ಜೀವವಿಂದು ಏನೋ ಒಂದು

ಜೀವವಿಂದು ಏನೋ ಒಂದು ಮೋದಕೆ ವಶವಾಗಿದೆ ಕನಸೋ ಭ್ರಮೆಯೊ ಕಣ್ಣ ನವೆಯೊ ತರ್ಕ ಕಳಚಿ ಉರುಳಿದೆ ಬಾನ ತುಂಬ ಬೆಳಕ ಹೊಳೆ ಸೋರಿ ಭೂಮಿಗಿಳಿದಿದೆ ಧಾರೆ ಧಾರೆ ಸೇರಿ ಹರಿದು ನದಿ ಸಾಗರ ಮೂಡಿವೆ...

ಬೆಳಕಿನ ಹಾಡಿಗೆ ಕಾಯುತಲಿರುವೆವು

ಬೆಳಕಿನ ಹಾಡಿಗೆ ಕಾಯುತಲಿರುವೆವು ಇರುಳಿನ ಅಂಚಿನಲಿ ಅರುಣನ ಹೊಂಚಿನಲಿ ಸುಮ ಫಲ ಚಿಗುರನು ಮುಡಿದ ಮರಗಳನು ಮೊರೆಯುವ ತೊರೆಗಳನು, ಕಾಳಮೇಘಗಳ ಸೀಳಿ ಹಾಯುವ ಮಿಂಚಿನ ದಾಳಿಯನು, ಯಾವ ತೇಜವದು ತಾಳಿ ನಿಂತಿಹದೊ ಎಲ್ಲ ಲೋಕಗಳನು...

ಯಾರದು ಯಾರದು ಯಾರದು?

ಯಾರದು, ಯಾರದು, ಯಾರದು ತಿಳಿಯಲು ಏತಕೆ ಬಾರದು? ಗಂಧದ ಮರದಲಿ ನಂದದ ಪರಿಮಳ ಲೇಪಿಸಿದವರಾರು? ಮಂದಾರದ ಹೂಬಟ್ಟಲ ಬಂಧವ ರೂಪಿಸಿದವರಾರು - ಗಿಡದಲಿ ಛಾಪಿಸಿದವರಾರು? ಬೆಟ್ಟದ ಮೈಯಲ್ಲೆಲ್ಲೋ ಸಂದಿಯ ಇಟ್ಟ ಧೀರ ಯಾರು? ಒಂದೊಂದೇ...

ಮೈಯೊಳಗಿನ ಮಣ್ಣು

ಮೈಯೊಳಗಿನ ಮಣ್ಣು ಆಡಿಸುವುದು ನನ್ನ ಮೈಯೊಳಗಿನ ಗಾಳಿ ಹಾಡಿಸುವುದು ನನ್ನ ಜಲ ಆಗಸ ಬೆಂಕಿ, ಸಂಚು ಹೂಡಿ ಮಿಂಚಿ ಕೂರಿಸುವುದು ಏಳಿಸುವುದು ಓಡಿಸುವುದು ನನ್ನ! ಪೃಥ್ವಿ ಅಪ್ ತೇಜ ವಾಯು ಆಕಾಶವೆ, ತಾಳಿ ಹದ...

ನಿನ್ನೊಳಗೇ ಇದೆ ಬಾನು

ನಿನ್ನೊಳಗೇ ಇದೆ ಬಾನು ನಿನ್ನಲ್ಲೇ ಇದೆ ಕಾನು ಉರಿಯುವ ಹಗಲು ಸುರಿಯುವ ಮುಗಿಲು ಎಲ್ಲಕು ತವರೇ ನೀನು ನೀನಲ್ಲ ಬರಿ ದೇಹ, ದೇಹಕೆ ಹುಟ್ಟುವ ದಾಹ ನೀರಿಗೆ ನಾರಿಗೆ ಸಲ್ಲದ ದಾರಿಗೆ ಸೂರೆಹೋಗುವ ಮೋಹ...

ಸಂಜೆ ಹಣ್ಣಾಗಿ ಬಿಸಿಲು ಹೊನ್ನಾಗಿ

ಸಂಜೆ ಹಣ್ಣಾಗಿ ಬಿಸಿಲು ಹೊನ್ನಾಗಿ ಕರಿಮುಗಿಲು ತುದಿ ಮಿಂಚಿ ಜರಿಸೀರೆಯಾಗಿ ನೀಲಿ ನೀರಲಿ ತೇಲಿ ಚಂದ್ರಾಮ ಬಂದ ಬಸವಳಿದ ಲೋಕಕ್ಕೆ ಹೊಸ ಚೆಲುವ ತಂದ ಕಣ್ಣು ಹಾರಿಸಿ ಸೊಕ್ಕಿ ನಕ್ಕವೋ ಚುಕ್ಕಿ ನಭದಲ್ಲಿ ತೇಲಿದವು...

ನಂಬೋ ನೀ ಮೊದಲು

ನಂಬೋ ನೀ ಮೊದಲು - ನಂಬಲು ನೀನಾಗುವೆ ಬದಲು; ನಂಬದ ಬಾಳೇ ಕಂಬನಿ ಕಡಲು ತನಗೆ ತಾನೆ ಉರುಳು. ನಂಬದೆ ಹೋದರೆ ಚಿಂತಿಲ್ಲ ಕಾಣದ ದೈವವನು; ನಂಬದಿದ್ದರೂ ಏನಂತೆ ಜಾಣರ ಧರ್ಮವನು; ನಂಬದೆ ಹೇಗೆ...

ಸಾವಿರ ನೇತ್ರದ ಸಾವಿರ ಪಾತ್ರದ

ಸಾವಿರ ನೇತ್ರದ ಸಾವಿರ ಪಾತ್ರದ ಸಹಸ್ರಶೀರ್ಷ ಪುರುಷನೆ ನೀ ಸಾವಿರ ದನಿಗಳ ಗಾನದ ಮೇಳಕೆ ಆಧಾರದ ಶ್ರುತಿಯಾಗಿಹೆ ನೀ ಸಾಗುತ್ತಿರೆ ದೊರೆ ನೀ ರಥದಲ್ಲಿ ಬೆಳುದಿಂಗಳ ಹೊಳೆ ಹರಿಯುವುದು, ನಿನ್ನ ಮೈಯ ಆಭರಣಗಳಾಗಿ ಚಿಕ್ಕೆ...

ಕಟ್ಟಿದ್ದೇನು ಕುಣಿದಿದ್ದೇನು!

ಕಟ್ಟಿದ್ದೇನು ಕುಣಿದಿದ್ದೇನು ಸಿಂಗರಿಸಿದ್ದು ಅದೇನು! ಒಂದೇ ದಿನದ ಮಂಗಕುಣಿತಕ್ಕೆ ಹಡೆ ವೈಯಾರ ಅದೇನು! ಆರತಿ ಬಂತು, ಅಕ್ಷತೆ ಬಿತ್ತು ಉಘೇ ಉಘೇ ಜನ ಘೋಷ, ನಂದೀಕೋಲು ನೂರು ಹಿಲಾಲು ಕುಣಿತ ಕೇಕೆ ಆವೇಶ. ಭಜನೆ...

ನಾನು ನಾನೆಂಬ ಹಮ್ಮಿನಲಿ ಬೀಗಿ

ನಾನು ನಾನೆಂಬ ಹಮ್ಮಿನಲಿ ಬೀಗಿ ಸುಮ್ಮನೇ ನವೆದೆ ಅಜ್ಞಾನಿಯಾಗಿ ಎಲ್ಲೆಲ್ಲು ನೀನೆ, ನಿನ್ನೊಲುಮೆ ಭಾನೇ ಲೋಕಕಾಸರೆ ಎಂದು ತಿಳಿಯದಾಗಿ ನನ್ನ ಕಣ್ಣೇ ಎಲ್ಲ ನೋಟಗಳಿಗೂ ಮೂಲ ಎಂಬ ಸೊಕ್ಕಿನೊಳಿದ್ದೆ ಇಲ್ಲಿವರೆಗೂ ಕಣ್ಣಿದ್ದರೂ ಏನು, ಕತ್ತಲಲಿ...
cheap jordans|wholesale air max|wholesale jordans|wholesale jewelry|wholesale jerseys