
ರಾಜಕುಮಾರನ ಹೊತ್ತ ಕುದುರೆಗೆ ಉಸಿರು ಬಿಗಿಹಿಡಿದು ನೇರ ಹಾದಿಗೆ ಕಣ್ಣು ಜಡಿದು ಸುಮ್ಮನೆ ಓಡುವ ಉಮೇದು. ನೆಲದ ಆಳಗಳನರಿಯದ ಅದರ ತುಡಿತಕ್ಕೆ ಸ್ಪಂದಿಸದ ನಿಂತಲ್ಲೇ ಕ್ಷಣ ನಿಲ್ಲದ ಚಪಲಚಿತ್ತ ಕುದುರೆ ಕಾಲುಗಳಿಗೋ ಚಕ್ರ. ಒಮ್ಮೆಯೂ ನೆಲಸೋಕದ ರಾಜಕುಮಾರ...
ಇರುಳು ಸುಮ್ಮನೆ ಬೆಳಕಾಗಿ ಅರಳುವುದಿಲ್ಲ ಮುಗಿಲು ಸುಮ್ಮನೆ ಮಳೆ ಸುರಿಸುವುದಿಲ್ಲ ಶಿಲುಬೆಗೇರಿದ ಕತ್ತಲು ನೋವುಗಳಿಗೆ ಮೈಯೊಡ್ಡಿ ಹದ ಬೆಂದು ಬೆಳಕಾಗಬೇಕು ತಕ್ಕಡಿಯಲಿ ಕೂತ ತುಂಬು ಬಸುರಿನ ಮುಗಿಲು ಹಿಂಸೆಯನುಭವಿಸುತ್ತಲೇ ಈಗಲೋ – ಆಗಲೋ ಅನುಮ...
ಬೆಳಕು ಬೇಡವಾದರೆ ಇಲ್ಲ ಇಲ್ಲಿ ಏನೂ ಆಗಿಯೇ ಇಲ್ಲ ಆಗಿದ್ದು ಆಟವಷ್ಟೇ ಲೆಕ್ಕವಲ್ಲ ಜಮಾ ಆಗಿಲ್ಲ ಎನ್ನುತ್ತಾ ಯಾವುದಕ್ಕೂ ಬದ್ಧವಾಗದೇ ಎಲ್ಲಾ ಕೊಡವಿ ಎದ್ದು ಹೋಗಿಬಿಡಬಹುದು ಕತ್ತಲು ಬೇಡದ್ದೆಲ್ಲಾ ಒಪ್ಪಿ ತೋಳ್ತೆರೆದು ಅಪ್ಪಿ ತುಂಬಿ ತುಂಬಿ ಮೇಲೇರಿ ...














