Home / ಪದಗಳೊಂದಿಗೆ ನಾನು

Browsing Tag: ಪದಗಳೊಂದಿಗೆ ನಾನು

ನನ್ನ ನಲ್ಲ ಹಮ್ಮುಬಿಮ್ಮಿನ ಒಡೆಯ ನಾ ನಕ್ಕರೂ ನಗಲಾರ ಬಿಗುಮಾನಕ್ಕೆ ಅವನೇ ಪತಿ ಸತಿಯಲ್ಲಿ ಅಕ್ಕರೆಯ ಸಕ್ಕರೆಯ ಪಾಕ ತೋರಿಕೆಗೆ ಮಾತ್ರ ಜಂಭದ ವಿವೇಕ ಸೋಗು ನುಡಿಗಾರನಲ್ಲ ಮರಳು ಮಾತುಗಾರನಲ್ಲ ನಿಷ್ಠುರತೆಯ ಕಟು ವ್ಯಕ್ತಿ ನೇಮಗಾರ ಹುಟ್ಟುಗುಣಗಳು ಕೆಲ...

ತೂತುಗಳನ್ನೆ ಹೊದ್ದ ಗಾರೆಗಲ್ಲಿನ ಬಂಧಿಖಾನೆಗೂ ಕಳೆಕಟ್ಟಿದೆ. ಮೃದು ಮಧುರ ಹಸ್ತವೊಂದರ ಇರುವು ನಿರ್ಜೀವ ವಸ್ತುವೊಂದನ್ನು ಜೋಪಾನ ಮಾಡಿದ ಆನಂದ ಕಟಕಟೆಯ ಗೋಡೆಗೆ. ನಿರ್ಜೀವತೆಗೂ ಜೀವ ಭಾವವ ಬೆಸೆದ ಹುರುಪು ಹಸ್ತಕ್ಕೆ. ಕಲ್ಪನೆಯ ವ್ಯಾಪ್ತಿ ಸೀಮಾತೀತ....

ಎದೆಯೊಳಗೆ ಬೆಂಕಿ ಬಿದ್ದರೂ ಜಪ್ಪಯ್ಯ ಎನ್ನದೇ ನಗುವ ಮುಖಗಳ ಕಂಡಾಗಲೆಲ್ಲಾ ನನ್ನಲ್ಲಿ ಕನಿಕರದೊಂದಿಗೆ ಉಕ್ಕುವ ತಳಮಳ ನಾನೊಬ್ಬಳೆ ಅಲ್ಲ ನನ್ನ ಸುತ್ತಲೂ ಹತ್ತಾರು ಪಾತ್ರಗಳು ನವಿಲುಗರಿ ಪೋಣಿಸಿಕೊಂಡು ಡಂಭ ಬಡಿಯುವ ಕೆಂಬೂತಗಳು ಹಾದು ಹೋಗುತ್ತಿವೆ. ಒ...

ನನಗೆ ನೀನು ಇಂದಿಗೂ ಒಗಟು ಬಿಡಿಸಲಾಗದ ಕಗ್ಗಂಟು ಯಾಕೆ ನಲ್ಲ? ನನ್ನಲ್ಲಿ ಬಯಲಾಗದ ಹಠ ಒಳಗೆ ತುಡಿತ ಮಿಡಿತ ತೋರಿಕೆಗೆ ಯಾಕೆ ಹಿಂದೆಗೆತ? ಮನಬೆರೆತರೂ ಬೆರೆಯದಂತೆ ಒಲಿದರೂ ಒಲಿಯದಂತೆ ನೀನೆಕೆ ಪದ್ಮಪತ್ರದಂತೆ? ಹಸಿವು ನನಗೂ ನಿನಗೂ ಇಬ್ಬರಿಗೂ ಉಸಿರು ...

ಅಲ್ಲಿ ನೆತ್ತರಿನ ಸ್ನಾನ ಮಾಂಸದಂಗಡಿಯೇ ಪುಣ್ಯಸ್ಥಾನ ಕೈಯಲ್ಲಿ ಕೋವಿ ಕರದ ಆಭರಣ ವ್ಯತಿರಿಕ್ತ ವ್ಯಾಖ್ಯಾನ ಧರ್ಮಕ್ಕೆ ನೀಡುವರು ಕುಲಬಂಧು ಬಾಂಧವರ ಕೊಚ್ಚಿ ಕೆಡವಿಹರು ಅವರು ಬೀಜಾಸುರರೇ ಇಲ್ಲ ರಕ್ತ ಪಿಪಾಸುಗಳೇ ತಿಗಣಿ, ಸೊಳ್ಳೆ ಉಂಬಳಿಗಿಂತ ನೇಚ್ಯ ...

ಬಿಕ್ಕಳು ತಾಯಿ ಶರಧಿಯಾಳದಿ ಮುಖ ಹುಗಿಸಿ ಕಣ್ಣೀರ ಕೋಡಿ ಹಗುರ ಹೊರೆ ಸಾಗರ ಗರ್ಭ ಉಕ್ಕಿ ಸಿಡಿದು ಈಗ ನೀರನೊರೆ ಕೆನೆಕೆನೆಯ ಲಾಲಾರಸವಲ್ಲ, ಅದು ಲಾವಾ ಉಗುಳುತ್ತಿದೆ ಬೆಂಕಿ ಕೆಂಡ. ತಾಯ್ತನದ ಹಿರಿಮೆಯೆ ಹಾಗೆ ತನ್ನ ಇರಿದು, ಮುರಿದು, ಇಂಚು ಇಂಚು ಭಂಗ...

ಸೃಷ್ಟಿಯಾ ಕುಶಲತೆಗೆ ದೃಷ್ಟಿಯಾ ಪರಿಣತಿಯೂ ಬುವಿಭಾನು ಖಗಮಿಗದ ಅಖಂಡ ಕುಟೀರ. ಹೊಳೆಯೂರ ರಹದಾರಿ ಹರಿಯುವಳು ಕರಿಕಾಳಿ ಇಕ್ಕೆಲದ ವೃಕ್ಷನೆಲೆ ಮುಂಗಟ್ಟೆ ಪಕ್ಷಿಕಾಶಿ. ಮಲೆನಾಡ ವಿಪಿನದೊಳು ಒಕ್ಕೊರಲ ಗಟ್ಟಿದನಿ ಕಪ್ಪು ಬಿಳಿ ಕೆಂಪು ಬೂದು ಬಗೆಬಗೆಯ ವರ...

ಅದೊಂದು ಗಿಜಿಗಿಜಿ ಗೂಡು ಗಲಿಬಿಲಿ, ಗದ್ದಲ, ಅವಸರ ಧಾವಂತ ಪರಿಪರಿಯ ಪದಗಳಿಗೂ ಮೀರಿದ ಗಡಿಬಿಡಿ ಹತ್ತುವವರು, ಇಳಿಯುವವರು ಮಿಸ್ಸಾದವರು, ಮಿಸ್ಸು ಮಾಡಿಕೊಂಡವರು ತೆರೆದ ಪರದೆಯ ಮೇಲೆ ಚಿತ್ರದಂತೆ ಪಾಪಕ್ಕೆ ಹುಟ್ಟಿದ ಪಾಪು ಪಲ್ಲಟಗೊಂಡ ಬದುಕಿನ ಪುಟ್ಟ...

ದಾರಿಯುದ್ದಕ್ಕೂ ಚಡಪಡಿಕೆ ಪಕ್ಕಕ್ಕೆ ಪ್ರಾಕಿನ ಅಜ್ಜ ದೂರ ಸರಿಯುವ ಬಯಕೆ ಆತ ನಗುತ್ತಿದ್ದಾನೆ, ಬೊಚ್ಚು ಬಾಯಗಲಿಸಿ ಮತ್ತದು ತಂಬಾಕು ಸೋನೆ ವಾಸನೆ ಕವಳ ಪೀಕು ಆ ಕಣ್ಣುಗಳಲ್ಲಿ ಹಸಿವು ಪ್ರಾಯದ ಬಯಕೆ, ಯಯಾತಿಯೇ ಇರಬೇಕು ಸುಕ್ಕುಗಟ್ಟಿದ ಚರ್ಮದ ಒಳಗೂ ...

ಸುತ್ತದಿರಿ ಸಂಕೋಲೆ ಅಂಗಾಂಗಗಳ ಮೇಲೆ ಹಾರಲಿ ಅವಳು ನಿಮ್ಮಂತೆ ಮುಗುದೆ. ಸ್ವಚ್ಛಂದತೆಯ ಆನಂದ ಪಡೆಯಲಿ ಬಿಡಿ ಇರಲಿ ಅವಳಿಗೂ ಕೊಂಚ ಎಡೆ ನತ್ತಿನಲಿ ಮೂಗುತಿ ಕಾಲಲ್ಲಿ ಉಂಗುರ ಖಡುಗ ಕೈಯಲ್ಲಿ ಬಳೆ ತಲೆಗೆ ಮಲ್ಲಿಗೆಯ ದಂಡೆ ತಾಲೀಮು ತಂಗಿಗೆ ಹುಟ್ಟುತ್ತಲ...

1234...6

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...