Home / Chandrashekara AP

Browsing Tag: Chandrashekara AP

ಅರಿತಿದನು ಪೇಳ್ವುದದು ಬಲು ಕಷ್ಟವೋ ಸರಿ ಬೆವರಿ ಕಷ್ಟಪಟ್ಟುಣಬೇಕೆಂಬರಿವು ಕಷ್ಟವೋ ಆರದೋ ಕಷ್ಟವನ್ನು ಕದ್ದುಂಬ ಸುಖವ ಮರೆವುದು ಕಷ್ಟವೋ ಅರಿವಿನಾದರ್ಶವನ್ನು ಆಚರಿಪೆಚ್ಚರವು ಕಷ್ಟವೋ ಆರಿತಾಚರಿಸಿದೊಡದನು ಪೇಳದಾ ಮೌನ ಕಷ್ಟದೊಳು ಕಷ್ಟವೋ – ವ...

ಆರ್ಥಿಕದಭಿವೃದ್ಧಿ ರಾಜಪಥದಾ ಗೌಜಿಗದ್ದಲವ ಪಥ್ಯವೆನಗಾಗಿರಲಾನಿಂದು ಕಾಲುದಾರಿಯೊಳೊಂಟಿ ಯಾದೊಡಂ ಎನಗಿಲ್ಲವೊಂಟಿತನ ಇರಲೆನಗೆ ನಿತ್ಯನೂತನವಿಳೆಯ ಬಂಟತನ. ಹೆತ್ತಮ್ಮನೊಡನಿರಲು ಎತ್ತಣದೊಂಟಿತನವಾ ಕೂಸಿಂಗೆ ಒಂಟಿ ಹುಟ್ಟಿದರು – ವಿಜ್ಞಾನೇಶ್ವರಾ ...

ಒಂದು ಕವನಕಿನ್ನೊಂದು ಕವನಕುಂ ತರ್ಕ ಸಂಬಂಧವಿಲ್ಲದೊಡದೆನ್ನ ದೋಷವಿರಬಹುದಾದೊ ಡಂ ಪ್ರಕೃತಿಯೊಳಿಂಥ ತರ್ಕ ದೋಷಗಳಿರುತಿರಲು ಒಂದೆ ಸೂತ್ರದೊಳೆಲ್ಲ ಮರ, ಗಿಡ, ಬಳ್ಳಿ, ಕಳ್ಳಿ, ಕಳೆ ಕಂಟಿಗಳಿಲ್ಲದಿರುತಿರಲೆನ್ನ ದೋಷವನಿವಾರ್‍ಯ ಸಂಗತಿಯು – ವಿಜ್...

ಮಂಕುತಿಮ್ಮನಂತೆನಗೂ ಕವನ ಬರೆವಿಷ್ಟ ಅಂದಿಗಿಂತಿಂದಿನ ಜೀವನವೆಷ್ಟೋ ಭ್ರಷ್ಟ ಗೊಂಡಿರಲೆನಗೆ ವಿಷಯದಾಯ್ಕೆಯೊಳಿಲ್ಲವರ ಕಷ್ಟ ಎಂತು ಬರೆದರು ಕವನವೆಂಬಾಧುನಿಕ ಬಗೆ ಬಟ್ಟೆ ಯಂತೂ ಸುಲಭಗೊಳಿಸಿಹುದೆನಗೆ ಕವಿ ಪಟ್ಟ – ವಿಜ್ಞಾನೇಶ್ವರಾ *****...

ಸರೋವರದಂಥವರು ಸಾಧುಗಳಾದವರು ತ್ವರೆಯೊಳವರ ಬಳಿ ಸಾರಿದೊಡಲ್ಲಿ ಬೊಗಸೆ ನೀರನು ಹೀರಿ ತಣಿಯಲು ಬಹುದಾದೊಡಂ ದೂರ ದಾರಿಯ ದಣಿದ ಮಂದಿಗೆ ವಾರಿ ಸೇವೆಗೆ ಇರಲಿ ಬಿಂದಿಗೆಯೆಂದು ಬರೆದಿಹೆನಿಲ್ಲಿ ಕವನಗಳ – ವಿಜ್ಞಾನೇಶ್ವರಾ *****...

ಬೀಜ ವೃಕ್ಷದೊಳಾವುದಿಳೆಗೆ ಮೊದಲೆಂದು ವ್ಯಾಜ್ಯವಿಲ್ಲದಿದುವೆ ಸತ್ಯವೆನುತೊಂದು ರಾಜಿ ಮಾತನೊರೆವುದಾರಿಂಗೆಂದಾದೊಡಂ ಈ ಜಗದೊಳತಿ ಕಠಿಣ ಕಜ್ಜವಿರುತಿರಲೆನ್ನ ನ್ನ ಜ್ಞಾನದ ಮಿತಿಯಿದನು ಸೇರದಿರೆ ಮನ್ನಿಸಿರಿ – ವಿಜ್ಞಾನೇಶ್ವರಾ *****...

ಬಲು ಸುಲಭ ಬಲು ಸುಲಭ ಲೋಕದ ತಪ್ಪನೆಣಿಸಿ ಪೇಳುವುದಾದೊಡೆಂತದನು ತಿದ್ದುವುದು ? ಎಲ್ಲ ದೋಷಕು ಮೂಲವಲ್ಲಲ್ಲೇ ವ್ಯಕ್ತಿ ದೋಷ ದೊಳಿರುತಿರಲು ಪ್ರಜಾ ಪ್ರಭುವನಾರು ತಿದ್ದುವುದು ? ಬಲು ಪ್ರಭಲವಿಂದೆಮ್ಮ ಕಾನೂನು ಪ್ರಭುವ ರಕ್ಷಿಸಲು – ವಿಜ್ಞಾನೇಶ...

ಈ ಜಗದ ಸ್ವರವಾಗಿ ಖಗ ಮೃಗಗಳಲ್ಲಲ್ಲಿ ಗೌಜಿಯೊಳು ಉಲಿವಂತೆ ಎನ್ನುಲಿವು ರಜ ನಲಿವು, ಜೊತೆಗಳುವು ಸಾಜ ಗುಣವಿದೆನ್ನದಿರುವುದಿಂತು ಈ ಜಗದ ಕಾವ್ಯದೊಳಿದೊಂದಕ್ಷರವು – ವಿಜ್ಞಾನೇಶ್ವರಾ ***** ರಜ = ಸ್ವಲ್ಪ ಸಾಜ = ಸಹಜ...

ಮಾತನಾಡದ ಮೌನವದು ಕಷ್ಟ ಮಹತಿಯ ಮಾತದಿನ್ನಷ್ಟು ಕಷ್ಟ ಮನದೊಳ್ ಮೌನವತಿ ಕಷ್ಟ ಮತ್ತಾನು ಸುಮ್ಮನಿರಲರಿಯದ ಕಷ್ಟ ಮುದ್ರಿಸಿದ ಕವನವಿದೀಗ ನಿಮ್ಮಯ ಕಷ್ಟ – ವಿಜ್ಞಾನೇಶ್ವರಾ *****...

ಮನೆಯ ಕಟ್ಟುವೊಡಲ್ಲಿ ಬಡವ ತಾ ಧನದ ಮಿತಿಯೊಳದರ ಸೌಂದರ್‍ಯ ವನವಗಣಿಪ ತೆರದೊಳೆನ್ನ ಕವನವು ಘನ ವಿದ್ವಾಂಸನಾನಲ್ಲ ಛಂದ ಬಂಧ ದನುಭವವಿಲ್ಲ ಹೂವೆಲ್ಲದಕು ಘಮವಿಲ್ಲ – ವಿಜ್ಞಾನೇಶ್ವರಾ *****...

1...2122232425...27

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...