Home / Nagarekha Gaonkar

Browsing Tag: Nagarekha Gaonkar

ಕ್ರಾಂತಿ ಮಂತ್ರದ ಹರಿಕಾರನಿಷ್ಕಪಟ ಮನದ ನೇತಾರಉಕ್ಕಿಸಿದ್ದ ಯುವಮನದಿಸ್ಪೂರ್ತಿ ಸಹಕಾರ ಜೈ ಹಿಂದ ಜೈಕಾರಜನಸಾಗರದಿ ಝೇಂಕಾರಜನಮನದಿ ಅಳಿಯದೇಜನಜನಿತ ನಿರಂತರ ಸ್ವರಾಜ್ ಪಕ್ಷದ ಉದಯನಿನ್ನ ತತ್ವದ ವಲಯಬೆಳೆಸಿತ್ತು ಜನರಲ್ಲಿಸ್ವಾತಂತ್ರ್‍ಯ ವೆಂಬ ಮತ್ತು ...

ಬಗೆ ಬಗೆಯ ಬಯಕೆಗಳು ಕಾಡದೇ ಇರಲಿಲ್ಲ ಆದರೂ ನೇಚ್ಯ ನೀನೆಂದು ಆಸೆ ಭರಣಿಗೆ ಮುಚ್ಚಳವ ಬಿಗಿದೆ ಗೋರಿ ವಾಕ್ಯದ ಕೆತ್ತುವುದೆಂತು ಮತ್ತೆ ಮತ್ತೆ ಮತ್ತು ಬರಿಸುವ ಚೈತನ್ಯ ಸದ್ದಿಲ್ಲದೇ ಆವಾಹನ ಹರೆಯದಲಿ ಹುಡುಗತನದಲಿ ಹಾದಿ ವಿಪ್ಲವಗಳ ಮರೆತು ಸೇತುವೆಯಾಗ ...

ಇಹಸುಖಕ್ಕೂ ನಾರಿಪರಪ್ರಾಪ್ತಿಗೂ ನಾರಿಸಕಲ ಸಂಪದಕೂ ನಾರಿಕೂಗಿದರೂ ಸಾರಿ ಸಾರಿ ತಿಳಿದವರು ಬಹಳಂತೆತರತರದ ಕಹಳೆತುದಿ ಮೊದಲು ಅರಿಯದೋಲ್ಬರಿಯ ಬೊಗಳೆ ಸ್ನಿಗ್ಧ ಪ್ರೇಮದ ನೆಪ ಮಾಡಿಮುಗ್ಧ ಮನಗಳ ಜೊತೆಯಾಡಿತಳ್ಳುವರು ಒಲವಕೆಂಪು ದೀಪದ ಅಡಿಗೆದೂಡುವರು ಅಬಲ...

ಬಿಡಿಸಲಾಗದ ಬಂಧವಿದು ಆದರೂ ಒಗಟು. ಒಳಗೊಳಗೆ ತುಡಿತ-ಮಿಡಿತ ತೋರಿಕೆಯ ಹಿಂದೆಗೆತ ಭಾನು-ಭುವಿಯರ ಮಿಲನ ಅಂಭವ ಮಧ್ಯಂತರಾಳದೊಳು ಕ್ಷಿತಿಜದೊಳು ಭಂಗರಹಿತ ತುಂಬು ಬಿಂದಿಗೆಯಂತೆ ಹಬ್ಬಿ ನಿಂತಿದೆ ಪ್ರೀತಿ ಬಿಂಬ ಪ್ರತಿಬಿಂಬವಾಗುವ ಬಯಕೆ ಆದರೂ ಮನ ಬೆರೆತರ...

ಬೇಯುತಿದೆ ಮಾತಿಯೊಡಲು ಸುಡುವ ಕಿಚ್ಚಿನೊಳಗೆ ಮೌನ ಚಿಪ್ಪಿನಂತೆ ಪ್ರತಿಭಟನೆಯ ಸೋಲಿಲ್ಲ ಮರದಿಂದ ಮರಕ್ಕೆ ಹಾರುವ ಮರ್ಕಟನ ತೆರೆದಿ ಪಕ್ಷದಿಂದ ಪಕ್ಷಕ್ಕೆ ಖಾದಿಗಳ ಹಾರಾಟ ಸನ್ನಿವೇಶಕ್ಕೆ ತಕ್ಕಂತೆ ಬದಲಾದ ಊರಸರವಳ್ಳಿಗಳ ವೇಷ ಬಾಂಧವ್ಯ ಬೆಸೆಯುವಲ್ಲಿ ಕ...

ಮಬ್ಬಗತ್ತಲೆವರೆಗೂ ತದ್ವತ್ ಕೆಲಸ ಸಾಕರಿ ಕೋಲಿಗೂ ಸಾಕರಿ ಹುಲ್ಲಿಗೂ ಹಗೆ ತೀರಿಸುವ ಅವಳ ಕೈ ಕುಣಿತ ಭತ್ತ ಬಡಿದ ಹುಲ್ಲಿಗೆ ಕಟ್ಟು ಕಟ್ಟುವ ಆಕೆ ಸಾಕರಿ ಕಟ್ಟಿನ ಲೆಕ್ಕ ಇಡುತ್ತಾಳೆ ಒಡೆಯ ಕೊಡುವ ಕೂಲಿಗಾಗಿ ಬೊಕ್ಕೆಯೆದ್ದ ಕೈಗಳು ಬಿರುಸಾಗುತ್ತಿವೆ ಕ...

ಬಟ್ಟಲು ಗಂಗಳ ಚಲುವೆ ಕಣ್ಣಸಿಪ್ಪೆಯ ಕೆಳಗೆ ವರ್ತಲದ ಛಾಯೆ ಕೆನ್ನೆ ಗಂಟಿದ ಅಶ್ರುಧಾರೆ ಮೇಲೆ ಜರತಾರಿ ಸೀರೆ ಮಕಮಲ್ಲಿನ ಬಟ್ಟೆ ವಡ್ಯಾಣ ಒಡವೆ ಹುಸಿ ನಗೆಯ ಮುಖವಾಡ ಹಮ್ಮು ಬಿಮ್ಮಿನ ಕೈವಾಡ ಒಲುಮೆ ರಾಗ ಮೈದುಂಬಿ ಉಕ್ಕಿ ಉರಿಸಿದ ಬಗೆ ಬರಿಯ ಬೊಗಳೆ ತಟ...

ಆ ಹಾದಿ ಸಾಗಿದೆಡೆ ನಡೆದು ಬಿಡು ಮಾನವ ಇರದು ಹುಡುಕಾಟ ಹಂಬಲಿಕೆ ನಿನಗೆ ಕುರುಡ ಮೋಹದ ಕುದುರೆ ಕೈಕೊಟ್ಟ ಕ್ಷಣವೇ ಉರಿದು ಬಿದ್ದಿದೆ ನಿನ್ನ ಆಶೆ ಗೋಪುರ ಬಣವೆ ಬೊಗಳೆ ಮಾತಿಗೆ ಬಲಿ ಬೀಳುವುದು ತರವಲ್ಲ ಸ್ಥಿಮಿತ ಮನಸಿನ ಧೈರ್ಯ ನಿನಗೆ ಹೊಸತಲ್ಲ ಎತ್ತ ...

ಪಡುವಣದ ಕಡಲಿನೊಳು ಪರಮಾಪ್ತ ಪರಧಿಯೊಳು ನೇಸರನ ಮಡಿ ಸ್ನಾನ ಚಿಮ್ಮಿಸಿದೆ ಧರೆಯೊಳಗೆ ಕೆಂಬಣ್ಣ ಹೊಂಬಣ್ಣ ನೀರಿನಾಳದಲಿ ಫಳಫಳನೆ ಮಿಂಚಿ ಮತ್ಸ್ಯಗಳು ಕುಣಿದಿರೆ ಅಂಬುಧಿಯ ತಟದೊಳಗೆ ಕೌಪೀನ ಕಳಚಿ ಮರಿ ಮತ್ಸ್ಯಗಾರರು ಉಬ್ಬರಿಸ ಅಲೆಯೊಳಗೆ ಜೋಕಾಲಿ ಆಡುತಿ...

ಹೆಚ್ಚಿಗೇನು ಬಯಸಿರಲಿಲ್ಲ ಆ ಜನ ಅಂಬಲಿಗೆ ಅನ್ನ ಬೆರೆಸಿ ಕುದಿಸಿಟ್ಟು ಕುಡಿದರೆ ಅಷ್ಟೇ ಸಾಕು ಅಮೃತದ ಪಾನ ಒಡೆಯನ ಗದ್ದೆಗೆ ಒಂದಿಷ್ಟು ಗೊಬ್ಬರ ಎರೆದರೆ ಸಾಕು ಆದಿನ ಎಸೆದ ಎರಡಾಣೆಗೆ ತೃಪ್ತ ಮನ ಹೊತ್ತು ಮರೆ ಸರಿಯೇ ತಿಂಗಳಿಣುಕುತ್ತಿರೆ ಒಂದಷ್ಟು ಬ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...