ಕೆಟ್ಟಿರುವೆನು ನಾನು

ಕೆಟ್ಟಿರುವೆನು ನಾನು ಗೊತ್ತು ನನಗೆ ಇದು ಸತ್ಯ ಕಾರಣ ಬಲ್ಲ ನೀನು ಕಾಡುವುದೆ ಹೀಗೆ ನಿತ್ಯ //ಪ// ಕಣ್ಣಲ್ಲಿ ಕವಿತೆ ಬರೆದು ಬುದ್ದಿಯನು ಅಳಿಸಿಹೆ ಅದರಲ್ಲಿ ದೂರ ಒಯ್ದು ಭಾವವನು ಬೆಳೆಸಿಹೆ ಇಂತಹ ನೂರು...

ಸಮುದ್ರದಾ ಮ್ಯಾಗೆ

ಸಮುದ್ರದಾ ಮ್ಯಾಗೆ ಅಲೆಗಳು ಎದ್ದಾವೋ ಎದ್ದು ಬಂದು ನಿನ್ನ ಮುಟ್ಟಿದವೊ| ಕನ್ನಡತಿ ಪಾದಗಳ ಮೇಲೇರಿ ಮರಳಿದವೋ| ನಿನ್ನ ಪಾದಗಳ ಮೇಲೇರಿ ಮರಳಿದವೋ //ಪ// ಹೊಂಬಾಳೆಗಳು ತೂಗಿ ಬನದ ಬಾಳೆಯು ಬಾಗಿ ತಂಪಾದ ಹೂಗಾಳಿ ಬೀಸಿದವೊ|...

ಪುಸ್ತಕದ ಕವಿತೆಗಿಂತ

ಪುಸ್ತಕದ ಕವಿತೆಗಿಂತ - ನಿನ್ನ ಕಣ್ಣು ಬರೆವ ಕವಿತೆ ಚೆಂದ ಅದ ಬರೆದುಕೊಂಡೆ ನನ್ನ ಎದೆಯಲ್ಲಿ ಅದಕಾಗಿ ಕವಿಯಾದೆ ನಿನ್ನ ಋಣದಲ್ಲಿ /ಪ// ನೂರು ಹಾಡು ಕೇಳಿರುವೆ ನಾನು ನಿನ್ನ ಮಾತು ಅದ ಮರೆಸಿದೆ...

ಕರುಣೆಯಿಲ್ಲವೆ ನಿನಗೆ ನನ್ನ ಮೇಲೆ

ಕರುಣೆಯಿಲ್ಲವೆ ನಿನಗೆ ನನ್ನ ಮೇಲೆ ನಿದ್ರೆ ಕೊಡದೆ ನನ್ನ ನೀನು ಕಾಡುವೆಯಲ್ಲೆ ಯಾಕೆ ಏನು ಎಷ್ಟು ಕಾಲ ನನಗೆ ಈ ನೆಲೆ? ಹೃದಯವಿದ್ದರೆ ಉಳಿಸು ಅಥವಾ ಕೊಲ್ಲು ಇಲ್ಲೆ /ಪ// ಹಗಲು ರಾತ್ರಿಗಿರುವ ಬೇಧ...

ಹೊರನಾಡೆಂಬುದು ಹೊರನಾಡಲ್ಲ

ಹೊರನಾಡೆಂಬುದು ಹೊರನಾಡಲ್ಲ; ವರನಾಡು ಚೆಲುವಿನ ದೇವತೆ ವರ ನೀಡಿರುವ ಸಿರಿನಾಡು ಇದುವೇ ವರನಾಡು; ಸೃಷ್ಟಿಯ ಹೊರನಾಡೆನಿಸಿಹ ವರನಾಡು /ಪ// ತೆಂಗಿನ ಮರಗಳು ಕಂಗಿನ ಮರಗಳು ತಲೆದೂಗುತಿಹ ಚೆಲುನಾಡು ಬೆಳ್ಳಿಯ ಮೋಡವು ಹಸುರಿನ ಬೆಟ್ಟವ ಚುಂಬಿಸುತಿರುವ...

ನಾ ಹೇಳಲಾರೆ

ನಾ ಹೇಳಲಾರೆ ನಾ ನಿನ್ನ ಪ್ರೀತಿಸುವೆ ಅರಿಯುವುದಾದರೆ ಅರಿ, ಇಲ್ಲವೆ ಇರಿ //ಪ// ನಾ ನೋಡುತಿರುವ ಈ ಮಳೆಬಿಲ್ಲು ಬಾಗಿ ಹೇಳಿಲ್ಲವೆ ನನ್ನ ಪ್ರೀತಿ ನಾ ಆಡುತಿರುವ ಈ ಹೊಸ ಸೊಲ್ಲು ಕೇಳಿದೆಯೆ ಬರಿ...

ಎಂಥ ಚೆಂದ ನಿನ್ನ ರೂಪು

ಎಂಥ ಚೆಂದ ನಿನ್ನ ರೂಪು ಭುವನೇಶ್ವರಿ ಕಣ್ಣು ತುಂಬಿ ತುಳುಕುತೈತೆ ನಿನ್ನೈಸಿರಿ /ಪ// ಹಸಿರು ಬಳ್ಳಿ ಮುಡಿಯಲ್ಲಿರೊ ದುಂಡು ಮಲ್ಲಿಗೆ ಚಿಗುರು ಎಲೆಯ ಮರೆಯಲ್ಲಿರೊ ಕೆಂಡ ಸಂಪಿಗೆ ನಿನ್ನ ರೂಪು ತೋರುತೈತೆ ಗಂಧ ಬೀರುತ್ತ...

ಹಳ್ಳ ಇರುವ ಕಡೆಗೆ ನೀರು ಹರಿವುದು

ಹಳ್ಳ ಇರುವ ಕಡೆಗೆ ನೀರು ಹರಿವುದು ನಾನು ನಿನ್ನ ಕಡೆಗೆ ಯಾಕೆ ಹರಿವುದು! //ಪ// ಮುಚ್ಚಿದರೂ ಕಣ್ಣು ಅಲ್ಲಿ ತೂರುವೆ ಬಚ್ಚಿಟ್ಟುಕೊಂಡು ಒಳಗೆ ಆಟವಾಡುವೆ ಇದು ನನ್ನ ತಪ್ಪೆ ಹೇಳು ನನ್ನ ನಲ್ಲೆ ನಾ...

ಹುಡುಕಾಟವೋ . . . ಹುಡುಗಾಟವೋ

ಹುಡುಕಾಟವೋ . . . ಹುಡುಗಾಟವೋ . . . ಹುಡುಗಾಟವೋ . . . ಕೊನೆಗೆ ಎಣಗಾಟವೋ . . . //ಪ// ಇಲ್ಲಿ ಯಾವುದೂ ಸರಿಯಲ್ಲ ಅದ ಹೇಳುವುದೂ ಸರಿಯಲ್ಲ ಹೇಳದಿರುವುದೂ...

ಎಲ್ಲವೂ ಸಂಭವ

ಎಲ್ಲವೂ ಸಂಭವ ಯಾವುದೂ ಅಲ್ಲ ಅಸಂಭವ //ಪ// ಮನುಷ್ಯನಾಗಿ ಹುಟ್ಟಿರುವಾಗ ನೆಲದ ಮೇಲೆ ನಡೆದಾಡಿರುವಾಗ ಉಪ್ಪು ಖಾರ ತಿಂದಿರುವಾಗ ಮೈಯಲಿ ರಕ್ತ ಬಿಸಿಯಿರುವಾಗ..... ಮಾವು ಬೇವು ಮೆದ್ದಿರುವಾಗ ನಲಿವೊಂದೆ ಅಂತಿಮವೇನು? ಎಳ್ಳು ಬೆಲ್ಲ ತಿಂದ...