Home / ಅಮೃತ ತರಂಗಿಣಿ

Browsing Tag: ಅಮೃತ ತರಂಗಿಣಿ

ಯಾವ ರಾಗ ಪಲ್ಲವಿಯ ಪದದನುಪದದನುನಯ ಸರ ಸ್ವರದಮೃತ ಮಾನಸದನುಲಾಪದದನಾಲಯ | ಋತು ಋತುವಿನ ಕ್ರತುವು ನೀನು, ಬಾಳಿನೆಳೆಯ ತಂಬೆಲರವು, ಪಥ ಪಂಥ ಪಾಂಥದ ಪಥವು ನೀನು, ಬೆಳಗು ಬೆಳಕಿನ ಕಿರಣವು. ನನ್ನ ಜಲಧಿಯ ತುಂಬು ಬಿಂಬವು ನಿನ್ನ ಚಿಲುಮೆ ಬಿಂದು ಕಸವರ, ಒ...

ಏನೆನ್ನಲಿ ಏನೆನ್ನಲಿ ಎನ್ನ ಮನದಮನ್ವಂತರದ ಧಾರೆಗಿನ್ನು ನಾನು, ಬರಿದೆ ಬರೆವರ ಪದದಿ ಕಟ್ಟುವುದೆಂತೀ ಬದುಕಿನಕ್ಕರವ ನಾನು-ನೀನು, | ಬರೆದುದೆ ಬದುಕಲ್ಲ, ಬದುಕಿದ್ದು ತಾ ನಿಲುಕಲ್ಲ, ಕಾವ್ಯವೆಂದರೆ ಅದುವೆ, ಜನನಮರಣದಾಚೆ ಈಚೆ ಬಾಳು, ಹೇಳುವರು-ಹೇಳಿದ...

ನನ್ನೆದೆಯ ಬಾಂದಳದ ಅರಿವಿನಾ ಜ್ಯೋತಿಯೇ ನೀ ಬೆಳಗು, ನಿನ್ನ ಬೆಳಕಿರಲೆನ್ನ ಒಳಗು-ಹೊರಗು, ದಿಕ್ ದಿಗಂತದ ಕಾಂತಿ ಎನ್ನ ಚೇತೋಹಾರಿ, ಬಾನ್ ಕಿರಣವಿಣುಕದಾ ಚಿತ್ತ ತಮೋಹಾರಿ, ಇರುಳಿರುಳ ಮರಳಿನೊಳು ಕುರುಡು-ಹುರುಡಾಗದಿರಲಿ, ಹಗಲಗಲ ಸಿರಿಧನದೊಳು ಬರಡು-ಬ...

ಏರಿ ಏರಿ ಮೇಲೇರುತ ನಭದಲಿ ಹಕ್ಕಿ ಜವ್ವನದ ಅಮಲಿನಲಿ ಬೀಗುತಿಹುದು ಸೊಕ್ಕಿ | ಶೈಶವ ಬಾಲ್ಯದ ಗೂಡನೆ ಮರೆತು, ಮೋಡದಲೆಯ ನೂಪುರದಲಿ ಕುಳಿತು, ಮುಪ್ಪನು ಕಂಡು ಜಗಿದು ಜರಿದು, ನಸು ನಗುತಿದೆ ಗರಿಗೆದರಿ | ರೆಕ್ಕೆ ಪುಕ್ಕ ಕೊಕ್ಕಿನಲುನ್ಮಾದವು, ನೆತ್ತರ ...

ಬನ್ನಿ ಕನಸುಗಳೆ ಬನ್ನಿ ಬಾಳ ಬುತ್ತಿಗೆ ಭರವಸೆಯ ಹೊತ್ತು ತನ್ನಿ | ಮಣ್ಣಿನಲಿ ದಿನಕಟ್ಟೋ ಮಣ್ಣಣುಗರನು ಸಂತೈಸ ಬನ್ನಿ ಮಣ್ಣಲ್ಲಿ ಮಣ್ಣಾಗೋ ಎಚ್ಚರ ತೊರದವರೆಬ್ಬಿಸಿ ಕರೆದು ತನ್ನಿ | ದುಡಿ-ದುಡಿದು ದಣಿ-ದಣಿವ ತನುಮನವನೋಲೈಸಲು ಬನ್ನಿ ಸುಲಿ-ಸುಲಿದು ...

ನಿತ್ಯೋತ್ಸವ ನಡೆಯಲಿ ಜಗ ಚೈತನ್ಯ ದೇಹಿಗೆ ದಿಟ್ಟ ದೃಷ್ಟಿ ದಿಟ್ಟಿಗಳಿರಲಿ ವೈಶ್ವಿಕತೆಯೆಡೆಗೆ | ಗಡಿ ಗಡಿಗಳಾಚೀಚೆ ಗೊಡವೆಗಳು ಸಾಕಿನ್ನು ನವ ಶತಮಾನದಲಿ ನವ ನೇಹದರುಣೋದಯ, ಇತಿಹಾಸ ಗುರುತಿಸಲು ಬಿಡ ದ್ವೇಷ ಹೆಜ್ಜೆಗಳ ವರ್ತಮಾನ ದೀಕ್ಷೆಯಲಿ ಭವಿತವ್ಯ...

ಕಾರುಣ್ಯದಾ ಬೆಳಕೆ ಬಾ ಬೇಗ ಬಾ ನನ್ನೆದೆಯ ಬಾಂದಳವ ಬೆಳಗಿಸಲು ಬಾ ನಿನ್ನಲ್ಲಿ ಆನಿಂದು ಬೇಡಿಕೊಳ್ಳುವೆ ನಿನ್ನು ಕೃಪೆಯಿಟ್ಟು ಆಲಿಸೆನ್ನೀ ಮೊರೆಯನ್ನು ಮುಗಿಲಗಲ ಜಗಕೆಲ್ಲ ರಸವೃಷ್ಟಿ ಸುರಿಸು, ರವಿ ಶಶಿ ತಾರಾಹೊಳಪನ್ನು ನಮ್ಮ ಕಣ್ಣುಗಳೊಳಗಿರಿಸು, ಮೇ...

ಯಾವುದು ಮೊದಲೊ, ಮೊದಲಿಗ ರಾರೋ, ಭಾವವಿಸಂಗತ, ಅಲೇಖ್ಯ ನಂದನಕೆ, ಕೊನೆ ಎಲ್ಲಿಯದೊ, ಕೊನೆಯಿಸುವವರಾರೋ, ಭೂರಮೆ ಭಾಗ್ಯದ, ಬಾಂದಳದಂಗಳಕೆ, ಅಂಕುರವಾವುದೋ ಅಂದಣದ್ಹೇರಿಗೆ? ಅಂಕುಶವೆಲ್ಲಿಯೊ ಮುಂದಣ ಯಾನೆಗೆ? ನಿಃ ಶಬ್ದದಿ ದನಿಸಿದ ಇನಿದನಿಯಾವುದೊ, ಯುಗ...

ನಿನ್ನದೀ ಜಗ ನಿನಗೆ ಬಲು ಸುಂದರ, ಎದೆಯೊಲವವರಳಿಸೋ ನೀ ಸಿರಿ ನೇಸರ ||ಪ|| ಅಂಬೆಗಾಲಿಗೆ ಮುನ್ನ ಜಗದೊಡೆಯಯೊಡತಿಯಽ ಸೊಗಸು, ಉರುಳು ಉರುಳತಲಲೆವ ಕುಸ್ತಿ ಪಟ್ಟುಗಳಽ ಬಿರಿಸು ||೧|| ಕೈ ಕಾಲ ಬಡಿದಾಟ ಚೆಲ್ವ ಚೆಲ್ಲಾಟವು, ಅಸಮತೆಯನಳಿಸುವಽ ಛಲದೊಲವಿನಾ ...

ಒಮ್ಮೆ ಮನದೊಳಗಿಣುಕಿ ನೋಡು ನಿನ್ನನ್ನು ಕೆದಕಿ | ಹೃದಯವಿಹುದೆಲ್ಲರಲಿ ಮೀಟುತಲಿ ಕ್ಷಣ ಕ್ಷಣದಿ, ಹೃದಯವಂತಿಕೆ ಶೂನ್ಯ ಕಾಲ ಕಾಲಾಂತರದಿ, | ಸಂಚಿತದ ತಿಳಿವಿದ್ದರು ಸಂಕುಚಿತೆ ಬದುಕಿನಲಿ, ಮೌಲ್ಯಗಳು ಅಳಿದಳಿದು ಶೂನ್ಯ ಮನದಲಿ ಕವಿದು | ಭಾವ ತೀವ್ರತೆ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...