲ್ಲೋಲಕಲ್ಲೋಲ ತಪ್ಪನಿನ್ನೊಂದು ತಪ್ಪಿನಲಿ ತಿದ್ದುವುದ್ಯೋಗಕಿದು ಕಾಲವಾಯ್ತಲಾ - ವಿಜ್ಞಾನೇಶ್ವರಾ *****

ಸ್ವಂತ ದುಡಿದನ್ನವಿಲ್ಲದೆ ಸಾವಯವ ಮೊಹರಿಂದೇನಕ್ಕು ?

ಸ್ವಂತದುದ್ಯೋಗ, ಮಡದಿ, ಮನೆ, ಮಕ್ಕಳೆನ್ನುತಲೊಂದು ಸುಖದ ಕೋಟೆಯ ಬಲಿವವಸರದೊಳೊಂದಷ್ಟು ಸಾವಯವ ಮೊಹರಿನನ್ನವನು ಕೊಂಡೊಡೇನಕ್ಕು? ಸಾವಯವವೆಂದೊಡದು ಬರಿ ಯಕ್ಷಿಣಿಯ ಹಣ್ಣಕ್ಕು ಸುಮ್ಮನಷ್ಟು ಹೊತ್ತಿನೊಳೊಂದಷ್ಟು ಭ್ರಾಮಕದ ಮಜವಿಕ್ಕು - ವಿಜ್ಞಾನೇಶ್ವರಾ *****

ಜೀವ ಜಗಕೆಮ್ಮ ಜಡ ಯಂತ್ರ ಬಲ ಬೇಕೇ ?

ನಾವೇನೆ ಮಾಡಿದೊಡದು ನಿರ್ಜೀವವಿರುತಿಲ್ ಜೀವ ಜಗವನಂತಿಮದಿ ಕೆಡಿಸುತಿರಲ್ ಸಾವಯವವೆನದಿನ್ನು ಅನ್ಯ ದಾರಿಗಳಿಲ್ಲ ಸಾವಯವವೆಂದೊಡದು ಕೊಂಡು ತಿನ್ನುವುದಲ್ಲ ಅವಯವಗಳೆಮ್ಮದಮಗಾಗಿ ದುಡಿವ ಬಲ - ವಿಜ್ಞಾನೇಶ್ವರಾ *****

ಯಾಕಾಧುನಿಕ ಜನಕಿಷ್ಟು ಕಷ್ಟವೋ ಶಿಷ್ಟ ಕೃಷಿಯೆನ್ನಲಿಕೆ?

ಪ್ರಕೃತಿ ಪರವಾಗದೊಡಿತ್ತ ಅಧ್ಯಾತ್ಮ ತತ್ತ್ವಜ್ಞಾನವೆಂದೊಡಂ ಸೊಕ್ಕಿನೊಳತ್ತ ವಿಜ್ಞಾನವೆಂದೊಡಂ ಏನು ಪುರುಷಾರ್ಥ? ಪ್ರಕೃತಿಪರ ಜೀವನಕಿರ್‍ಪುದದೊಂದೆ ಕೃಷಿ ಕ್ಷೇತ್ರ ಯುಕ್ತದೊಳನ್ನಾರೋಗ್ಯ ಐಶ್ವರ್‍ಯವಾರಾಮ ಇಲ್ಲಿಹುದು ಎಕ್ಕಸಕ್ಕವಾಗದಂದದೊಳಿಲ್ಲಿ ವಿಜ್ಞಾನವಾಧ್ಯಾತ್ಮ ಬೆರೆಯುವುದು - ವಿಜ್ಞಾನೇಶ್ವರಾ ***** ಎಕ್ಕಸಕ್ಕ=ಸಿಕ್ಕಾಪಟ್ಟೆ

ಬರಿದು ಕೃಷಿ ಮಾತ್ಯಾಕೆ? ಬರಿದಾದ ನೆಲಜಲ ಕಾಣದೇ?

ಬೇಕಿಲ್ಲವೆಮ್ಮಾರೈಕೆ ಪೂರೈಕೆಯೆಮ್ಮನ್ನದಾ ಮರಕೆ ಬೇರೆಲ್ಲದಕು ಮೂಲ ಬಲವದುವೆ ಸಾಕದಕೆ ಬೇಕೆಲ್ಲ ಮರಕದರ ತರಗೆಲೆಯ ಹೊದಿಕೆ ಭಾರಿ ಕೃಷಿ ಎನಲು ಬೊಕ್ಕತಲೆ ಬಂದೀತು ಜೋಕೆ ಬಾಳ ಕೃಷಿಗೊಂದು ಪೇಟೆ ಶಾಲೆಯದ್ಯಾಕೆ? - ವಿಜ್ಞಾನೇಶ್ವರಾ *****

ಉತ್ತು, ಕಿತ್ತು, ಬತ್ತಿಸುವ ಕೃಷಿಯಾಕೋ?

ಉತ್ತು, ಕಿತ್ತು ಬತ್ತಿಸಿದ ಮೇಲಾ ನೆಲ ಬರಿ ಮಣ್ಣೆಂದು ಗತ್ತಿನೊಳು ಗೊಬ್ಬರ ಕೊಟ್ಟು ತುತ್ತಿನ ಬಿತ್ತಿಟ್ಟೊಡದ ನೊತ್ತಿ ಬೆಳೆವಾ ನೂರೊಂದು ಕಳೆಗಳನು ನೋಡಾ ಗತ್ತಿನ ಕತ್ತ ನಿಳುಹಿದೊಡಲ್ಲಿ ಕಾಂಬುದು ತುತ್ತಿಗಪ್ಪುದು, ಸುಸ್ತಿಗಪ್ಪುದು ಆ ಕಳೆಯೊಳಗೆ...

ಅಂತೆ ಪರಿವರ್ತನೆ ಜಗದ ನಿಯಮವೆಂದೊಡೆಂತು?

ಆ ತಿಪ್ಪೆ ಗೊಬ್ಬರದ ಸತ್ಯ ತಾನಬ್ಬರದ ಮೂಟೆ ಮಿಶ್ರಣವಾಯ್ತು ಅನ್ನಾಹಾರದ ಸತ್ತ್ವವದಂತೆ ಮಾತ್ರೆ ಮದ್ದುಗಳಾಯ್ತು ಅನುಭವದ ಸತ್ತ್ವವದಂತೆ ಶಾಲೆಯೊಳಕ್ಷರವಾಯ್ತು ಆತ್ಮೀಯ ಜೀವದೇವ ಸಂಬಂಧವಾ ವಿಜ್ಞಾನ ವಶವಾಯ್ತು ಅಂತೆಲ್ಲರೊಳಿರುತಿದ್ದ ದೇಹ ಬುದ್ಧಿ ಬಲವುಬ್ಬರಿಸಿ ಹಣವಾಯ್ತು -...
cheap jordans|wholesale air max|wholesale jordans|wholesale jewelry|wholesale jerseys