ನಿನ್ನ ನೆತ್ತಿಗೆ ಛತ್ರ ಹಿಡಿದು ಹೊರಗಿನ ಮಂದಿ- ಯೆದುರು ಗೌರವ ಮೆರೆದರದು ನನಗೆ ಲಾಭವೇ? ಸುಸ್ಥಿರ ಭವಿಷ್ಯ ಜೀವನಕೆಂದು ಅಡಿಪಾಯ ಹಾಕುವುದು ವ್ಯರ್‍ಥ ಎಂದೇನು ನಾ ಅರಿಯೆನೆ ? ಸರಳನಡೆ ನೀಗಿ, ಆಡಂಬರಕೆ ಬಲಿ...
ಕಡಲಬಸಿರು ನೋಡುವ ಆಸೆಕಣ್ಗಳು- ತನ್ನವೇ ಐದಾರು ಬಸಿರು ನೆಲಕ್ಕುರುಳಿ ಬೆಳೆದು ನೀರಿಗಿಳಿದು ಜಾಲರಿ ತುಂಬಿ ತುಂಬಿ ಮೀನುಗಳ ತರುವ ಮಕ್ಕಳ ನೋಡಿ ನಕ್ಕಾಕೆ... ಬೆಂಕಿಯ ನಾಲಿಗೆಗೆ ಸಿಕ್ಕು ಸುಟ್ಟ ಮೀನುಗಳಿಗೆ ಅತ್ತಾಕೆ.... ಕತ್ತಲಕಾಯಕಕೆ ಬೆತ್ತಲಾಗಿ...