Home / Anand Hebbalu

Browsing Tag: Anand Hebbalu

ದೇವರು ವರವನು ಕೊಟ್ಟರೂ ನಾನು ಬೇಡೆನು ಎನನೂ ಸಾಕು ನೀ ನನಗಿನ್ನು| ಬೇಡುವುದಾದರೆ ಬೇಡುವೆ ದೇವರ ಸೃಷ್ಟಿಸದಿರುವಂತೆ ನಿನಗಿಂತ ಬೇರೆ ಯಾವ ಚೆಲುವೆಯನು|| ದೇವರ ವರವನು ಬೇಡುವೆ ನಾನು ನಿನ್ನಂದವ ನೋಡುತ ಕಾಲ ಕಳೆಯಲು ಹಗಲು ಸಮಯವ ಹೆಚ್ಚಿಸು ಎಂದು| ನೀ...

ಅವ್ವ ಹತ್ತು ತಿಂಗಳು ಹೊತ್ತು ಹೆತ್ತಾಕೆ | ಅವ್ವ ಅನೇಕ ಕಷ್ಟಗಳ ನುಂಗಿ ನಡೆದಾಕೆ | ಅವ್ವ ಅಪ್ಪನ ಎಲ್ಲವನೂ ಸಹಿಸಿಕೊಂಡಾಕೆ|| ಅವ್ವ ಈ ಸಮಾಜಕ್ಕೆ ಅಂಜಿ ನಡೆದಾಕೆ| ಅವ್ವ ಈ ನೆರೆಹೊರೆಯವರ ನೆಚ್ಚಿನಾಕೆ| ಅವ್ವ ಹರಿದ ಸೀರೆಯ ಗಂಟಿಕ್ಕಿ ಉಟ್ಟು ಕೂಲಿಮ...

ಅತ್ತು ಅತ್ತು ಏಕೆ? ಕಣ್ಣ ನೀರಲಿ ಕೈಯ ತೊಳೆವೆ| ಪ್ರಕೃತಿಯ ನಿಯಮ ಮೀರಿ ಇಲ್ಲಿ ಏನು ನಡೆಯದು|| ನಾವು ಪ್ರಕೃತಿಯನರಿತು ಬಾಳಿದರೇ ನೋವ ಸಹಿಸಬಹುದು|| ಹುಟ್ಟು ಖಚಿತ ಸಾವು ನಿಶ್ಚಿತ ಎಂಬಂತೆ, ನಮ್ಮ ನೆರಳು ನಮ್ಮ ನೆಚ್ಚಿ ಬರುವಂತೆ ನೋವು ಸಹ ಸದಾ ಸುತ...

ಅಧಿಪತಿಯು ನೀನೇ ಅಂತಿಜನಾಭನೇ ಎನ್ನಾಧಿಪತಿಯು ನೀನೇ| ನೀ ಕೈಯ ಬಿಟ್ಟರೆ ಅಧಃಪತನು ನಾನೇ ಅಕಳಂಕ ಚರಿತನೆ ಕೈಬಿಡದೆನ್ನನು ಕಾಪಾಡೊ ಹರಿಯೇ|| ನನ್ನ ಇತಿಯು ನೀನೇ ಮತಿಯು ನೀನೇ ಗತಿ ಕಾಣಿಸುವ ಸ್ಮೃತಿಯು ನೀನೇನೇ| ನನ್ನ ಪಾಪಪುಣ್ಯದ ಫಲಾನುಫಲ ನೀನೇ ನನ್...

ಬದುಕು ಇದು ಹೀಗೆ ಅದರ ರೀತಿಯೇ ಹಾಗೆ|| ಯಾರ ಮಾತ ಕೇಳದದು ತನ್ನಂತೆ ತಾನೇ ನಡೆವುದು|| ಏನಿರಲಿ ಇಲ್ಲದಿರಲಿ ಯಾರಿರಲಿ ಇಲ್ಲದಿರಲಿ ಸಾಗುತಲಿ ಹೀಗೆ| ಸುಖ ದುಃಖವನು ಸಮನಾಗಿ ನೀಡುತಲಿ|| ಹಿರಿಯರಿರಲಿ ಕಿರಿಯರಿರಲಿ ಭೇದ ಭಾವವ ತೊರದು| ಹಣವಂತನೆ ಆಗಲಿ ...

ಇರು ನೀನು ಇಲ್ಲದಿರು ನೀನು ಸುತ್ತುವೆ ನಿನ್ನಗುಡಿಯ| ಕೊಡು ನೀನು ಕೊಡದಿರೂ ನೀನು ಎಂದೆಂದಿಗೂ ನೀನೇ ನನ್ನೊಡೆಯ|| ಸೃಷ್ಟಿಸಿರುವೆ ಈ ಸುಂದರ ಜಗವ ಕೊಟ್ಟಿರುವೆ ಈ ಎರಡು ಕೈಗಳ ಕೊಡು ನೀನು ಸದಾ ಧರ್ಮಮಾರ್ಗದಿ ದುಡಿದು ಉಣ್ಣುವಾ ಛಲವ|| ಕೊಟ್ಟಿರುವೆ ಹ...

ಅಪರಾಧಿಗಲ್ಲವೇ ಶಿಕ್ಷೆ? ನಿರಪರಾಧಿಗಳಿಗೇತಕೆ ಶಿಕ್ಷೆ| ಮಾಡಿದ ತಪ್ಪಿಗಲ್ಲವೆ ದಂಡ ನೋಡಿದ ಸತ್ಯಕೇತಕೆ ದಂಡ|| ಮನುಜ ಅಧರ್ಮದಿ ನಡೆದು ತನ್ನ ಸ್ವಾರ್ಥಸಾದನೆಗೆ ಏನಬೇಕಾದರು ಮಾಡುವನು ಹೇಗೆ ಬೇಕಾದರು ಸುಳ್ಳ ಹೇಳುವನು| ಧರ್ಮದಿ ಬದುಕುವ ಜನರ ಬಲಿಪಶುವ...

ಏಕಿಷ್ಟು ದೂರ ಮಾಡಿದೆ ಎನ್ನ ಸಣ್ಣದೊಂದು ಮಾತಿಗೆ| ನಮ್ಮ ಮಧುರ ಪ್ರೀತಿಯನೇ ಮರೆತುಬಿಟ್ಟೆಯಾ ನನ್ನೊಂದು ಹುಸಿ ಪಿಸುಮಾತಿಗೆ|| ನೀನು ಎಷ್ಟಾದರೂ…ಹೇಗಾದರೂ ತಮಾಷೆ ಮಾಡಿ ನಗಬಹುದು | ನೀನು ಏನಾದರು ಅನ್ನಬಹುದು ನನ್ನಮೇಲೆ| ಆದರೆ ನಾನು ಮಾತ್ರ ...

ಅಂದುಕೊಳ್ಳುವುದೊಂದು ಆಗುವುದು ಮತ್ತೊಂದು| ಆಸೆಪಡುವುದೊಂದು ನಿರಾಸೆ ತರುವುದಿನ್ನೊಂದು|| ಮನ ಬಯಸುವುದೊಂದು ವಿಧಿ ನೀಡುವುದಿನ್ನೊಂದು| ಹೀಗೆಯೇ ಜೀವನ ಆ ವಿಧಿಯ ವಿದಿವಿಧಾನ| ಅದರೂ ಭಯಪಡದೆ ಬಾಳಸಾಗಿಸಬೇಕು ಗುರಿ ಸಾಧಿಸುವ ಛಲವಿರಬೇಕು|| ದೇವರು, ಧ...

ಬಾರೋ ವಸಂತ ಬಾರೋ || ಬರಿದಾದ ಈ ಮನಕೆ ಮುದವ ನೀ ನೀಡಲು| ಬಾರೋ ವಸಂತ ಬಾರೋ ಈ ವಸುಂಧರೆಯ ನವ ವಧುವಾಗಿಸೆ ರೇಷಿಮೆ ನವ ವಸ್ತ್ರವಾಗವಳ ಸಿಂಗರಿಸೆ|| ಕಾದಿರುವೆ ನಿನಗಾಗೆ ಹಂದರವ ಅಣಿಮಾಡಿ| ಆಲಿಸಲು ಕುಳಿತಿರುವೆ ಕೋಗಿಲೆಯ ಗಾನ ಇಂಚರವ, ಹೂ ದುಂಭಿಗಳ ಝ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...