ಹನಿಗವನ ಅಜ್ಜ ಮೊಮ್ಮಗ August 5, 2023May 14, 2023 ಅಜ್ಜ ಆಲಕ್ಕೆ ಜೋಕಾಲಿ ಕಟ್ಟಿದ್ದ ಮೊಮ್ಮಗ ಅಮೆರಿಕಾಕ್ಕೆ ಹಾರಿದ್ದ! *****
ಹನಿಗವನ ಪ್ರೀತಿ July 22, 2023May 14, 2023 ಗೂಡಿನ ಹಕ್ಕಿಗೆ ಕಾವಿನಂತೆ ಮದುವೆ… ನಂತರ… ಮೊಟ್ಟೆಯೊಡೆದ ರೆಕ್ಕೆ ಬಿಚ್ಚಿದ ಹಕ್ಕಿಯಂತೆ! *****
ಹನಿಗವನ ವ್ಯತ್ಯಾಸವಿಲ್ಲ July 8, 2023May 14, 2023 ನೇಣು ಬೀಳುವಾಗಲು ಕತ್ತಿಗೆ ಕ್ಷಣದ ನೋವು ಮದುವೆ ಯಾಗುವಾಗ ಬಾಳಿಗೆ ನಿರಂತರ ಬೇವು *****
ಹನಿಗವನ ಪೂರ್ಣ ಫಲ June 10, 2023May 14, 2023 ಕುರುಡು ಗಂಡು ಕಿವಿಡು ಹೆಣ್ಣು ಪಡೆಯುತ್ತಾರೆ ಮದುವೆಯ ಪೂರ್ಣಫಲ! *****
ಹನಿಗವನ ಪ್ರೇಮಿ May 27, 2023May 14, 2023 ತಾಯಿಯ ಪ್ರೇಮ ಮಹದ್ ಪ್ರೇಮ ನಾಯಿಯ ಪ್ರೇಮ ಬೃಹತ್ ಪ್ರೇಮ. ಪ್ರಿಯೆಯ ಪ್ರೇಮ ಕಿಲೋ ಗ್ರಾಮ್ ತೂಕದ ಪ್ರೇಮ. *****
ಹನಿಗವನ ಎರಡು ಸೇರೆ May 13, 2023May 14, 2023 ಪ್ರೇಮ ಸ್ನೇಹ ಸೇರಿ ವ್ಯಾಮೋಹ ಪ್ರೇಮ ನೇಮ ಸೇರಿ ದೈವ ಕಾಮ, ದೈವ ನೇಮ. *****
ಹನಿಗವನ ಕನ್ನಡಿ ಕಥೆ April 29, 2023December 30, 2022 ಕನ್ನಡಿಗೆ ಮುಖ ಎದುರಾದಾಗ ಪಾತ್ರಧಾರಿಯ ಭವ್ಯ ಕಥೆ ಮುಖವಿಲ್ಲದಾಗ ಪಾತ್ರ ವಿಲ್ಲದ ಬರಿಯ ವ್ಯಥೆ *****
ಹನಿಗವನ ನನ್ನ ಹನಿಗವನ April 15, 2023December 30, 2022 ನನ್ನ ಹನಿಗವನ ಪ್ರಿಮೆಚ್ಯೂರ್ ಮಗುವಲ್ಲ ಬೆಳದ ಬಲಿಷ್ಠ ಸಿಸೇರಿಯನ್ ಬೇಬಿಯಲ್ಲ ಅದು ಸಹಜ ಪ್ರಸೂತಿಯ ಆರೋಗ್ಯ ಕೂಸು! *****