ನಡೆದಿದೆ ಪೂಜಾರತಿ ವಿಶ್ವದೇಹಿಗೆ
- ಒಪ್ಪಿಕೊ ಪರಾಭವ! - January 14, 2021
- ಕದನ ವಿರಾಮದ ಮಾತು - January 7, 2021
- ಶವಪರೀಕ್ಷೆ - December 31, 2020
ನಡೆದಿದೆ ಪೂಜಾರತಿ ವಿಶ್ವದೇಹಿಗೆ ನಭದ ನೀಲ ತಳಿಗೆಯಲ್ಲಿ ಚುಕ್ಕಿ ಚೆಲ್ಲಿವೆ, ರವಿ ಚಂದಿರ ನೀಲಾಂಜನ ಜ್ವಲಿಸಿ ಉರಿದಿವೆ ಚಂದನವನ ಚಾಮರ ಬೀಸುತಲಿದೆ ಪರಿಮಳ, ಭೂಕಂಠದಿ ಹೊಮ್ಮಿದೆ ಹಕ್ಕಿ ಕಲರವ ಕೋಟಿ ಕೋಟಿ ಗಿಡಮರ ಚಿತ್ರಾಂಕಿತ ಕಂಬ ರಾಶಿರಾಶಿ ಬಣ್ಣದ ಹೂ ತಾಳಿ ಮೈಯ ತುಂಬ ಸಾಗಿದೆ ದಿನದಿನವೂ ನೀರವಧ್ಯಾನ ಸತ್ಯರೂಪಿ ಶಿವನಿಗೆ ಭಕ್ತಿಯ ನಮನ. *****