ವಸಾಹತು ಸಾಮ್ರಾಜ್ಯ

ಅಡ್ಡಡ್ಡಲ್ಲ ಉದ್ದುದ್ದಾಗಿ ತಲೆ ಅಲುಗಾಡಿಸುತ್ತಲೇ ಇರಬೇಕು ನಿಲ್ಲಿಸಿದರೆ ಬಂತು ಬೆತ್ತ. ‘ಪಾಪ! ಇವಳೆಷ್ಟು ಮುಗ್ಧೆ’ ಹಾಗೇಽ ಇರಬೇಕು ಮಾತನಾಡಿದರೆ ಮುರಿದುಬೀಳುತ್ತವೆ ಹಲ್ಲು. ಕಣ್ಣಿಗೆ ರೆಪ್ಪೆ ಬಂದಂತೆ ನಟಿಸಬೇಕು ವರ್‍ಣಿಸಿದರೆ ಬಾಸುಂಡೆಗಳು. ಇವನೊಬ್ಬನ ಮಾತುಗಳೇ ವೇದವಾಕ್ಯಗಳು...

ಬಂತಿದೋ ಸಂಕ್ರಾಂತಿ

ಇದು ಉತ್ತರಾಯಣದ ಪುಣ್ಯಕಾಲ ಚಳಿಯಿಂದೆದ್ದ ಸೂರ್‍ಯ ಮಗ್ಗಲು ಹೊರಳಿಸಿ ಹೊದಿಕೆ ಸರಿಸಿ ಬಿರುಸು ಹೆಜ್ಜೆ ಇಟ್ಟು ಉದ್ದುದ್ದ ಕೋಲು ಚೆಲ್ಲುತ ಬರುವ ಸಂಕ್ರಾಂತಿ ಕಾಲ- ಚಳಿಯ ಬೀಡಿ ಹೊರಗೆಸೆದು ಎಳೆ ಬಿಸಿಲು ಹೀರಲು ಹೊರಬಾಗಿಲು...

ಮುಖವಾಡಗಳು

ಜನ್ಮ ಜನ್ಮಾಂತರದ ಶಾಪ ನಿಮಗಂಟಿದೆ ಬೇಡವೆ ನಿಮಗೆ ಪರಿಹಾರ? ನೋಡಿಲ್ಲಿ ನೋಡಲ್ಲಿ ಮೃತ್ಯುವಿನ ದೂತ ಕಾಯುತಿರುವ ನಿಮ್ಮ ಮನೆಯ ಮುಂಬಾಗಿಲು ಹಿಂಬಾಗಿಲು- ಶಕುನ ಜಾತಕ ಜ್ಯೋತಿಷಿಗಳು ಕಾಲಜ್ಞಾನಿ ಸಂಖ್ಯಾಶಾಸ್ತ್ರ ವಾಸ್ತುದವರು ದಿನ ಬೆಳಗಾದರೆ ಗಂಟಲು...

ಚೌಕಾಬಾರದಾಟ

ಹಗಲೆಲ್ಲ ದೃಶ್ಯಕಾವ್ಯ ಮುಖಾಮುಖಿ ಮಾತು ಚಲಾವಣೆ ಮನೆ ಸಂತೆಪೇಟೆ ರಾಜಕೀಯ ಕಾಡುಮೇಡು ಆಕಾಶ ಸಮುದ್ರದವರೆಗೆ ದುಡಿದು ಬೆವರಿಳಿಸಿದವರ ಅರೆಹೊಟ್ಟೆಮಾತು ಬಿರಿದ ಹೊಟ್ಟೆಯವರ ಭ್ರಷ್ಟಾಚಾರದ ಮಾತು ಹೃದಯಮಾತಿಗೆಲ್ಲಿ ದೃಶ್ಯಕಾವ್ಯ. ರಾತ್ರಿಗೆ ಕತ್ತಲೆಕಾವ್ಯ ರಾತ್ರಿರಾಣಿಯರ ಗೋಳಾಟದ ಕಥೆ...

ಲಯ

ಸೃಷ್ಟಿ ಚೈತನ್ಯಮೂಡಿ ಕಣಕಣವೂ ಚಿಗುರೊಡೆದು ಮೈತುಂಬಾ ಬಂಗಾರ ಹುಡಿ ಅಂಕುಡೊಂಕು ಗುಡ್ಡ ಬೆಟ್ಟ ಕೊಳ್ಳಗಳ ಗೋಜಲು ಗದ್ದಲಗಳ ದಾಟಿ ಸುಳಿದಾಡಿ ನಿರುಮ್ಮಳ ಹರಿವ ಜೀವನ್ಮುಖಿ ಹೊಲಗದ್ದೆ ಹಸಿರು ಹೂಗಳ ಮೇಲೆಲ್ಲ ಇಬ್ಬನಿ ಕೋಶ ಒಡೆದು...

ಅಪ್ಸರೆಯ ಅಳಲು

ಚಿತ್ತ ಚಿತ್ತಾರದ ಭಾವಭಂಗಿಯಲಿ ಸೆಳವಿಗೆದುರಾಗಿ ಬಿಂಕಬಿನ್ನಾಣಗಳಲಿ ಸುಳಿದಾಡಿ ಮೇಲೇರಿ ಇಳಿಜಾರಕೆ ತೇಲಿಬಿದ್ದು ಒಡಲಾಳಸೇರಿ ಕ್ಷಣಾರ್ಧದಲಿ ನೆಗೆದು ತನ್ನೊಳಗೇ ಸ್ವರ್‍ಗ ಇಳಿಸಿಕೊಂಡು ಕಣ್ಮನ ಸೆಳೆವ ಅಪ್ಸರೆ ಹಂಗಿನರಮನೆಯ ಅಕ್ವೇರಿಯಂನೊಳಗೆ ಹೊರಳಾಟ ಶುದ್ಧನೀರು ಗಾಳಿ ಉದುರಿಸಿದ ಪುಡಿಯೂಟ...

ಮನಸೇಽ

ಗೊಂದಲಗೂಡು ನರಕಸದೃಶ ವಿಷಾನಿಲದಿಂದಾವೃತ್ತ ಭೂಮಂಡಲ ಮಧ್ಯದೊಳು ಶಾಂತಿಬಯಸಿ ಮುಕ್ತಿಹುಡುಕುತ ಸುಳಿದಾಡಿ ಸುತ್ತಿ ಬಸವಳಿಯುವ ಮನಸೇ ಸುಮ್ಮನೊಮ್ಮೆ ಕೂಡು ಸಮುದ್ರದಂಡೆಯ ಮೇಲೆ ಕಣ್ಣಾಡಿಸು ಸುತ್ತಮುತ್ತೆಲ್ಲ ಮರಳು ಚಿಪ್ಪು ವಿಶಾಲ ಸಮುದ್ರದಲೆಗಳು ನೋಡು ದೂರದಿಗಂತದೆಡೆಗೆ ಸೂರ್‍ಯ ನಕ್ಕು...

ಕಡಲಗರ್‍ಭ

ಕಡಲಬಸಿರು ನೋಡುವ ಆಸೆಕಣ್ಗಳು- ತನ್ನವೇ ಐದಾರು ಬಸಿರು ನೆಲಕ್ಕುರುಳಿ ಬೆಳೆದು ನೀರಿಗಿಳಿದು ಜಾಲರಿ ತುಂಬಿ ತುಂಬಿ ಮೀನುಗಳ ತರುವ ಮಕ್ಕಳ ನೋಡಿ ನಕ್ಕಾಕೆ... ಬೆಂಕಿಯ ನಾಲಿಗೆಗೆ ಸಿಕ್ಕು ಸುಟ್ಟ ಮೀನುಗಳಿಗೆ ಅತ್ತಾಕೆ.... ಕತ್ತಲಕಾಯಕಕೆ ಬೆತ್ತಲಾಗಿ...

ಜೋಳಿಗೆ

ಮಳೆಯಜೋಳಿಗೆ ಹರಿದುಬಿತ್ತಿಲ್ಲಿ ಹಿಡಿತಕೆ ಸಿಗದೆ ಸವೆದ ಬಟ್ಟೆಯೊಳಗಿಂದ ದೇವನ ಮಳೆಯ ಜೋಳಿಗೆ ಹರಿದುಬಿತ್ತಿಲ್ಲಿ. ಕಪ್ಪು ಕಡುರಾತ್ರಿಗೆ ಊಹಿಸದ ಹಳ್ಳಹೊಳೆಗಳ ನೆರೆತೊರೆ ಒಡ್ಡುಗಳು ಒಡೆದೋಡುವ ಹುಚ್ಚು ರಭಸ ಹಾದಿಬೀದಿಗಳಿಗೂ ನಡುಕ ಕ್ಷಣಕ್ಷಣಕೂ ದ್ವೀಪಗಳಾಕೃತಿ. ದಿಕ್ಕುತಪ್ಪಿತೆಲ್ಲೊ ಚೀತ್ಕಾರ...

ನೆನಪಿಸಿಕೊಳ್ಳಬೇಕವರನ್ನೊಮ್ಮೆ

೧ ಸುತ್ತಿ ಸುರುಳಿಗಟ್ಟಿ ಮದೋನ್ಮತ್ತದೊಳು ಸೊಕ್ಕಿ ಹೆಣೆದು ಬಿಗಿದಪ್ಪಿ ನಿರ್ಭಯದೊಳು ಆಕಾಶಕ್ಕೇರಿ ಸೂರ್ಯನನ್ನೊಳಗೆ ಬಿಟ್ಟುಕೊಳ್ಳದ ಪಚ್ಚೆ ಹಸಿರಿನ ಛತ್ರ ಚಾಮರಗಳ ಪಿಸುನುಡಿಗೆ ಮೈ ಬೆವೆತರೂ ಮೆರೆಯುವ ದಟ್ಟ ಕಾನನ ಸುರಿಸುರಿವ ಮಳೆ ಸೊಲ್ಲಿಲ್ಲ ಸೂರಿಲ್ಲ...