Home / Kannada Poetry

Browsing Tag: Kannada Poetry

ಬೇಲಿಯೆದ್ದು ಹೊಲವ ಮೆದ್ದು ಹೋಯಿತಂತೆ ಕಂಡಿರ? ಗೂಳಿಯೆತ್ತು ಥರವೆ ಇತ್ತು ಮೆಲ್ಲುತಿತ್ತು ನೋಡಿದೆ ರಾತ್ರಿಯೆಲ್ಲ ತಿಂದಿತಲ್ಲ ಸದ್ದು ನಿಮಗೆ ಕೇಳಿತೆ? ಹೊಡೆದು ಡುರುಕಿ ಮಣ್ಣು ಕೆದಕಿ ಕೂಗುತ್ತಿತ್ತು ಕೇಳಿದೆ ಬತ್ತ ಹುರುಳಿ ಕಬ್ಬು ಕದಳಿ ಎಲ್ಲ ತಿಂ...

ಕಗ್ಗತ್ತಲ ಭೇದಿಸಲೊಂದು ಬಿಸಿಲ ಕೋಲು ಉಸಿರಾಡಲು ಒಂದಿಷ್ಟು ಗಾಳಿ ಇನ್ನೇನು ಬೇಕು? ಕಚ್ಚಲೊಂದು ಬಣ್ಣದ ಚೆಂಡು ಚಚ್ಚಲೊಂದು ಮರದ ಕುದುರೆ ಇನ್ನೇನು ಬೇಕು? ಬರೆಯಲೊಂದು ಮಣಿಕಟ್ಟಿನ ಸ್ಲೇಟು ಬತ್ತಾಸು ಕೊಳ್ಳಲು ಆರು ಕಾಸು ಇನ್ನೇನು ಬೇಕು? ಕಣ್ಣಿಗೆ ಹ...

ಜಗತಿನಲ್ಲಿ ಈಗ ಎಲ್ಲಿ ಯಾರೇ ಅಳುತ್ತಿರಲಿ, ಕಾರಣವಿಲ್ಲದೆ ಅಳುತ್ತಿದ್ದರೆ, ನನಗಾಗಿ ಅಳುತಿದ್ದಾರೆ. ಜಗತ್ತಿನಲ್ಲಿ ಈಗ ಎಲ್ಲಿ ಯಾರೇ ನಗುತ್ತಿರಲಿ, ಕಾರಣವಿಲ್ಲದೆ ನಗುತ್ತಿದ್ದರೆ, ನನ್ನ ಕಂಡು ನಗುತ್ತಿದ್ದಾರೆ. ಜಗತಿನಲ್ಲಿ ಈಗ ಎಲ್ಲಿ ಯಾರೇ ಹೋಗುತ...

ಭಾಗ-೧ ಒಮ್ಮೆ ಒಂದು ಮರಿಪಿಶಾಚಿ ಊರ ಸುತ್ತಲದಕೆ ತೋಚಿ ಪೊಟರೆಯಿಂದ ಇಳಿಯಿತು ಧೈರ್ಯದಿಂದ ನಡೆಯಿತು ನಡೆದು ನಡೆದು ಬರಲು ಕೊನೆ ಬಿತ್ತು ಕಣ್ಣಿಗೊಂದು ಮನೆ ಬಾಗಿಲಿಗೆ ಬೀಗವಿತ್ತು ಕಿಟಕಿ ಮಾತ್ರ ತೆರದೆ ಇತ್ತು ಅರೆ! ಎಂದು ಮರಿಪಿಶಾಚಿ ಇಣುಕಿತಲ್ಲಿ ಕ...

ಮರುಳ… ‘ಕುಡಿ’ಹಣ್ಣೆಂದು ಮೆಟ್ಟಿದೆಯಾ? ಹೆಂಗೂಸೆಂದು ಅಟ್ಟಿದೆಯಾ? ನಾನು ತಾಯಿಯಲ್ಲ ನಾನು ಹೆಂಡತಿಯಲ್ಲ ನಾನು ಮಗಳಲ್ಲ ತೊಲಗಾಚೆ ಇನ್ನು ನಾ ನಿನ್ನ ಪೊರೆವವಳಲ್ಲ… ನಾನು ಮಮತಯಲ್ಲ ನಾನು ಸಹನೆಯಲ್ಲ ನಾನು ಶಾಂತಿಯಲ್ಲ ತೊಲಗಾಚೆ ಇನ್ನು ...

ಏಕಾಂತವು ಮಳೆಯಂತೆ. ಸಂಜೆ ಹೊತ್ತಿನಲ್ಲಿ ಸಮುದ್ರದ ಕಡೆಯಿಂದ ನಮ್ಮ ಭೇಟಿಗೆ ಬರುವುದು. ದೂರ ತುಂಬ ದೂರದ ಬಯಲಲ್ಲಿ ಹಬೆಯಾಗಿ ಆಕಾಶಕ್ಕೇರುವುದು, ಏರುವುದು ತನ್ನ ಹಕ್ಕು ಅನ್ನುವಂತೆ. ಅಲ್ಲಿಂದ ಬಂದು ಊರಿನ ಮೇಲೆ ಸುರಿಯುವುದು. ಮಬ್ಬು ಕತ್ತಲ ವೇಳೆಯಲ...

ಏನಂತಿ ವಾಸಂತಿ ಬಾ ನನ್ನ ಕೂಡೆ ಸಂತಿ ತಲೆ ತುಂಬ ಸೇವಂತಿ ಮುಡಿಸುವೆನು ಏನಂತಿ ದೂರದ ಹಾದಿಯಲ್ಲ ಯಾರದು ಭೀತಿಯಿಲ್ಲ ಸಾಗೋಣ ಮೆಲ್ಲ ಮೆಲ್ಲ ವಾಸಂತಿ ವಾಸಂತಿ ಏನಂತಿ ರೂಪವಂತಿ ಬಳೆಯಂಗಡಿಯುದ್ದಕು ಎಷ್ಟೊಂದು ಬಣ್ಣ ಬೆಳಕು ಯಾವ ಕೈಗೆ ಏನು ಬೇಕು ವಾಸಂತಿ...

ಕರೇ ಮನುಷ್ಯಾ ದಿಗಿಲು ಯಾಕ? ಮಲ್ಲಿಗೆ ಹುಡುಗಿ ಒಲಿದಾಳ ನಿನಗ ಕಣ್ಣನಾಗ ಚಿಕ್ಕಿ ಬಳಗ ಸುರಗಿ ಕ್ಯಾದಗಿ ಎದೆಯಾ ಒಳಗ ಹಾಡೊ ಕೋಗಿಲ ಕೂಳ್ಳಿನ ಕೆಳಗ ಆಡೊ ನವಿಲು ಹೆಜ್ಜೆಯ ತಳಗ ಬೆಂಕಿಯ ದೇಹಾ ಮಣ್ಣಿನ ಜೀವ ನದಿಯ ಭಾವ ಕಲ ಕಲ ಕಲ ಕಲ… ಕತ್ತಿ ನಾಲ...

ಅವಳಿಗೆ ಯವಾಗಲೂ ಚಿಂತೆ : ‘ನಾನು… ನಾನು…’ ‘ಯಾರು ನೀನು ಮರಿಯಾ?’ ‘ನಾನು ರಾಣಿ | ನಾನು ರಾಣಿ | ನಮಸ್ಕಾರ ಮಾಡಿ | ಹ್ಞೂ, ಮೊಳಕಾಲೂರಿ!’ ಅವಳಿಗೆ ಯಾವಾಗಲೂ ಅಳು : ‘ನಾನು … ನಾನು…’ ‘ನೀನ ಯಾರು ಮರಿಯಾ?’ ‘ಅಪ್ಪ ಗೊತ...

ಕೋಳಿ ಕೂಗುವ ಮುನ್ನ ಯಾರು ಕರೆದರು ನನ್ನ ಹೇಳು ಮನಸೇ ಹೇಳು ಕತೆಯ ನಿನ್ನ ಗುರುತು ಪರಿಚಯವಿರದ ದೇಶದಲಿ ನಾನಿರಲು ಯಾರು ಬಯಸಿದರಿಂದು ನನ್ನ ಕಾಣಲೆಂದು ಯಾರೆಂದು ನೋಡಿದರೆ ಬಾಗಿಲಲಿ ಯಾರಿಲ್ಲ ಎಲ್ಲಿ ಹೋದರು ಅವರು ನನ್ನ ಕರೆದವರು ಬೆಳಕಿನ್ನು ಹರಿದಿಲ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...