Home / Chandrashekara AP

Browsing Tag: Chandrashekara AP

ಓಟುಗಳ್ಳರು ಕೆಲರವರ ಮಾತುಗಳ್ಳರು ನೋಟುಗಳ್ಳರು ಕೆಲರವರ ಕೆಲಸಗಳ್ಳರು ತಟ್ಟಿ ನೋಡಿದೊಡೆಲ್ಲರಲು ಅಡಗಿಹರು ಕಳ್ಳರು ಇಷ್ಟು ಸಾಕೆನುವದೃಷ್ಟ ಬಲುಕಷ್ಟವೆನ್ನ ತೋಟದ ಪಟ್ಟಿಯನೇರಿಸಲು ಗಿಡ ಕದಿವೆ ನಾ ಕಾಡಿಂದ – ವಿಜ್ಞಾನೇಶ್ವರಾ *****...

ಲೋಕದ ಡೊಂಕ ತಿದ್ದುವುದೆನ್ನ ಕಾಳಜಿಯಲ್ಲ ಲೋಕ ಶೋಕವನಿಳಿಸೆ ರಸ್ತೆಯೊಳು ಡೊಂಕಿರ ಬೇಕದುವೆ ಅವಘಡದ ವೇಗವಿಳಿಸುವುದು ಶಿಕ್ಷಣವೆಂದಾ ಡೊಂಕು ಕಬ್ಬನಗಿದು ತಿನ್ನದೆ ಸಕ್ಕರೆಗೊಳಿಸುವಾತುರಕೆನ್ನ ಕೊರಗಿಹುದು – ವಿಜ್ಞಾನೇಶ್ವರಾ *****...

ಆದರ್ಶವೆಂದೈಶ್ವರ್‍ಯ, ಆರೋಗ್ಯ, ಆನಂದದಾ ಹದದ ಬಗೆಗೇನಷ್ಟೆ ಪೇಳಿದರು ಕೇಳಿದರು ಸ್ವಂತ ಕದು ಉಳಿಯುವುದು ಕಡಿಮೆಯೆಂದದನು ಪೇ ಳದುಳಿದೊಡೆಮಗೆ ನಷ್ಟ ಬಹಳುಂಟು ಸಾಧಿಸಿದೊಂದೆರಡು ದೃಷ್ಟಾಂತದೊಳೆಲ್ಲರಾ ಬದುಕುಂಟು – ವಿಜ್ಞಾನೇಶ್ವರಾ *****...

ಏನಿದೀತನೆಲ್ಲರನು ಎಲ್ಲವನು ಬರಿದು ಟೀಕಿ ಪನೆಂದೆನ್ನದಿರಿ. ಚಳಿ ಮಳೆ ಬಿಸಿಲಿಂಗುಂ ಟೇನಾದೊಡಂ ಆಯ್ಕೆಯೊಳು ಕೇಡೆಣಿಪ ಬಯಕೆ ? ಮನೆಯ ಮಾಡುತಲೆಮ್ಮ ಉತ್ತರವಿರಬೇಕದಕೆ ಮನೆಯ ಮಾಡುವೊಡಲ್ಲಿ ಉಳಿ ಸುತ್ತಿಗೆ ಬೇಕದಕೆ – ವಿಜ್ಞಾನೇಶ್ವರಾ *****...

ಬಲು ಕಷ್ಟ ಕವನದ ಹಾದಿಯದರೊಳು ವನದ ಸ ವಾಲುಗಳದನಷ್ಟಿಷ್ಟು ಕೋಲು ಕತ್ತಿಯೊಳುತ್ತರಿಸು ತಲೇರುವೆತ್ತರದ ಖಷಿಯನಂತೆ ಪೇಟೆ ಬೀದಿಯೊ ಳೆಳೆಸಲಳವಿಲ್ಲವಾ ಕಾಡೆ ಪೇಟೆ ಬಲ ಮೂಲ ವಿ ರಲೆಮ್ಮ ಕವನವಾಗಲಿ ಜಟಿಲ, ಸಲಿಲಕೆ ಮೂಲ – ವಿಜ್ಞಾನೇಶ್ವರಾ *****...

ಪ್ರಕೃತಿ ಸಾರ ಸತ್ವವಾ ಗಣಿತ ಸಮೀಕರಣದೊಳ ಡಕವಾಗಿರ್‍ಪಂತೆ ಪ್ರಕೃತಿ ಸಾರ ತತ್ವವಾ ಕವನದೊಳ ಡಕವಾಗಿರ್‍ದೊಡದು ಕವನ, ಕವನ ಗಣಿತಗಳಗಣಿತ ಸ ಮೀಕರಣವೆಮ್ಮ ವನ ಕಾನನಗಳಿದನುಳಿಸಿಕೊಳದೇ ನು ಕವನವೋ ? ಹಣ ಗಣಿತ ಭವನದೊಳು – ವಿಜ್ಞಾನೇಶ್ವರಾ *****...

ಬೆವರಿಸುವ ಬಿಸಿಲು ಬೆದರಿಸುವ ಸಿಡಿಲು ಬಯಸದೆಯೆ ಬಂದೆರಗುವವಘಡವು ಬದುಕಿನೆಮ್ಮಯ ಬಯಕೆಗಳನಲ್ಲಲ್ಲಲ್ಲೇ ಬಿಡದೆ ಕೊಡುತಿರ್ಪ ಪ್ರಕೃತಿಯೊಳಿರುತಿರಲು ಬಡವನದನುಂಡೆನ್ನ ಮಾತನೆಲ್ಲರೊಪ್ಪುವುದೆಂತು ? – ವಿಜ್ಞಾನೇಶ್ವರಾ *****...

ಕೂಲಂಕಷದೋಳಾಲೋಚಿಸಲು ದೋಷವಿಲ್ಲದಿಹ ರಿಲ್ಲದಿರಲೆನಗೆ ಅವರಿವರ ದೋಷವೆಣಿಸುವ ಛಲವಿಲ್ಲವೆನ್ನನ್ನದಡಿ ನೆಲವು ಸ್ಪಂದಿಸಲದರ ಬಲವನು ಮೆರೆಸುವಾತುರದೊಳೆನ್ನ ಭಾಷೆಯು ಗೇಲಿ ಎನಿಸಿದೊಡೆನ್ನ ದೋಷವನಂತೆ ಮನ್ನಿಸಿರಿ – ವಿಜ್ಞಾನೇಶ್ವರಾ *****...

ತಿರು ತಿರುಗಿ ನೆನಪಿಸುತೆನ್ನರಿವನಿನ್ನಷ್ಟು ಒರೆ ಹಚ್ಚುವಾತುರದೊಳ್ ಬರೆದೆನ್ನ ಕವನಗಳು ತೋರು ಬೆರಳೆನಗೆ, ಎನ್ನ ಬದುಕಿನ ಸಾರವಿದು ಪರಿಶ್ರಮದ ಫಲವಿದಕೆ ತಿನುವಷ್ಟು ರುಚಿ ಇಕ್ಕು ದಾರಿ ದಣಿದವರಿಂಗಿದು ಉಣಿಸಾದೊಡತಿ ಯಶವು – ವಿಜ್ಞಾನೇಶ್ವರಾ...

ಬರೆಯುವೆನು ಕಾವ್ಯವೆಂದಾನು ಬಯಸಿರಲಿಲ್ಲ, ಕಾವ್ಯದೋದಿನ ಬಲವು ಎನಗಿಲ್ಲ, ಕಾವ್ಯವಾಗಲಿ ಬದುಕೆಂದು ಪಿಡಿದ ಗುದ್ದಲಿಯೆ ಬಿತ್ತಿದಕ್ಷರ ಧಾನ್ಯವಿದು – ವಿಜ್ಞಾನೇಶ್ವರಾ *****...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...