ಜಗದ ಕಾವಲುಗಾರ ನಿದ್ರಿಸಿದ್ದಾನೆ- ಕುಂಭಕರ್ಣನಂತೆ! ಇಲ್ಲಿಗೆ ಯಾರೂ ಬರಬಹುದು ಇಲ್ಲಿಂದ ಯಾರೂ ಹೋಗಬಹುದು ಇಲ್ಲಿ ಏನೂ ನಡೆಯಬಹುದು ಕಾವಲುಗಾರ ನಿದ್ರಿಸಿದ್ದಾನೆ- ಕುಂಭಕರ್ಣನಂತೆ! ಕನ್ನ ಹಾಕಬಹುದು, ಎಲ್ಲ ದೋಚಬಹುದು ಕೊಚ್ಚಿ ಹಾಕಬಹುದು ದಂಗೆ ಎಬ್ಬಿ...

ಎಷ್ಟೊ ಸಲ ನುಡಿಸಿರುವೆ ನೀ ಪಿಯಾನೋವನ್ನ, ಏನದರ ಭಾಗ್ಯವೇ ಚಿನ್ನ! ಎರಡೂ ಬದಿಗೆ ನೀ ತೂಗಿ ಮೈಯ, ಸರಿಸಲು ಬೆರಳು ಸಾಲನ್ನ ಸಂಭ್ರಾಂತಿ ನನಗೆ ಸುರಿಯುವ ಜೇನುದನಿಮಳೆಗೆ. ಎತ್ತಿದೆಯೊ ಬೆರಳ, ಚಂಗನೆ ನೆಗೆದು ಅಂಗೈಯ ಮುತ್ತಿಡುವ ಸ್ವರದ ಕೀ ಮನೆಗಳ ಅದೃಷ...

ಕಳ್ಳರ ಕೂಟ ಪ್ರಥಮ ಪರಚ್ಛೇದ ರಾತ್ರಿ ಸುಮಾರು ಹೆತ್ತು ಗಂಟೆಯಾಗಿರಬಹುದು. ಎಲ್ಲರೂ ಮಲಗಿದ್ದಾರೆ. ಯಾರ ಮನೆಯಲ್ಲೂ ದೀಪವಿಲ್ಲ. ಕತ್ತಲಿನ ಚೀಲ ದಲ್ಲಿ ಕೂಡಿಟ್ಟಿದ್ದರೆ ಇರುವಂತೆ ಹಳ್ಳಿಯೆಲ್ಲಾ ನಿಶ್ಚಬ್ದವಾಗಿದೆ. ಛತ್ರದ ಮಗ್ಗುಲಲ್ಲಿರುವ ತೋಪಿನ ನಡು...

ಸೃಷ್ಟಿ ಚೈತನ್ಯಮೂಡಿ ಕಣಕಣವೂ ಚಿಗುರೊಡೆದು ಮೈತುಂಬಾ ಬಂಗಾರ ಹುಡಿ ಅಂಕುಡೊಂಕು ಗುಡ್ಡ ಬೆಟ್ಟ ಕೊಳ್ಳಗಳ ಗೋಜಲು ಗದ್ದಲಗಳ ದಾಟಿ ಸುಳಿದಾಡಿ ನಿರುಮ್ಮಳ ಹರಿವ ಜೀವನ್ಮುಖಿ ಹೊಲಗದ್ದೆ ಹಸಿರು ಹೂಗಳ ಮೇಲೆಲ್ಲ ಇಬ್ಬನಿ ಕೋಶ ಒಡೆದು ಹೊರಬಂದ ಚಿಟ್ಟೆ ರೆಕ್...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....